ಹೊಸನಗರದಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆಗಾಗಿ ನಗರ ನಿತಿನ್ ಉಪವಾಸ ಸತ್ಯಾಗ್ರಹ: ಬಾಣಂತಿ ಸುಮಾ ಸಾವಿಗೆ ನ್ಯಾಯಕ್ಕಾಗಿ ಸರ್ಕಾರಕ್ಕೆ ಆಗ್ರಹ!

Add a heading 20260718 211149 0000 ಹೊಸನಗರದಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆಗಾಗಿ ನಗರ ನಿತಿನ್ ಉಪವಾಸ ಸತ್ಯಾಗ್ರಹ: ಬಾಣಂತಿ ಸುಮಾ ಸಾವಿಗೆ ನ್ಯಾಯಕ್ಕಾಗಿ ಸರ್ಕಾರಕ್ಕೆ ಆಗ್ರಹ!
Spread the love

ಹೊಸನಗರ: ಹೊಸನಗರ ತಾಲ್ಲೂಕಿನಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ಸ್ಥಾಪಿಸಬೇಕು ಹಾಗೂ ಇತ್ತೀಚೆಗೆ ಸೂಕ್ತ ಚಿಕಿತ್ಸೆ ಸಿಗದೆ ಮೃತಪಟ್ಟ ಕೋಡೂರು ಗ್ರಾಮದ ಬಾಣಂತಿ ಸುಮಾ ಅವರ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ನಗರ ನಿತಿನ್ ಅವರು ಶನಿವಾರ ಹೊಸನಗರ ಸಾರ್ವಜನಿಕ ಆಸ್ಪತ್ರೆ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

  ಈ ವೇಳೆ ಮಾತನಾಡಿದ ಅವರು, ರಾಜ್ಯದ ಅತಿ ದೊಡ್ಡ ಭೌಗೋಳಿಕ ವಿಸ್ತೀರ್ಣ ಹೊಂದಿರುವ ಹೊಸನಗರ ತಾಲ್ಲೂಕು ಹಲವು ಸರ್ಕಾರಿ ಯೋಜನೆಗಳಿಗಾಗಿ ಭೂಮಿ ಕಳೆದುಕೊಂಡು ಅಭಿವೃದ್ಧಿಗೆ ಕೊಡುಗೆ ನೀಡಿದ್ದರೂ, ಇಂದಿಗೂ ಸುಸಜ್ಜಿತ ಹೆರಿಗೆ ಆಸ್ಪತ್ರೆಯ ಕೊರತೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಹೆರಿಗೆಗೆ ಸಂಬಂಧಿಸಿದ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಶಿವಮೊಗ್ಗ, ಸಾಗರ, ತೀರ್ಥಹಳ್ಳಿ ಸೇರಿದಂತೆ ಪಕ್ಕದ ತಾಲ್ಲೂಕುಗಳ ಆಸ್ಪತ್ರೆಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಇದ್ದು, ಸಮಯಕ್ಕೆ ಚಿಕಿತ್ಸೆ ಸಿಗದೆ ಅಮೂಲ್ಯ ಜೀವಗಳು ಕಳೆದುಹೋಗುತ್ತಿರುವುದು ಅತ್ಯಂತ ದುಃಖಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚೆಗೆ ಹೊಸನಗರ ತಾಲ್ಲೂಕಿನ ಕೊಡೂರು ನಿವಾಸಿ ಬಾಣಂತಿ ಸುಮ ಅವರು ಸೂಕ್ತ ಚಿಕಿತ್ಸೆ ದೊರೆಯದೇ ಮೃತಪಟ್ಟಿರುವ ಘಟನೆ ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

image editor output image1772319726 17843894552649027039494632391216 ಹೊಸನಗರದಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆಗಾಗಿ ನಗರ ನಿತಿನ್ ಉಪವಾಸ ಸತ್ಯಾಗ್ರಹ: ಬಾಣಂತಿ ಸುಮಾ ಸಾವಿಗೆ ನ್ಯಾಯಕ್ಕಾಗಿ ಸರ್ಕಾರಕ್ಕೆ ಆಗ್ರಹ!


ಸತ್ಯಾಗ್ರಹದ ವೇಳೆ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಹೊಸನಗರ ತಾಲ್ಲೂಕಿಗೆ ಸುಸಜ್ಜಿತ ಹೆರಿಗೆ ಆಸ್ಪತ್ರೆ ಹಾಗೂ ಅಗತ್ಯ ತಜ್ಞ ವೈದ್ಯರನ್ನು ನೇಮಿಸುವುದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವೈದ್ಯರು ಮತ್ತು ಸಿಬ್ಬಂದಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡುವುದು, ಬಾಣಂತಿ ಸುಮ ಅವರ ಕುಟುಂಬಕ್ಕೆ ಪರಿಹಾರ ನೀಡುವುದು ಹಾಗೂ ಕೊಡಚಾದ್ರಿ ಪ್ರವಾಸಿ ಮಾರ್ಗದ ಕಟ್ಟಿನಹೊಳೆ ಪ್ರದೇಶದಲ್ಲಿ 24×7 ತುರ್ತು ಚಿಕಿತ್ಸಾ ಆಂಬುಲೆನ್ಸ್ ಸೇವೆ ಆರಂಭಿಸುವಂತೆ ಸರ್ಕಾರ ಈ ಬೇಡಿಕೆಗಳನ್ನು ಶೀಘ್ರ ಈಡೇರಿಸಿ ಹೊಸನಗರ ತಾಲ್ಲೂಕಿನ ಜನರ ಆರೋಗ್ಯ ಹಕ್ಕನ್ನು ಕಾಪಾಡಬೇಕು ಎಂದು ನಗರ ನಿತಿನ್ ಆಗ್ರಹಿಸಿದರು.

ಬಳಿಕ ಸತ್ಯಾಗ್ರಹದ ಮನವಿಯನ್ನು ಇನ್‌ಚಾರ್ಜ್ ಟಿಎಚ್‌ಓ ಶಾಂತರಾಜ್ ಅವರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಜೇಶ್ ಹಿರಿಮನೆ, ಎಸ್. ಉಮೇಶ್, ಕೃಷ್ಣಮೂರ್ತಿ, ಮಂಜುನಾಥ್ ಬೇಳೂರು, ಸಚಿನ್, ಸುರೇಂದ್ರ, ಪ್ರಕಾಶ್ ರಾವೆ, ಉಮೇಶ್ ಕಾಡಿಗೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *