ಹೊಸನಗರ ತಾಲೂಕಿನಲ್ಲಿ ಜೂನ್ 20 ರಿಂದ ಅಕ್ಟೋಬರ್ 7ರವರೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ತಹಶೀಲ್ದಾರ್

Screenshot 20260607 200522 Canva ಹೊಸನಗರ ತಾಲೂಕಿನಲ್ಲಿ ಜೂನ್ 20 ರಿಂದ ಅಕ್ಟೋಬರ್ 7ರವರೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ತಹಶೀಲ್ದಾರ್
Spread the love
img 20260110 wa00001878350141417642006 ಹೊಸನಗರ ತಾಲೂಕಿನಲ್ಲಿ ಜೂನ್ 20 ರಿಂದ ಅಕ್ಟೋಬರ್ 7ರವರೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ತಹಶೀಲ್ದಾರ್

ಹೊಸನಗರ: ಭಾರತ ಚುನಾವಣಾ ಆಯೋಗ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಹೊಸನಗರ ತಾಲ್ಲೂಕಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಜೂನ್ 20ರಿಂದ ಅಕ್ಟೋಬರ್ 7ರವರೆಗೆ ನಡೆಯಲಿದೆ ಎಂದು ಹೊಸನಗರ ತಹಶೀಲ್ದಾರ್ ಭರತ್‌ರಾಜ್ ತಿಳಿಸಿದ್ದಾರೆ.

ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸನಗರ ತಾಲ್ಲೂಕಿನಲ್ಲಿ 114-ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ 62 ಮತಗಟ್ಟೆಗಳು ಹಾಗೂ 117-ಸಾಗರ ವಿಧಾನಸಭಾ ಕ್ಷೇತ್ರದ 70 ಮತಗಟ್ಟೆಗಳು ಸೇರಿ ಒಟ್ಟು 132 ಮತಗಟ್ಟೆಗಳಿವೆ ಎಂದರು.
114-ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ 22,986, ಮಹಿಳೆ 23,440 ಸೇರಿ ಒಟ್ಟು 46,426 ಮತದಾರರಿದ್ದು, ಇದರಲ್ಲಿ ಈಗಾಗಲೇ 43,994 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ. ಶೇ. 94.76ರಷ್ಟು ಸಾಧನೆ ಆಗಿದ್ದು, ಇನ್ನೂ 2,432 ಮತದಾರರ ಮ್ಯಾಪಿಂಗ್ ಬಾಕಿಯಿದೆ ಎಂದು ತಿಳಿಸಿದರು.
ಅದೇ ರೀತಿ 117-ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ 27,502, ಮಹಿಳೆ 28,217 ಸೇರಿ ಒಟ್ಟು 55,719 ಮತದಾರರಿದ್ದು, ಈಗಾಗಲೇ 51,304 ಮತದಾರರ ಮ್ಯಾಪಿಂಗ್ ಮಾಡಲಾಗಿದೆ. ಶೇ. 92.08ರಷ್ಟು ಸಾಧನೆ ಆಗಿದ್ದು, ಇನ್ನೂ 4,415 ಮತದಾರರ ಮ್ಯಾಪಿಂಗ್ ಬಾಕಿಯಿದೆ ಎಂದು ಹೇಳಿದರು.
ಬಾಕಿ ಉಳಿದ ಮತದಾರರ ಮ್ಯಾಪಿಂಗ್ ಪೂರ್ಣಗೊಳಿಸಲು ಬಿಎಲ್‌ಓಗಳ ನೇತೃತ್ವದಲ್ಲಿ ಜೂನ್ 20ರಿಂದ 29ರವರೆಗೆ ತರಬೇತಿ, ಸಿದ್ಧತೆ ಮತ್ತು ಮುದ್ರಣ ಕಾರ್ಯ ನಡೆಯಲಿದೆ. ಜೂನ್ 30ರಿಂದ ಜುಲೈ 29ರವರೆಗೆ ಮನೆ-ಮನೆ ಭೇಟಿ ಮೂಲಕ ಪರಿಶೀಲನೆ ನಡೆಯಲಿದ್ದು, ಜುಲೈ 29ರಂದು ಮತಗಟ್ಟೆ ತರ್ಕಬದ್ಧತೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಆಗಸ್ಟ್ 5ರಂದು ಮತದಾರರ ಕರಡು ಪಟ್ಟಿ ಪ್ರಕಟವಾಗಲಿದ್ದು, ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಸಾರ್ವಜನಿಕರಿಂದ ದೂರು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತದೆ. ಅಕ್ಟೋಬರ್ 3ರೊಳಗೆ ಅರ್ಜಿಗಳ ಪರಿಶೀಲನೆ ಮತ್ತು ವಿಲೇವಾರಿ ನಡೆಸಿ, ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಈ ಕಾರ್ಯಕ್ಕೆ ತಾಲೂಕಿನ ಎಲ್ಲಾ ಮತದಾರರು ಸಹಕರಿಸುವಂತೆ ತಹಶೀಲ್ದಾರ್ ಮನವಿ ಮಾಡಿದರು.

img 20260528 wa00288740209534505316820 ಹೊಸನಗರ ತಾಲೂಕಿನಲ್ಲಿ ಜೂನ್ 20 ರಿಂದ ಅಕ್ಟೋಬರ್ 7ರವರೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ತಹಶೀಲ್ದಾರ್

ಸುದ್ದಿಗೋಷ್ಠಿ ಬಳಿಕ  ರಾಜಕೀಯ ಪಕ್ಷಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಮ್ಯಾಪಿಂಗ್ ಕಾರ್ಯದ ಕುರಿತು ಮಾಹಿತಿ ನೀಡಲಾಯಿತು.

img 20260604 wa00391237144010064521808 ಹೊಸನಗರ ತಾಲೂಕಿನಲ್ಲಿ ಜೂನ್ 20 ರಿಂದ ಅಕ್ಟೋಬರ್ 7ರವರೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ: ತಹಶೀಲ್ದಾರ್

Leave a Reply

Your email address will not be published. Required fields are marked *