ಮೋದಿ ಆಡಳಿತಕ್ಕೆ 12 ವರ್ಷ: ಕುಮದ್ವತಿ ಉಗಮ ಸ್ಥಾನದಲ್ಲಿ ಬಿಜೆಪಿ ಯುವ ಮೋರ್ಚಾ ದಿಂದ ಸ್ವಚ್ಛತಾ ಸೇವೆ

Screenshot 20260621 211135 Canva ಮೋದಿ ಆಡಳಿತಕ್ಕೆ 12 ವರ್ಷ: ಕುಮದ್ವತಿ ಉಗಮ ಸ್ಥಾನದಲ್ಲಿ ಬಿಜೆಪಿ ಯುವ ಮೋರ್ಚಾ ದಿಂದ ಸ್ವಚ್ಛತಾ ಸೇವೆ
Spread the love
img 20260110 wa00006139434549561316337 ಮೋದಿ ಆಡಳಿತಕ್ಕೆ 12 ವರ್ಷ: ಕುಮದ್ವತಿ ಉಗಮ ಸ್ಥಾನದಲ್ಲಿ ಬಿಜೆಪಿ ಯುವ ಮೋರ್ಚಾ ದಿಂದ ಸ್ವಚ್ಛತಾ ಸೇವೆ

ಹುಂಚ : ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಯಶಸ್ವಿ ಆಡಳಿತದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಹುಂಚದ ಕುಮದ್ವತಿ ನದಿ ಉಗಮ ಸ್ಥಾನದಲ್ಲಿ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಹುಂಚ ಹೋಬಳಿ ಯುವ ಮೋರ್ಚಾ ಅಧ್ಯಕ್ಷ ಅನ್ವೇಶ್ ಕಲ್ಲೂರು ಅವರ ನೇತೃತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಉಗಮ ಸ್ಥಳದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಿದರು.

img 20260621 wa00382001416719685897630 ಮೋದಿ ಆಡಳಿತಕ್ಕೆ 12 ವರ್ಷ: ಕುಮದ್ವತಿ ಉಗಮ ಸ್ಥಾನದಲ್ಲಿ ಬಿಜೆಪಿ ಯುವ ಮೋರ್ಚಾ ದಿಂದ ಸ್ವಚ್ಛತಾ ಸೇವೆ

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಸ್ವಚ್ಛ ಭಾರತ್ ಪರಿಕಲ್ಪನೆಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಸ್ವಚ್ಛತೆಯ ಮಹತ್ವವನ್ನು ತಿಳಿಸಿದರು. ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಕುಮದ್ವತಿ ನದಿ ಉಗಮ ಸ್ಥಾನವನ್ನು ಸ್ವಚ್ಛಗೊಳಿಸುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ವಿಶ್ವನಾಥ್ ಗಂದ್ರಹಳ್ಳಿ, ಜಿಲ್ಲಾ ಯುವ ಮೋರ್ಚಾದ ದೇವರಾಜ್ ಹುಳಿಗದ್ದೆ, ತಾಲೂಕು ಕಾರ್ಯದರ್ಶಿ ಅಭಿಷೇಕ್ ಹುಂಚ,  ಚರಣ್ ಹುಂಚ ಹಾಗೂ ಮಂಜುನಾಥ್ ಗುಳಿಗದ್ದೆ, ದಿನೇಶ್ ಕಲ್ಲುಕೊಪ್ಪ ಮತ್ತು ಗಣೇಶ್ ನಾಯ್ಕ್, ನಿರಂಜನ್, ಮಂಜುನಾಥ್, ಕಲಾವಿದ ಶ್ರೀನಿವಾಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ನೆರವೇರಿದ್ದು, ಸ್ಥಳೀಯ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಯಿತು.

img 20260604 wa00396210934996667593950 ಮೋದಿ ಆಡಳಿತಕ್ಕೆ 12 ವರ್ಷ: ಕುಮದ್ವತಿ ಉಗಮ ಸ್ಥಾನದಲ್ಲಿ ಬಿಜೆಪಿ ಯುವ ಮೋರ್ಚಾ ದಿಂದ ಸ್ವಚ್ಛತಾ ಸೇವೆ

Leave a Reply

Your email address will not be published. Required fields are marked *