ಗದ್ದೆಯಿಂದ ಗರ್ಭಗುಡಿಗೆ-ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ವಿಶಿಷ್ಟ ಧಾರ್ಮಿಕ-ಕೃಷಿ ಅಭಿಯಾನ| ಕೊಳವಂಕದಲ್ಲಿ ಸೋದೆ ಶ್ರೀಗಳ ಐತಿಹಾಸಿಕ ಪಾದಯಾತ್ರೆ

Add a heading 20260713 121932 0000 ಗದ್ದೆಯಿಂದ ಗರ್ಭಗುಡಿಗೆ-ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ವಿಶಿಷ್ಟ ಧಾರ್ಮಿಕ-ಕೃಷಿ ಅಭಿಯಾನ| ಕೊಳವಂಕದಲ್ಲಿ ಸೋದೆ ಶ್ರೀಗಳ ಐತಿಹಾಸಿಕ ಪಾದಯಾತ್ರೆ
Spread the love

ರಿಪ್ಪನ್ ಪೇಟೆ : ದೇಶದ ಗಡಿಯನ್ನು ಕಾಯುವ ಯೋಧರಂತೆ ರೈತರೂ ದೇಶದ ಯೋಧರು. ಪ್ರತಿಯೊಬ್ಬ ರೈತ ವಿಷಮುಕ್ತ ಆಹಾರ ಬೆಳೆಯುವ ಮೂಲಕ ಸಮಾಜದ ಆರೋಗ್ಯ ಕಾಪಾಡಬೇಕು. ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸುವ ಶುದ್ಧ ನೈವೇದ್ಯದ ಮೂಲಕ ರೈತನ ಬೆಳೆ ಭಗವಂತನ ಸೇವೆಯಾಗಿ ಪರಿವರ್ತನೆಯಾಗಲಿದೆ” ಎಂದು ಸೋದೆ ಶ್ರೀಗಳು ಹೇಳಿದರು.

ಕೊಳವಂಕದ ರಾಮಪ್ಪನಸರದಲ್ಲಿ ಸಾವಯವ ರೈತ ಗಿರೀಶ್ ಅವರ ಸ್ವಗೃಹದಲ್ಲಿ ನಡೆದ ಶುದ್ಧ ನೈವೇದ್ಯ ಸಮರ್ಪಣಂ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ನಿಜವಾದ ಅಭಿವೃದ್ಧಿ ಎಂದರೆ ದೇಶದ ಆಹಾರ ಭದ್ರತೆಯನ್ನು ಬಲಪಡಿಸುವುದು. ಬರಗಾಲ ಅಥವಾ ಸಂಕಷ್ಟದ ಸಂದರ್ಭಗಳಲ್ಲಿಯೂ ದೇಶದ ಜನತೆಗೆ ವಿಷಮುಕ್ತ ಆಹಾರ ದೊರೆಯುವಂತೆ ಮಾಡುವುದು ಪ್ರತಿಯೊಬ್ಬ ರೈತನ ಕರ್ತವ್ಯ ಎಂದು ಹೇಳಿದರು.

image editor output image 609304212 1783923178610445752196977250216 ಗದ್ದೆಯಿಂದ ಗರ್ಭಗುಡಿಗೆ-ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ವಿಶಿಷ್ಟ ಧಾರ್ಮಿಕ-ಕೃಷಿ ಅಭಿಯಾನ| ಕೊಳವಂಕದಲ್ಲಿ ಸೋದೆ ಶ್ರೀಗಳ ಐತಿಹಾಸಿಕ ಪಾದಯಾತ್ರೆ


ದೇಶದ ಆಹಾರ ಭದ್ರತೆಯನ್ನು ಬಲಪಡಿಸುವುದು ಮತ್ತು ವಿಷಮುಕ್ತ ಆಹಾರ ಉತ್ಪಾದನೆಗೆ ರೈತರನ್ನು ಪ್ರೇರೇಪಿಸುವ ಉದ್ದೇಶದಿಂದ ಆರಂಭಿಸಿರುವ ‘ಗದ್ದೆಯಿಂದ ಗರ್ಭಗುಡಿಗೆ – ಶುದ್ಧ ನೈವೇದ್ಯ ಸಮರ್ಪಣಂ’ ಯೋಜನೆಯ ಅಂಗವಾಗಿ ಉಡುಪಿ ಸೋದೆ ವಾದಿರಾಜ ಮಠದ ಪೂಜ್ಯ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೊಸನಗರ ತಾಲೂಕಿನ ಕೊಳವಂಕದಲ್ಲಿ ಪಾದಯಾತ್ರೆ ನಡೆಸಿ ರೈತರಲ್ಲಿ ಜಾಗೃತಿ ಮೂಡಿಸಿದರು.

