HOSANAGARA|ಬಂಟರ ಯಾನೆ ನಾಡವರ ಸಂಘದ ವತಿಯಿಂದ ಸಮಾಜ ಬಂಧುಗಳಿಗೆ ನೆರವು

Addaheading 20260903 200806 0000 HOSANAGARA|ಬಂಟರ ಯಾನೆ ನಾಡವರ ಸಂಘದ ವತಿಯಿಂದ ಸಮಾಜ ಬಂಧುಗಳಿಗೆ ನೆರವು
Spread the love

ಹೊಸನಗರ: ಬಂಟರ ಯಾನೆ ನಾಡವರ ಸಂಘ (ಹೊಸನಗರ ತಾಲ್ಲೂಕು) ವತಿಯಿಂದ ಆರ್ಥಿಕವಾಗಿ ಹಿಂದುಳಿದ ನಾಡವರ ಸಮುದಾಯದ ಬಡ ಕುಟುಂಬಗಳಿಗೆ ಮನೆ ನಿರ್ಮಾಣಕ್ಕಾಗಿ ತಲಾ ₹50,000 ಧನಸಹಾಯ ವಿತರಿಸಲಾಯಿತು.
  ಸಂಘದ ಅಧ್ಯಕ್ಷ  ದಿವಾಕರ್ ಶೆಟ್ಟಿ ಮಾತನಾಡಿ, ಸಮಾಜದ ಸೇವೆಗಾಗಿ ಸಂಘ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿ ನೆರವು ನೀಡುವ ಕೆಲಸ ಮಾಡುತ್ತಿದೆ ಎಂದರು.

3hnr2photo5918752353987043016 HOSANAGARA|ಬಂಟರ ಯಾನೆ ನಾಡವರ ಸಂಘದ ವತಿಯಿಂದ ಸಮಾಜ ಬಂಧುಗಳಿಗೆ ನೆರವು

  ಈ ಯೋಜನೆಯಡಿ ಮಾರಿಗುಡ್ಡದ ಕಲಾವತಿ ಮಂಜುನಾಥ್ ಶೆಟ್ಟಿ ಹಾಗೂ ಮಾರುತಿಪುರ ಹೋಬಳಿಯ ಹುಣಸೆಕೊಪ್ಪದ ಸಂಜೀವ ಶೆಟ್ಟಿ ಅವರಿಗೆ ಮನೆ ನಿರ್ಮಾಣಕ್ಕಾಗಿ ತಲಾ ₹50 ಸಾವಿರದ ಚೆಕ್ ವಿತರಿಸಲಾಯಿತು.

3hnr2photo8104038488997565816 HOSANAGARA|ಬಂಟರ ಯಾನೆ ನಾಡವರ ಸಂಘದ ವತಿಯಿಂದ ಸಮಾಜ ಬಂಧುಗಳಿಗೆ ನೆರವು

ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ಚಂದ್ರಶೆಟ್ಟಿ, ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಭರತ್ ಶೆಟ್ಟಿ, ಉಮೇಶ್ ಶೆಟ್ಟಿ, ರಾಮಣ್ಣ ಶೆಟ್ಟಿ, ನವೀನ್ ಶೆಟ್ಟಿ, ಮಹಿಳಾ ಸದಸ್ಯರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

file 000000003f5c8208a0b120fec3430d9d8669576548494949296 HOSANAGARA|ಬಂಟರ ಯಾನೆ ನಾಡವರ ಸಂಘದ ವತಿಯಿಂದ ಸಮಾಜ ಬಂಧುಗಳಿಗೆ ನೆರವು

Leave a Reply

Your email address will not be published. Required fields are marked *