ರಿಪ್ಪನ್ ಪೇಟೆ: ಸಮೀಪದ ಬೆಳ್ಳೂರು ಗ್ರಾಮ ಪಂಚಾಯತಿಯ ಗುಬ್ಬಿಗ ಗ್ರಾಮದ ಕಲ್ಲುಹಳ್ಳದಲ್ಲಿ ಇಂದು ಬೆಳಿಗ್ಗೆ ಒಂಟಿ ಕಾಡಾನೆ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಬೆಳಿಗ್ಗೆ ಸುಮಾರು 5:30ರ ವೇಳೆಗೆ ಕಲ್ಲುಹಳ್ಳದ ನ್ಯಾಯಬೆಲೆ ಅಂಗಡಿ ಸಮೀಪ ಕಾಣಿಸಿಕೊಂಡ ಆನೆ, ಅಲ್ಲಿಂದ ಅನೇಕರ ಮನೆಗಳ ಬಳಿಯಿಂದ ಸಾಗುತ್ತ ತೋಟದೊಳಗೆ ಪ್ರವೇಶಿಸಿದೆ. ಬಳಿಕ ಹಾರೋಹಿತ್ಲು ಗ್ರಾಮದ ದಿಕ್ಕಿನಲ್ಲಿ ಮುಂದಕ್ಕೆ ಸಂಚರಿಸಿದೆ ಎಂದು ತಿಳಿದುಬಂದಿದೆ.
ಈ ಭಾಗದಲ್ಲಿ ಆನೆಗಳ ಸಂಚಾರ ಸಾಮಾನ್ಯವಾಗಿದ್ದರೂ, ಮನೆಗಳು ಹಾಗೂ ತೋಟಗಳ ಸಮೀಪ ಇಷ್ಟು ಹತ್ತಿರವಾಗಿ ಕಾಣಿಸಿಕೊಂಡದ್ದು ಇದೇ ಮೊದಲ ಬಾರಿಯಾಗಿದೆ. ಆನೆ ಅನೇಕರ ಮನೆಗಳ ಹತ್ತಿರದಿಂದಲೇ ಹಾದು ಹೋಗಿರುವುದರಿಂದ ಗ್ರಾಮಸ್ಥರಲ್ಲಿ ಭೀತಿ ಉಂಟಾಗಿದೆ ಹಾಗೂ ಯಾವುದೇ ಹಾನಿಯಾದ ಘಟನೆ ವರದಿಯಾಗಿಲ್ಲ .
















Leave a Reply