ಸಹೋದ್ಯೋಗಿಗೆ ಬುದ್ಧಿವಾದ ಹೇಳಿದ್ದಕ್ಕೆ ಚಾಕು ಇರಿದು ಕೊಲೆ; ಇಬ್ಬರ ಬಂಧನ!

Add a heading 20260719 200402 0000 ಸಹೋದ್ಯೋಗಿಗೆ ಬುದ್ಧಿವಾದ ಹೇಳಿದ್ದಕ್ಕೆ ಚಾಕು ಇರಿದು ಕೊಲೆ; ಇಬ್ಬರ ಬಂಧನ!
Spread the love

ಹೊಸನಗರ: ತಾಲೂಕಿನ ಸೊನಲೆ ಗ್ರಾಮದಲ್ಲಿ ಸಹೋದ್ಯೋಗಿಯ ಸಂಸಾರದ ವಿಚಾರವಾಗಿ ಬುದ್ಧಿವಾದ ಹೇಳಿದ್ದನ್ನು ಮನಸ್ಸಿಗೆ ತೆಗೆದುಕೊಂಡು ಟಿಂಬರ್ ಕಟಿಂಗ್ ಕಾರ್ಮಿಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಮೃತರನ್ನು ಧಾರವಾಡ ಜಿಲ್ಲೆಯ ಇಚನಹಳ್ಳಿ ತಾಂಡದ ಪರಶುರಾಮ ರಾಮಪ್ಪ ಲಮಾಣಿ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪರಶುರಾಮ ಶೆಟ್ಟಪ್ಪ ತಂಬೂರಿ ಹಾಗೂ ಅರುಣ ಪುನ್ನಪ್ಪ ಲಮಾಣಿ ವಿರುದ್ಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಮದ್ಯಪಾನದ ವೇಳೆ ಆರಂಭವಾದ ವಾಗ್ವಾದ ತೀವ್ರಗೊಂಡು ಚಾಕುವಿನಿಂದ ಕುತ್ತಿಗೆಗೆ ಇರಿದ ಪರಿಣಾಮ ಪರಶುರಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಸನಗರ ಪೊಲೀಸ್ ಠಾಣೆಯ ಪಿಎಸ್‌ಐ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *