ಸಾಗರದ ಉಳ್ಳೂರು ಗಂಗೋತ್ರಿ B.Ed ಕಾಲೇಜಿಗೆ NCTE ಮಾನ್ಯತೆ ಇಲ್ಲ|ಪ್ರವೇಶಾತಿ, ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟದ್ದು: ಕುವೆಂಪು ವಿವಿ ಕುಲಸಚಿವ ಪ್ರೊ.ತಿಮ್ಮರಾಯಪ್ಪ

Addaheading 20260828 191352 0000 ಸಾಗರದ ಉಳ್ಳೂರು ಗಂಗೋತ್ರಿ B.Ed ಕಾಲೇಜಿಗೆ NCTE ಮಾನ್ಯತೆ ಇಲ್ಲ|ಪ್ರವೇಶಾತಿ, ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟದ್ದು: ಕುವೆಂಪು ವಿವಿ ಕುಲಸಚಿವ ಪ್ರೊ.ತಿಮ್ಮರಾಯಪ್ಪ
Spread the love

ಶಂಕರಘಟ್ಟ: ಸಾಗರದ ಉಳ್ಳೂರಿನಲ್ಲಿರುವ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯಕ್ಕೆ 2023-24ನೇ ಸಾಲಿನಿಂದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್ ಸಿಟಿಇ) ಯ ಮಾನ್ಯತೆ ರದ್ದಾಗಿದ್ದು, ಮುಂಬರುವ ಶೈಕ್ಷಣಿಕ ಸಾಲಿನ ಬಿಇಡಿ ಕೋರ್ಸ್ ಗೆ ಪ್ರವೇಶ ಪಡೆಯುವುದು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟದ್ದು ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ತಿಮ್ಮರಾಯಪ್ಪ ತಿಳಿಸಿದ್ದಾರೆ.

  ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾಗರ ಗಂಗೋತ್ರಿ ಕಾಲೇಜು ಸಕಾಲದಲ್ಲಿ ಅರ್ಜಿ ಸಲ್ಲಿಸದೆ ಇರುವುದರಿಂದ 2023-24ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸಂಯೋಜನೆ ದೊರೆತಿರುವುದಿಲ್ಲ. 2024-24ನೇ ಸಾಲಿನಲ್ಲಿ ಎನ್ ಸಿಟಿಇ ಮಾನ್ಯತೆ ಇಲ್ಲವೆಂಬ ಕಾರಣದಿಂದ ಸಂಯೋಜನೆ ಸಿಕ್ಕಿರುವುದಿಲ್ಲ. ಇನ್ನು 2025-26 ಮತ್ತು 206-27ನೇ ಸಾಲಿನಲ್ಲಿ ಯುಯುಸಿಎಂಎಸ್ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ಸ್ಥಳೀಯ ತಪಾಸಣಾ ಸಮಿತಿಯ ಮುಖಾಂತರ ನಿಯಮಾನುಸಾರ ಸಂಯೋಜನಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ವಿವಿಯಿಂದ ಸಂಯೋಜನಾ ಆದೇಶ ಪಡೆದಿರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

  ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ 2026 ಜೂನ್ 24ರ  ಮಧ್ಯಂತರ ಆದೇಶದ (WP. 8665/2025) ಅನ್ವಯ ಕಾಲೇಜಿಗೆ ಪರೀಕ್ಷೆ ಮತ್ತು ಪ್ರವೇಶಾತಿಗೆ ಅನುಮತಿ ಲಭಿಸಿದ್ದರೂ, ಇದು ನ್ಯಾಯಾಲಯದ ಅಂತಿಮ ತೀರ್ಪಿಗೆ ಬದ್ಧವಾಗಿರುತ್ತದೆ. ಒಂದು ವೇಳೆ ಅಂತಿಮ ತೀರ್ಪಿನಲ್ಲಿ ಮಧ್ಯಂತರ ಆದೇಶ ರದ್ದಾದಲ್ಲಿ “ಸಂಸ್ಥೆಯಾಗಲೀ, ವಿದ್ಯಾರ್ಥಿಗಳಾಗಲೀ ಸಮತೆಯ ಹಕ್ಕು ಸಾಧಿಸಲು  ಸಾಧ್ಯವಿಲ್ಲ.” ಅಂದರೆ ವಿದ್ಯಾರ್ಥಿಗಳು ಪದವಿಯ ಮಾನ್ಯತೆ ಕಳೆದುಕೊಳ್ಳುವ ಭೀತಿ ಎದುರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಗರ ಗಂಗೋತ್ರಿ ಕಾಲೇಜಿಗೆ ಪ್ರವೇಶಾತಿ ಪಡೆಯುವುದು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟ ವಿಷಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

file 000000003f5c8208a0b120fec3430d9d2844579263981333144 ಸಾಗರದ ಉಳ್ಳೂರು ಗಂಗೋತ್ರಿ B.Ed ಕಾಲೇಜಿಗೆ NCTE ಮಾನ್ಯತೆ ಇಲ್ಲ|ಪ್ರವೇಶಾತಿ, ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟದ್ದು: ಕುವೆಂಪು ವಿವಿ ಕುಲಸಚಿವ ಪ್ರೊ.ತಿಮ್ಮರಾಯಪ್ಪ

Leave a Reply

Your email address will not be published. Required fields are marked *