ಗುರುವಂದನಾ ಮತ್ತು ಸ್ನೇಹ ಮಿಲನ ಕಾರ್ಯಕ್ರಮ

Blue and Red Voter Education Banner 20260323 151511 0000 scaled ಗುರುವಂದನಾ ಮತ್ತು ಸ್ನೇಹ ಮಿಲನ ಕಾರ್ಯಕ್ರಮ
Spread the love

1984-85ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಗುರುವಂದನಾ ಕಾರ್ಯಕ್ರಮ

ರಿಪ್ಪನ್‌ಪೇಟೆ: ತಾಯಿ-ಗುರುಗಳ ಋಣ ತೀರಿಸಲಾಗದು. ಶಿಕ್ಷಕರಾದವರಲ್ಲಿ ತಾಳ್ಮೆ ಸಹನೆ ಮುಖ್ಯವಾಗಿದೆ.ವಿದ್ಯಾರ್ಥಿಗಳು ಪಾಠಪ್ರವಚನದಲ್ಲಿ ಶ್ರದ್ದೆಯಿಂದ ಕಲಿತರೆ ಮುಂದೆ ಜೀವನದಲ್ಲಿ ಸಾಧನೆ ಮಾಡಿದರೆ ಆದೇ ಗುರುಗಳಿಗೆ ಕೊಡುವ ಗೌರವ ಎಂದು ನಿವೃತ್ತ ಶಿಕ್ಷಕಿ ತ್ರಿವೇಣಿ ಹೇಳಿದರು.

ರಿಪ್ಪನ್‌ಪೇಟೆಯ ಬರುವೆ ಗ್ರಾಮದ ಶ್ರೀರಾಷ್ಟೋತ್ಥಾನ ಶಿಶು ಮಂದಿರದಲ್ಲಿ 1984-85 ನೇ ಸಾಲಿನ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಆಯೋಜಿಸಲಾದ ಗುರುವಂದನಾ ಮತ್ತು ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿ ಸಮಾಜದಲ್ಲಿ ಗುರು -ಹಿರಿಯರಿಗೆ ಸಲ್ಲಿಸಿದರೆ ಅದೇ ಗುರುಗಳಿಗೆ ನೀಡುವ ಗುರುಕಾಣಿಕೆಯಾಗಿದೆ. ವಿದ್ಯಾರ್ಥಿ ಜೀವನದಲ್ಲಿ ತಪ್ಪುಗಳಾಗಿರಬಹುದು ಅದರೆ ಆದನ್ನು ತಮ್ಮ ಜೀವನದಲ್ಲಿ ಮರೆತು ಎಲ್ಲೂರು ಸ್ನೇಹದಿಂದ ಇದ್ದಾಗ ಮಾತ್ರ ಪಾಠ ಕಲಿಸಿದ ಗುರುಗಳಿಗೆ ಸಾರ್ಥಕವಾಗಿದೆ ಎನ್ನಲು ಸಾಧ್ಯವೆಂದರು.
1984-85ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿ-ವಿದ್ಯಾರ್ಥಿನಿಯರ ಗುರುವಂದನಾ ಸ್ವೀಕರಿಸಿ ಮಾತನಾಡಿದ ನಿವೃತ್ತ  ಶಿಕ್ಷಕ ಉಮೇಶ ಆರ್ ಭಟ್   ಹುಟ್ಟಿ ಬೆಳೆದ ನಮ್ಮೂರಿನಲ್ಲಿ ಕಲಿತು ಸರ್ಕಾರಿ ಉದ್ಯೋಗ ಪಡೆಯುವುದರೊಂದಿಗೆ ನಿವೃತ್ತಿಯ ಜೀವನ ನಡೆಸುತ್ತಿರುವ ನನಗೆ ನಿತ್ಯ ಕಾಣಸಿಗುವ ನಾನು ಕಲಿಸಿದ ವಿದ್ಯಾರ್ಥಿಗಳಲ್ಲಿನ ಗುರುಭಕ್ತಿ ಅವರು ಕೊಡುವ ಗೌರವ ನನಗೆ ಸಂತೃಪ್ತಿ ತಂದಿದೆ ಎಂದರು. ನಿಮ್ಮ ಈ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಆತಿಥಿ ಸತ್ಕಾರ ನನ್ನ ಮನಸ್ಸಿಗೆ ತುಂಬ ಸಂತಸ ತಂದಿದೆ ಎಂದು ಹೇಳಿ ಪ್ರಶಂಸೆ ವ್ಯಕ್ತಪಡಿಸಿದರು.

ನಿವೃತ್ತಿ ಜೀವನ ನಡೆಸುತ್ತಿರುವ ಗಣಿತ ಶಿಕ್ಷಕ ಎ.ಎಸ್.ಭೋಜರಾಜ್‌ರವರನ್ನು ಅವರ ಸ್ವಗೃಹದಲ್ಲಿ  ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ 1984-85 ನೇ ಸಾಲಿನ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *