SHIVAMOGGA : ಜೀವನ ಭದ್ರತೆ ಒದಗಿಸಿ – ಭೂಮಾಪಕರ ಆಗ್ರಹ

Blue and Red Voter Education Banner 20260324 154300 0000 scaled SHIVAMOGGA : ಜೀವನ ಭದ್ರತೆ ಒದಗಿಸಿ - ಭೂಮಾಪಕರ ಆಗ್ರಹ
Spread the love

ಭೂಮಾಪಕರ ಮುಷ್ಕರದಿಂದ ಶಿವಮೊಗ್ಗ ಜಿಲ್ಲೆಯಲ್ಲಿ 5,112 ಕಡತ ಬಾಕಿ | ಜಿಲ್ಲೆಯಲ್ಲಿ 98 ಭೂಮಾಪಕರು ಮುಷ್ಕರದಲ್ಲಿ ಭಾಗಿ

ಶಿವಮೊಗ್ಗ : ಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಭದ್ರತೆ ಒದಗಿಸಬೇಕು ಎಂದು ಪರವಾನಿಗೆ ಭೂಮಾಪಕರು ಆಗ್ರಹಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರವಾನಿಗೆ ಭೂಮಾಪಕರ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಸರ್ಕಾರಿ ಭೂಮಾಪಕರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಪರವಾನಿಗೆ ಭೂಮಾಪಕರಿಗೂ ವಿಸ್ತರಿಸಬೇಕು. ಈ ಹಿನ್ನಲೆಯಲ್ಲಿ ಫೆ.20ರಿಂದ ನಾವು ಮುಷ್ಕರ ನಡೆಸುತ್ತಿದ್ದು,ತಮ್ಮಬೇಡಿಕೆ ಈಡೇರುವವರೆಗೂ ಮುಷ್ಕರ ಮುಂದುವರೆಯುತ್ತದೆ. ಈಗಾಗಲೇ ನಮ್ಮ ಮುಷ್ಕರದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಅಳತೆಗಾಗಿ ಬಾಕಿ ಇರುವ ಕಡತಗಳ ಸಂಖ್ಯೆ 5112 ತಲುಪಿಸಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಆದ್ದರಿಂದ ಸರ್ಕಾರ ನಮಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

img 20260111 wa00022490807688326838068 SHIVAMOGGA : ಜೀವನ ಭದ್ರತೆ ಒದಗಿಸಿ - ಭೂಮಾಪಕರ ಆಗ್ರಹ

ಜೆಓಸಿ ಲ್ಯಾಂಡ್ ಅಂಡ್ ಸಿಟಿ ಸರ್ವೆಂಗ್ ವೃತ್ತ ಶಿಕ್ಷಣ ಮಾಡಿದ ನಾವುಗಳು ಭೂ ಮಾಪಕರ ನೇಮಕಾತಿ ಮಾಡಿಕೊಳ್ಳುವಂತೆ ಹೋರಾಟ ನಡೆಸಿದ ಪರಿಣಾಮವಾಗಿ ಅಂದಿನ ಸರ್ಕಾರ 1998 ರಲ್ಲಿ ಸರ್ಕಾರ ಭೂ ಮಾಪಕರ ನೇಮಕಾತಿ ಮಾಡುವ ಬದಲು ಪರವಾನಗಿ ಭೂ ಮಾಪಕರು ಎನ್ನುವ ಯೋಜನೆ ತಂದು ಜೆಓಸಿ ಸರ್ವೆಂಗ್ ಮಾಡಿದವರೆಲ್ಲರಿಗೂ ಕೆಲಸ ನೀಡುವ ನಿಟ್ಟಿನಲ್ಲಿ ಭೂಕಂದಾಯ ಅಧಿನಿಯಮವನ್ನು ತಿದ್ದುಪಡಿ ತಂದು 11ಇ ನಕ್ಷೆಯನ್ನು ನೊಂದಣಿ ಪೂರ್ವ ಕಡ್ಡಾಯಗೊಳಿಸಿತು.

img 20260110 wa00008687618916314211524 SHIVAMOGGA : ಜೀವನ ಭದ್ರತೆ ಒದಗಿಸಿ - ಭೂಮಾಪಕರ ಆಗ್ರಹ

ನಂತರ 1999ರ ಆಗಸ್ಟ್‌ನಲ್ಲಿ ಖಾಸಗಿ ಭೂಮಾಪನ ಮಾಡಲು ಪರವಾನಿಗಾಗಿ ಅರ್ಜಿ ಆಹ್ವಾನಿಸಿತು. ನಂತರ ನಿರಂತರ ಪತ್ರ ವ್ಯವಹಾರ ನಡೆಸಿ ತರಬೇತಿಗೆಗೆ 2001 ಮಾರ್ಚ್ 1ರಂದು 2000 ರೂ. ತರಬೇತಿ ಶುಲ್ಕವನ್ನು ನಮ್ಮಿಂದ ಪಡೆದು ತರಬೇತಿ ನೀಡಲಾಯಿತು. ಇದಾದ ನಂತರ ಭೂ ಮಾಪನನ ಮತ್ತು ಕಂದಾಯ ನಿರ್ಣಯ ತರಬೇತಿ ಸಂಸ್ಥೆ ಮೈಸೂರು ಇವರು ಪರೀಕ್ಷೆ ನಡೆಸಿ ಇದರೆಲ್ಲಿ ಉತ್ತೀರ್ಣರಾದವರನ್ನು ಅಂತಿಮವಾಗಿ ಜೂ 2002ರಂದು ಪರವಾನಿಗಿ ನೀಡಿ ಹಕ್ಕು ಬದಲಾವಣೆ ಪೂರ್ವ ನಕ್ಷೆ ತಯಾರಿಸಲು ಅವಕಾಶ ನೀಡಿದರು. 1998-1999ರಲ್ಲಿ 2ನೇ ದರ್ಜೆ ಭೂ ಮಾಪಕರ ಎಲ್ಲಾ ಭತ್ಯೆಗಳು ಸೇರಿ 5524 ರೂ. ವೇತನ ನಿಗದಿ ಪಡಿಸಿತು ಎಂದರು.

