ಬೇಕರಿ ಬಿಸಿನೆಸ್ ಮಾಡುವ ಹಂಬಲವಿದೆಯೇ ಹಾಗಾದರೆ ಈ ಸುದ್ದಿ ನಿಮಗೆ ; ಅರ್ಜಿ ಸಲ್ಲಿಕೆಗೆ ಜು.18 ಕೊನೆಯ ದಿನ

Add a heading 20260717 203411 0000 ಬೇಕರಿ ಬಿಸಿನೆಸ್ ಮಾಡುವ ಹಂಬಲವಿದೆಯೇ ಹಾಗಾದರೆ ಈ ಸುದ್ದಿ ನಿಮಗೆ ; ಅರ್ಜಿ ಸಲ್ಲಿಕೆಗೆ ಜು.18 ಕೊನೆಯ ದಿನ
Spread the love
img 20260110 wa0000881325462201695229 ಬೇಕರಿ ಬಿಸಿನೆಸ್ ಮಾಡುವ ಹಂಬಲವಿದೆಯೇ ಹಾಗಾದರೆ ಈ ಸುದ್ದಿ ನಿಮಗೆ ; ಅರ್ಜಿ ಸಲ್ಲಿಕೆಗೆ ಜು.18 ಕೊನೆಯ ದಿನ

ಶಿವಮೊಗ್ಗ: ಗರದ ನವುಲೆಯಲ್ಲಿರುವ ಕೃಷಿ ಮಹಾ ವಿದ್ಯಾಲಯದ ಆವರಣದ ಬೇಕರಿ ಘಟಕದಲ್ಲಿ ವಿವಿಧ ರೀತಿಯ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಒಂದು ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜುಲೈ 20ರಿಂದ ಆಗಸ್ಟ್ 18ರವರೆಗೆ ನಡೆಯಲಿರುವ ಈ ತರಬೇತಿಯಲ್ಲಿ ಬೆಣ್ಣೆ ಬಿಸ್ಕತ್ತು, ಕೋಕೋನಟ್ ಕುಕೀಸ್, ಕೋಕೋನಟ್ ಬಿಸ್ಕತ್ತು, ಮಸಾಲ ಬಿಸ್ಕತ್ತು, ಮೆಲ್ಟಿಂಗ್ ಮೊಮೆಂಟ್ ಬಿಸ್ಕತ್ತು, ಪೀನಟ್ ಕುಕೀಸ್, ವೆನಿಲ್ಲಾ ಬಟನ್, ಬನಾನಾ ಕೇಕ್, ಫ್ರೂಟ್ ಕೇಕ್, ಸ್ಪಾಂಜ್ ಕೇಕ್, ಆರೆಂಜ್ ಕೇಕ್, ಕಪ್ ಕೇಕ್, ಚಾಕೊಲೇಟ್ ಕೇಕ್, ಜಾಮ್ ರೋಲ್, ಜೆಲ್ ಕೇಕ್, ಪೇಸ್ಟ್ರಿ ಕೇಕ್, ಬಟರ್ ಐಸಿಂಗ್, ಡೋನಟ್, ಮಿಲ್ಕ್ ಬ್ರೆಡ್, ಬನ್, ರಸ್ಕ್, ಪಿಜ್ಜಾ ಪಫ್, ಪೇಸ್ಟ್ರಿ, ದಿಲ್ ಪಸಂದ್, ಬಾಂಬೆ ಕಾರ ಸೇರಿದಂತೆ ವಿವಿಧ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.

ತರಬೇತಿ ಶುಲ್ಕ ₹4,500 ಆಗಿದ್ದು, ಊಟ ಹಾಗೂ ವಸತಿ ಸೌಲಭ್ಯ ಇರುವುದಿಲ್ಲ. ಆಸಕ್ತರು ತರಬೇತಿ ಶುಲ್ಕ ಪಾವತಿಸಿ ಜುಲೈ 18ರೊಳಗೆ ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಡಾ. ಜಯಶ್ರೀ – 94491 87763 ಹಾಗೂ ಜಯಶಂಕರ್ – 96865 55897 ಅವರನ್ನು ದೂರವಾಣಿ ಮೂಲಕ ಅಥವಾ ಖುದ್ದಾಗಿ ಸಂಪರ್ಕಿಸಬಹುದು ಎಂದು ನವುಲೆ ಕೃಷಿ ಮಹಾವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *