ಕರೆ ಮಾಡಿದರೂ ಫೋನ್ ರಿಸೀವ್ ಇಲ್ಲ; ಮನೆಗೆ ಹೋದಾಗ ಕಾದಿತ್ತು ಶಾಕ್..! |ಸುತ್ತುಕೋಟೆಯಲ್ಲಿ ನಿಗೂಢ ಹತ್ಯೆ

Screenshot 20260620 193134 Canva ಕರೆ ಮಾಡಿದರೂ ಫೋನ್ ರಿಸೀವ್ ಇಲ್ಲ; ಮನೆಗೆ ಹೋದಾಗ ಕಾದಿತ್ತು ಶಾಕ್..! |ಸುತ್ತುಕೋಟೆಯಲ್ಲಿ ನಿಗೂಢ ಹತ್ಯೆ
Spread the love

img 20260110 wa00003482112675518664375 ಕರೆ ಮಾಡಿದರೂ ಫೋನ್ ರಿಸೀವ್ ಇಲ್ಲ; ಮನೆಗೆ ಹೋದಾಗ ಕಾದಿತ್ತು ಶಾಕ್..! |ಸುತ್ತುಕೋಟೆಯಲ್ಲಿ ನಿಗೂಢ ಹತ್ಯೆ

ಶಿವಮೊಗ್ಗ: ಸುತ್ತುಕೋಟೆ ಗ್ರಾಮದಲ್ಲಿ ಯುವಕನೊಬ್ಬನನ್ನು ಮನೆಯಲ್ಲೇ ಹತ್ಯೆಗೈದಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಮೃತರನ್ನು ಗ್ರಾಮದ ನಿವಾಸಿ ಪ್ರವೀಣ್ (26) ಎಂದು ಗುರುತಿಸಲಾಗಿದೆ. ಟ್ರಾಕ್ಟರ್ ಬಾಡಿಗೆ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಪ್ರವೀಣ್, ಗುರುವಾರ ರಾತ್ರಿ ಎಂದಿನಂತೆ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದರು.

ಈ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಅವರ ತಲೆ ಭಾಗಕ್ಕೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಪ್ರವೀಣ್ ಅವರು ಕೆಲವು ಯುವಕರಿಗೆ ಕೆಲಸದ ನಿಮಿತ್ತ ಬೆಳಿಗ್ಗೆ ಮನೆಗೆ ಬರಲು ಸೂಚಿಸಿದ್ದರೆಂದು ತಿಳಿದುಬಂದಿದೆ. ಅದರಂತೆ ಶುಕ್ರವಾರ ಬೆಳಿಗ್ಗೆ ಹಲವು ಬಾರಿ ಕರೆ ಮಾಡಿದರೂ ಫೋನ್ ಸ್ವೀಕರಿಸದ ಹಿನ್ನೆಲೆಯಲ್ಲಿ ಮನೆಗೆ ತೆರಳಿ ಪರಿಶೀಲಿಸಿದಾಗ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ ವ್ಯವಹಾರಿಕ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಹತ್ಯೆಯ ನಿಖರ ಕಾರಣ ಹಾಗೂ ಆರೋಪಿಗಳ ಗುರುತು ಪತ್ತೆಗಾಗಿ ಮುಂದಿನ ತನಿಖೆ ಮುಂದುವರಿಸಿದ್ದಾರೆ.

img 20260604 wa0039621957641190090283 ಕರೆ ಮಾಡಿದರೂ ಫೋನ್ ರಿಸೀವ್ ಇಲ್ಲ; ಮನೆಗೆ ಹೋದಾಗ ಕಾದಿತ್ತು ಶಾಕ್..! |ಸುತ್ತುಕೋಟೆಯಲ್ಲಿ ನಿಗೂಢ ಹತ್ಯೆ

Leave a Reply

Your email address will not be published. Required fields are marked *