20260712 1529065158764193968424262 ಗದ್ದೆಯಿಂದ ಗರ್ಭಗುಡಿಗೆ-ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ವಿಶಿಷ್ಟ ಧಾರ್ಮಿಕ-ಕೃಷಿ ಅಭಿಯಾನ| ಕೊಳವಂಕದಲ್ಲಿ ಸೋದೆ ಶ್ರೀಗಳ ಐತಿಹಾಸಿಕ ಪಾದಯಾತ್ರೆ



ಶ್ರೀಕೃಷ್ಣನಿಗೆ ಪ್ರತಿದಿನ ವಿಭಿನ್ನ ದೇಶಿ ಭತ್ತದ ತಳಿಗಳಿಂದ ನೈವೇದ್ಯ ಸಮರ್ಪಿಸುವ ‘ಶುದ್ಧ ನೈವೇದ್ಯ ಸಮರ್ಪಣಂ’ ಯೋಜನೆಯನ್ನು ಕೃಷಿ ಪ್ರಯೋಗ ಪರಿವಾರ ರೂಪಿಸಿದ್ದು, 2028–30ರ ಸೋದೆ ಪರ್ಯಾಯದಲ್ಲಿ ಈ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ಉದ್ದೇಶ ಹೊಂದಲಾಗಿದೆ.

20260712 1722307018268543803107733 ಗದ್ದೆಯಿಂದ ಗರ್ಭಗುಡಿಗೆ-ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ವಿಶಿಷ್ಟ ಧಾರ್ಮಿಕ-ಕೃಷಿ ಅಭಿಯಾನ| ಕೊಳವಂಕದಲ್ಲಿ ಸೋದೆ ಶ್ರೀಗಳ ಐತಿಹಾಸಿಕ ಪಾದಯಾತ್ರೆ
ಕೊಳವಂಕದ ಯುವರಾಜ ಎಂಬ ಯುವ ರೈತನ ಕಲೆಯಲ್ಲಿ ಮೂಡಿ ಬಂದ ಭೂಮಿ ಹುಣ್ಣಿಮೆ ಚಿತ್ತಾರ ಬುಟ್ಟಿ ವೀಕ್ಷಿಸಿ  ಸೋದೆ ಶ್ರೀಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.  ಸೋದೆ ಸಂಸ್ಥಾನವು ಈ ಕಲಾಕೃತಿಯನ್ನು ಉಡುಪಿ ಮಠದಲ್ಲಿ ಪ್ರದರ್ಶನಕ್ಕೆ ಇಡಲು ಅಪೇಕ್ಷೆ ಪಟ್ಟಾಗ ಕಲಾವಿದ ಯುವರಾಜ್ ಅವರು ಮತ್ತು ಕೆ ಟಿ ನಾರಾಯಣ ಅವರು ಅತ್ಯಂತ ಧನ್ಯತಾ ಭಾವದಿಂದ ಸೋದೆ ಶ್ರೀಗಳ ಮುಖೇನ ಮಠಕ್ಕೆ ಹಸ್ತಾಂತರಿಸಿದರು.

ಹೊಸನಗರ ತಾಲೂಕು ಒಂದರಲ್ಲೇ  36 ದೇಶಿ ಭತ್ತದ ತಳಿಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವ ರೈತರ ಸಮೂಹ ಕಾರ್ಯನಿರ್ವಹಿಸುತ್ತಿರುವುದು ಸಂತಸ ತಂದಿದೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಸಾವಯವ ಕೃಷಿಕರಿಗೆ ಸಮಾಜದಿಂದ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕಿದ್ದು, ರೈತರ ಬೆನ್ನಿಗೆ ಸಮಾಜ ನಿಲ್ಲಬೇಕು ಎಂದು ಕರೆ ನೀಡಿದರು.

