ರಿಪ್ಪನ್‌ಪೇಟೆಯಲ್ಲಿ ನಾಳೆ (ಏ.21) ಶ್ರೀ ಶಂಕರ ಭಗವತ್ಪಾದಾಚಾರ್ಯರ ಜಯಂತಿ ಮಹೋತ್ಸವ

Blue and Red Voter Education Banner 20260420 182250 0000 scaled ರಿಪ್ಪನ್‌ಪೇಟೆಯಲ್ಲಿ ನಾಳೆ (ಏ.21) ಶ್ರೀ ಶಂಕರ ಭಗವತ್ಪಾದಾಚಾರ್ಯರ ಜಯಂತಿ ಮಹೋತ್ಸವ
Spread the love

ರಿಪ್ಪನ್‌ಪೇಟೆ: ಲ್ಲಿನ ಬ್ರಾಹ್ಮಣ ಸಂಘದ ವತಿಯಿಂದ ಏಪ್ರಿಲ್ 21ರಂದು ಮಂಗಳವಾರ ಶ್ರೀರಾಮ ಸಮುದಾಯ ಭವನದಲ್ಲಿ ಮಧ್ಯಾಹ್ನ 3.30ಕ್ಕೆ ಶ್ರೀ ಶಂಕರ ಭಗವತ್ಪಾದಾಚಾರ್ಯರ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬ್ರಾಹ್ಮಣ ಸಂಘದ ಅಧ್ಯಕ್ಷ ಎಚ್.ಪಿ. ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್.ಪಿ. ಸುರೇಶ್ ವಹಿಸಲಿದ್ದಾರೆ.

img 20260420 wa00122957957930077331127 ರಿಪ್ಪನ್‌ಪೇಟೆಯಲ್ಲಿ ನಾಳೆ (ಏ.21) ಶ್ರೀ ಶಂಕರ ಭಗವತ್ಪಾದಾಚಾರ್ಯರ ಜಯಂತಿ ಮಹೋತ್ಸವ

ಕಾರ್ಯಕ್ರಮದಲ್ಲಿ ಕೋಣಂದೂರು ವೇದಬ್ರಹ್ಮ ಶ್ರೀ ಕೆ.ಎಲ್. ರಾಘವೇಂದ್ರ ಭಟ್ ಅವರು ಶ್ರೀ ಶಂಕರ ಭಗವತ್ಪಾದಾಚಾರ್ಯರ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಾಗರ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿ ಕುಮಾರ್, ಕನ್ನಡ ಪಾಕ್ಷಿಕ ಪತ್ರಿಕೆಯ ಪ್ರಧಾನ ಸಂಪಾದಕ ಮ.ಸ. ನಂಜುಂಡಸ್ವಾಮಿ, ನಿವೃತ್ತ ಮುಖ್ಯೋಪಾಧ್ಯಾಯ ಉಮೇಶ್ ಆರ್. ಭಟ್ ಹಾಗೂ ವಿಶ್ವಕರ್ಮ ಸಮಾಜದ ಹೊಸನಗರ ತಾಲ್ಲೂಕು ಗೌರವಾಧ್ಯಕ್ಷ ದೇವದಾಸ್ ಆಚಾರ್ ಭಾಗವಹಿಸಲಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಅಧ್ಯಕ್ಷರು ಮನವಿ ಮಾಡಿದ್ದಾರೆ.

img 20260324 wa00568284816545099914319 ರಿಪ್ಪನ್‌ಪೇಟೆಯಲ್ಲಿ ನಾಳೆ (ಏ.21) ಶ್ರೀ ಶಂಕರ ಭಗವತ್ಪಾದಾಚಾರ್ಯರ ಜಯಂತಿ ಮಹೋತ್ಸವ

Leave a Reply

Your email address will not be published. Required fields are marked *