ರಿಪ್ಪನ್ಪೇಟೆ: 2026–27ನೇ ಸಾಲಿನ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಮೀಪದ ಗರ್ತಿಕೆರೆಯ ಮಲೆನಾಡು ವಿದ್ಯಾಕೇಂದ್ರ, ಕುಮುದ್ವತಿ ಬಾಲ ವಿಕಾಸ ಕೇಂದ್ರ ಹಾಗೂ ಕುಮುದ್ವತಿ ಹಿರಿಯ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ 6 ವರ್ಷದೊಳಗಿನ ಮಕ್ಕಳಿಗೆ ಶ್ರೀಕೃಷ್ಣ ವೇಷ ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವು ಸೆಪ್ಟೆಂಬರ್ 9 ರಂದು ಶಾಲಾ ಆವರಣದಲ್ಲಿ ನಡೆಯಲಿದ್ದು, ಭಾಗವಹಿಸಲು ಆಸಕ್ತ ಮಕ್ಕಳ ನೊಂದಣಿಗೆ ಸೆಪ್ಟೆಂಬರ್ 1 ಕೊನೆಯ ದಿನ ಎಂದು ಶಾಲಾ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ :9591780799, 9632199249,7760056951
ಕೃಷ್ಣವೇಷದ ಮಹತ್ವ:
ಶ್ರೀಕೃಷ್ಣ ವೇಷ ಧರಿಸುವುದು ಕೇವಲ ಅಲಂಕಾರವಲ್ಲ; ಅದು ಮಕ್ಕಳಲ್ಲಿ ಭಕ್ತಿ, ಸಂಸ್ಕಾರ ಮತ್ತು ಭಾರತೀಯ ಸಂಪ್ರದಾಯದ ಅರಿವು ಬೆಳೆಸುವ ಸಾಂಸ್ಕೃತಿಕ ಆಚರಣೆಯಾಗಿದೆ.
ಮುಖ್ಯ ಮಹತ್ವಗಳು:
* ಶ್ರೀಕೃಷ್ಣನ ಆದರ್ಶ ಗುಣಗಳ ಪರಿಚಯ
* ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ವೇದಿಕೆ ಧೈರ್ಯ ವೃದ್ಧಿ
* ಜನ್ಮಾಷ್ಟಮಿ ಹಬ್ಬದ ಸಾಂಸ್ಕೃತಿಕ ಪರಂಪರೆಯ ಉಳಿವು
* ಕುಟುಂಬ ಮತ್ತು ಸಮಾಜದಲ್ಲಿ ಭಕ್ತಿ–ಸೌಹಾರ್ದದ ವಾತಾವರಣ ನಿರ್ಮಾಣ
“ಕೃಷ್ಣವೇಷವು ಮಕ್ಕಳಲ್ಲಿ ಭಕ್ತಿ, ಸಂಸ್ಕೃತಿ ಮತ್ತು ಸದ್ಗುಣಗಳ ಬೀಜ ಬಿತ್ತುವ ಸುಂದರ ಸಂಪ್ರದಾಯ.”

















Leave a Reply