20260712 1714145320463816075127378 ಗದ್ದೆಯಿಂದ ಗರ್ಭಗುಡಿಗೆ-ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ವಿಶಿಷ್ಟ ಧಾರ್ಮಿಕ-ಕೃಷಿ ಅಭಿಯಾನ| ಕೊಳವಂಕದಲ್ಲಿ ಸೋದೆ ಶ್ರೀಗಳ ಐತಿಹಾಸಿಕ ಪಾದಯಾತ್ರೆ

ಶ್ರೀಗಳ ಕರೆಗೆ ಸ್ಪಂದಿಸಿದ ಶಿವಮೊಗ್ಗ ವಾದಿರಾಜ ಶಿಷ್ಯವೃಂದ ಹಾಗೂ ದೈವಜ್ಞ ಬ್ರಾಹ್ಮಣ ಸಮಾಜದ ಸದಸ್ಯರು ಸೇರಿ 5 ಎಕರೆ ಪ್ರದೇಶದಲ್ಲಿ ಸಾವಯವ ಭತ್ತ ಬೆಳೆಯಲು ಪ್ರೋತ್ಸಾಹ ನೀಡುವುದಾಗಿ ಘೋಷಿಸಿದರು.
ಇದಕ್ಕೂ ಮುನ್ನ ಗ್ರಾಮಸ್ಥರು ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀಗಳನ್ನು ಬರಮಾಡಿಕೊಂಡರು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಕೃಷಿ ಪ್ರಯೋಗ ಪರಿವಾರದ ಚಕ್ಕೋಡಬೈಲು ಶ್ರೀವತ್ಸ ಮಾತನಾಡಿ, ‘ಬೊಗಸೆ ಭತ್ತ ಬೀಜ’ ಕಾರ್ಯಕ್ರಮದಡಿ ರೈತರು ಬೆಳೆಯುವ ಸಾವಯವ ಅಕ್ಕಿಯನ್ನೇ ಮುಂದಿನ ಸೋದೆ ಮಠದ ಪರ್ಯಾಯದಲ್ಲಿ ಪ್ರತಿದಿನ ಶುದ್ಧ ನೈವೇದ್ಯವಾಗಿ ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸಲಾಗುವುದು ಎಂದು ತಿಳಿಸಿದರು.

img 20260713 wa00097164054765835145544 ಗದ್ದೆಯಿಂದ ಗರ್ಭಗುಡಿಗೆ-ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ವಿಶಿಷ್ಟ ಧಾರ್ಮಿಕ-ಕೃಷಿ ಅಭಿಯಾನ| ಕೊಳವಂಕದಲ್ಲಿ ಸೋದೆ ಶ್ರೀಗಳ ಐತಿಹಾಸಿಕ ಪಾದಯಾತ್ರೆ
ರಿಪ್ಪನ್ ಪೇಟೆಯ ಶಿಷ್ಯವೃಂದವರು ಸೋದೆ ಶ್ರೀಗಳ ಆಶೀರ್ವಾದ ಪಡೆದರು.

ಕಾರ್ಯಕ್ರಮದಲ್ಲಿ ಹಾದಿಗಲ್ಲು ಲಕ್ಷ್ಮೀನಾರಾಯಣ, ಸರು ದಿನೇಶ್, ಅರುಣ್, ಆ. ಶ್ರೀ. ಆನಂದ, ಹನಿಯ ರವಿ, ಆರ್‌ಎಸ್‌ಎಸ್ ತಾಲೂಕು ಸಂಘಚಾಲಕ ಶ್ಯಾಮಸುಂದರ್, ಅವುಕ ರವೀಂದ್ರ,ಗಿರೀಶ್ ಕೊಳವಂಕ, ಕಿರಣ್ ಕರಡಿಗ, ದಾನೇಶ್ ಆಲುವಳ್ಳಿ ಸೇರಿದಂತೆ  ಇನ್ನಿತರರಿದ್ದರು. ಹಲವಾರು ಸಾವಯವ ರೈತರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಬೆಳ್ಳೂರು ವಸಂತ್ ಕುಮಾರ್ ನಿರೂಪಿಸಿದರು. ಕುಮುದ ಪ್ರಾರ್ಥಿಸಿದರು, ಕುಸುಗೋಡು ಧರ್ಮೇಂದ್ರ ಸ್ವಾಗತಿಸಿದರು ಹಾಗೂ ಯೋಗೇಂದ್ರ ವಂದಿಸಿದರು.

Leave a Reply

Your email address will not be published. Required fields are marked *