ಪರವಾನಗಿ ಭೂ ಮಾಪಕ ಆಯುಷ್ ಮಾತನಾಡಿ ರೈತರಿಂದ ಮತ್ತು ಸಾರ್ವಜನಿಕರಿಂದ ನೇರವಾಗಿ ಅರ್ಜಿ ಪಡೆದು ಅರ್ಜಿ ಶುಲ್ಕ 300 ರೂ ಕಟ್ಟಿಸಿಕೊಂಡು ಅಳತೆ ಮತ್ತು ನಕ್ಷೆ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಪರವಾನಗಿ ಭೂ ಮಾಪಕರು ಯಾವುದೇ ಸರ್ಕಾರಿ ಭೂಮಿಯನ್ನು ಅಳತೆ ಮಾಡಬಾರದೆಂಬ ಷರತ್ತಿನ ಮೇಲೆ ಪರವಾನಿಗಿ ನೀಡಿ ಅಧಿಕಾರ ನೀಡಿತ್ತು. ಕೆಲವು ತಿಂಗಳಲ್ಲಿ ಹೈಕೋರ್ಟ್ 11ಇ ನಕ್ಷೆಗೆ ಅಧಿಸೂಚನೆಗೆ ತಡೆ ಆಜ್ಞೆ ನೀಡಿದ್ದರಿಂದ ನಮಗೆ ಕೆಲಸ ಇಲ್ಲದೆ ಬೀದಿ ಪಾಲಾದೆವು. ಇದಾದ ನಂತರ ರಾಜ್ಯ ಸಂಘದ ನಿರಂತರ ಪ್ರಯತ್ನ ಮತ್ತು ಕೆಲವು ಅಧಿಕಾರ ಸಹಾಯದಿಂದ ಹೈಕೋರ್ಟ್ 2014ರಲ್ಲಿ ಮಧ್ಯಂತರ ಆದೇಶ ನೀಡಿ ನಮಗೆಕೆಲಸ ಮಾಡಲು ಅವಕಾಶ ಕಲ್ಪಿಸಿತು ಎಂದು ಹೇಳಿದರು.

img 20260324 wa0030803721947298986746 SHIVAMOGGA : ಜೀವನ ಭದ್ರತೆ ಒದಗಿಸಿ - ಭೂಮಾಪಕರ ಆಗ್ರಹ

ಎಂದು ಒಂದು ಕಡತಕ್ಕೆ 1200 ರೂ. ನೀಡುತ್ತೇವೆ ಎಂದು ಸರ್ಕಾರ ಹೇಳಿದ್ದರೂ ಕೂಡ ಆದರೆ ಅಷ್ಟು ಹಣ ನಮಗೆ ಸಿಗುವುದಿಲ್ಲ. ಈ ಕಡತಗಳೆಲ್ಲಾ ವಿಲೇವಾರಿ ಆಗುವುದೂ ಕೂಡ ಕಷ್ಟವಾಗುತ್ತದೆ. ಅಲ್ಲದೆ ತಿಂಗಳಿಗೆ 23 ಕಡತಗಳನ್ನು ಮಾಡಲೇಬೇಕೆಂಬ ಕಡ್ಡಾಯ ಕೂಡ ಕೂಡ ಇದೆ. ಈಗ ರಾಜ್ಯದಲ್ಲಿ 5088 ಭೂಮಾಪಕರು ಕೆಲಸ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 98 ಜನರು ಇದ್ದಾರೆ. ಅಲ್ಲದೆ ಸರ್ಕಾರ ಪರವಾನಿಗೆ ಭೂಮಾಪಕರನ್ನು ಖಾಯಂಗೊಳಿಸುತ್ತೇವೆ ಭರವಸೆಕೊಟ್ಟಿತ್ತು. ಈಗ ಭರವಸೆ ಇಲ್ಲವಾಗಿದೆ. ಹೈಕೋರ್ಟ್ ಕೂಡ ನಮ್ಮ ಪರವಾಗಿ ಇದೆ. ಆದರೆ ಸರ್ಕಾರದ ಸ್ಪಂದನೆ ಇಲ್ಲದೆ ತೊಂದರೆಯಾಗಿದೆ. ನಾವು ಕಾನೂನು ಹೋರಾಟವನ್ನು ಕೂಡಮುಂದುವರಿಸುತ್ತೇವೆ. ಸುಪ್ರೀಂಕೋರ್ಟ್ನಲ್ಲೂ ನ್ಯಾಯ ಕೇಳುತ್ತೇವೆ. ಸರ್ಕಾರ ಇದ್ಯಾವುದಕ್ಕೂ ಆಸ್ಪದಕೊಡದೆ ನಮ್ಮನ್ನು ಖಾಯಂ ಮಾಡುವ ಮೂಲಕ ಜೀವನ ಭದ್ರತೆ ಒದಗಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹೇಶ್, ನಿಜಗುಣ, ಸಿದ್ದಾಚಾರಿ, ರಾಜೇಶ್, ಲೋಕಪ್ಪ, ಸಣ್ಣರಂಗಯ್ಯ,ಗಿರೀಶ್ ಎಲ್ ಎಸ್,ಗಣೇಶ್ ಮುಂತಾದವರಿದ್ದರು.

Leave a Reply

Your email address will not be published. Required fields are marked *