ಹೊಸನಗರದಲ್ಲಿ ಸಂಭ್ರಮದ ಹೋಳಿ ಆಚರಣೆ

NAADI NEWS 20260304 183556 0000 ಹೊಸನಗರದಲ್ಲಿ ಸಂಭ್ರಮದ ಹೋಳಿ ಆಚರಣೆ
Spread the love

ಹೊಸನಗರದಆರ್ ಎಸ್ ಎಸ್ ಶಾಖೆಯಲ್ಲಿ ಹೋಳಿ ಆಚರಣೆ

ಹೊಸನಗರ:  ಪಟ್ಟಣದ ಸಾರ್ವಜನಿಕ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹೊಸನಗರ ಘಟಕದ ಕಾರ್ಯಕರ್ತರಿಂದ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಹಿರಿಯರು, ಯುವಕರು ಹಾಗೂ ಮಕ್ಕಳು ಒಂದಾಗಿ ಸೇರಿ ಬಣ್ಣಗಳೊಂದಿಗೆ ಸಂಭ್ರಮಿಸಿದ ದೃಶ್ಯ ಗಮನಸೆಳೆಯಿತು. ಹೋಳಿ ಹಬ್ಬದ ಮಹತ್ವವನ್ನು ವಿವರಿಸಿ ಮಾತನಾಡಿದ ರಮೇಶ್ ಹಲಸಿನಕಟ್ಟೆ ಅವರು, “ಹಿರಿಯರು ಮತ್ತು ಯುವ ಸಮೂಹ ಎಲ್ಲರೂ ಒಂದಾಗಿ ಆಚರಿಸುವ ಹಿಂದೂ ಧರ್ಮದ ವಿಶೇಷ ಹಬ್ಬವೇ ಹೋಳಿ. ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು ಸಂತೋಷ ಹಂಚಿಕೊಳ್ಳುವುದು ಈ ಹಬ್ಬದ ವೈಶಿಷ್ಟ್ಯ. ಪೌರಾಣಿಕ ಕಥೆಗಳ ನೆನಪಿನೊಂದಿಗೆ ಹೋಳಿಯನ್ನು ಆಚರಿಸಲಾಗುತ್ತದೆ” ಎಂದು ತಿಳಿಸಿದರು.

ಹೋಳಿ ಆಚರಣೆಯಲ್ಲಿ  ಬಾಲಾಜಿ ಫ್ಯಾನ್ಸಿ ಸ್ಟೋರ್‌ನ ಮಾಲೀಕರಾದ ಕೆ.ಎಸ್.ವಿ. ನಾಯಕ್, ಎನ್.ಆರ್. ದೇವಾನಂದ್, ನಾಗರಾಜ್.ಎಸ್ ಸೇರಿದಂತೆ ರಾಧಾಕೃಷ್ಣ ಕಪಿಲ, ಅರುಣ್, ಮಂಜು, ಸಂಜೀವ್, ದೀಪಕ್ ಸ್ವರೂಪ್, ವಿಠ್ಠಲ್ ಮಂದಾರ, ವಿನಯ್ ಟೈಲರ್, ಬಿ.ಎಸ್. ಸುರೇಶ್, ಗುರುರಾಜ್, ದರ್ಶನ್, ಸಂತೋಷ್ ಕಾಮತ್, ಚರಣ್ ಶಾನ್‌ಭೋಗ್, ಸುಮಂತ್ ಎಸ್. ಕಾಮತ್, ಶ್ರೀಧರ, ಆನಂದ್ ಭಟ್ ಮತ್ತಿತರ ಸ್ವಯಂಸೇವಕರು ಭಾಗವಹಿಸಿದ್ದರು.


ಹಬ್ಬದ ಸಂಭ್ರಮದಲ್ಲಿ ದೇಶಭಕ್ತಿ ಗೀತೆಗಳು, ಪರಸ್ಪರ ಶುಭಾಶಯ ವಿನಿಮಯ ಮತ್ತು ಬಣ್ಣಗಳ ಆಟ ವಿಶೇಷ ಆಕರ್ಷಣೆಯಾಯಿತು.


Spread the love

Leave a Reply

Your email address will not be published. Required fields are marked *