ರಿಪ್ಪನ್ ಪೇಟೆ: ಕರ್ನಾಟಕದ ಪ್ರಸಿದ್ಧ ಜೈನರ ಪುಣ್ಯ ಕ್ಷೇತ್ರವಾದ ಸಮೀಪದ ಹೊಂಬುಜ ಜೈನ ಮಠದಲ್ಲಿ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ಸಮ್ಮುಖದಲ್ಲಿ ಮಾರ್ಚ್ 9 ರಂದು ನಾಗವಾಹನೋತ್ಸವ, 10 ಕ್ಕೆ ಸಿಂಹವಾಹನೋತ್ಸವ, 11 ರಂದು ಬೆಳ್ಳಿ ರಥೋತ್ಸವ ಮತ್ತು ಪುಷ್ಪ ರಥೋತ್ಸವ, 12 ರಂದು ಮಹಾ ರಥೋತ್ಸವ ಮತ್ತು 13 ಕ್ಕೆ 108 ಕಲಶಗಳ ಮಹಾಭಿಷೇಕ ,14 ರಂದು ಕುಂಕುಮೋತ್ಸವ ಧ್ವಜಾವರೋಹಣ ಕಾರ್ಯಕ್ರಮ ನಡೆಯಲಿದೆ.

11 ರಂದು ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಪ್ರೋ.ಶಾಂತಿನಾಥ ದಿಬ್ಬದ ಅವರಿಗೆ ಸಿದ್ಧಾಂತ ಕೀರ್ತಿ ಪುರಸ್ಕಾರ ಕಾರ್ಯಕ್ರಮಗಳು ನಡೆಯಲಿದೆ ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

















Leave a Reply