ಹೊಸನಗರ ತಾಲ್ಲೂಕು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸ್ವಾಮಿರಾವ್ ಅವಿರೋಧ ಆಯ್ಕೆ

Addaheading 20260817 193231 0000 ಹೊಸನಗರ ತಾಲ್ಲೂಕು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸ್ವಾಮಿರಾವ್ ಅವಿರೋಧ ಆಯ್ಕೆ
Spread the love

ಹೊಸನಗರ: ಹೊಸನಗರ ತಾಲ್ಲೂಕು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ನೂತನ ಅಧ್ಯಕ್ಷರಾಗಿ ಹೊಸನಗರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸ್ವಾಮಿರಾವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಉಪನ್ಯಾಸಕರ ಸಂಘದ ಅಧೀನದಲ್ಲಿ ಹೊಸನಗರ ತಾಲ್ಲೂಕು ಉಪನ್ಯಾಸಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾಗಿ ಹೊಸನಗರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ದಾಮೋದರ ಶೆಣೈ ಅವರು ಆಯ್ಕೆಯಾಗಿದ್ದಾರೆ.
  ಉಪಾಧ್ಯಕ್ಷರಾಗಿ ರಿಪ್ಪನ್‌ಪೇಟೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಅಂಬಿಕಾ, ಕಾಯಾಧ್ಯಕ್ಷರಾಗಿ ರಾಜೇಶ್ ಭೋಳಾರ್, ಪ್ರಧಾನ ಕಾರ್ಯದರ್ಶಿಯಾಗಿ ಫ್ರಾನ್ಸಿಸ್ ಜಿ. ಬೆಂಜಮಿನ್, ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ, ಖಜಾಂಚಿಯಾಗಿ ನಾಗೇಶ್ ಜಿ.ಎಸ್., ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್, ಸಹಕಾರ್ಯದರ್ಶಿಯಾಗಿ ಗಣಪತಿ ಎಂ. ಹಾಗೂ ಸಂಚಾಲಕರಾಗಿ ಸುಮಾನ ಡಿ.ಎಸ್. ಆಯ್ಕೆಯಾಗಿದ್ದಾರೆ.
ಅನುದಾನಿತ ಹಾಗೂ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳಿಂದ ಜಂಟಿ ಕಾರ್ಯದರ್ಶಿಯಾಗಿ ಶೇಷಾದ್ರಿ ಎನ್. ಮತ್ತು ಸಹ ಸಂಚಾಲಕರಾಗಿ ಗುರುರಾಜ್ ಸಿರವರು ಆಯ್ಕೆಯಾಗಿದ್ದಾರೆ.
  ನೂತನ ಪದಾಧಿಕಾರಿಗಳ ಆಯ್ಕೆಯ ಮೂಲಕ ತಾಲ್ಲೂಕಿನ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘಟನೆ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ. ಉಪನ್ಯಾಸಕರ ವಿವಿಧ ಸಮಸ್ಯೆಗಳು, ಶೈಕ್ಷಣಿಕ ವಿಚಾರಗಳು ಹಾಗೂ ಸಂಘದ ಹಿತಾಸಕ್ತಿಗಳಿಗಾಗಿ ಸಂಘವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.

file 000000003f5c8208a0b120fec3430d9d4748218046625639029 ಹೊಸನಗರ ತಾಲ್ಲೂಕು ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸ್ವಾಮಿರಾವ್ ಅವಿರೋಧ ಆಯ್ಕೆ

Leave a Reply

Your email address will not be published. Required fields are marked *