ಸಾಗರದಲ್ಲಿ ಗಾಂಜಾ, ಎಂಡಿಎಂಎ ಮಾರಾಟ: ₹32,500 ಮೌಲ್ಯದ ಮಾದಕ ವಸ್ತು ವಶ, ಓರ್ವ ಬಂಧನ

Add a heading 20260709 183850 0000 ಸಾಗರದಲ್ಲಿ ಗಾಂಜಾ, ಎಂಡಿಎಂಎ ಮಾರಾಟ: ₹32,500 ಮೌಲ್ಯದ ಮಾದಕ ವಸ್ತು ವಶ, ಓರ್ವ ಬಂಧನ
Spread the love

ಸಾಗರ: ಮಾದಕ ವಸ್ತುಗಳ ಮಾರಾಟದ ವಿರುದ್ಧ ಸಾಗರ ಟೌನ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಓರ್ವ ಆರೋಪಿಯನ್ನು ಬಂಧಿಸಿ, ಗಾಂಜಾ ಹಾಗೂ ಎಂಡಿಎಂಎ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಜುಲೈ 8, 2026ರಂದು ಸಾಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಕೃಷ್ಣ ಗ್ಯಾರೇಜ್ ರಸ್ತೆಯಲ್ಲಿರುವ ಮನೆಯ ಎದುರಿನ ಗೋಡೌನ್‌ನಲ್ಲಿ ವ್ಯಕ್ತಿಯೊಬ್ಬ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸಾಗರ ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ (PI) ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿದರು.

ದಾಳಿಯ ವೇಳೆ ಅಕ್ಬರ್ ಬೇಗ್ (40) ಎಂಬ ಆರೋಪಿಯನ್ನು ಬಂಧಿಸಲಾಯಿತು. ಆರೋಪಿಯಿಂದ ₹7,500 ಮೌಲ್ಯದ 156 ಗ್ರಾಂ ಗಾಂಜಾ ಹಾಗೂ ₹25,000 ಮೌಲ್ಯದ 10.750 ಗ್ರಾಂ ಎಂಡಿಎಂಎ (MDMA) ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 140/2026ರಡಿ ಎನ್‌ಡಿಪಿಎಸ್ (NDPS) ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ

img 01221453869320446018788 ಸಾಗರದಲ್ಲಿ ಗಾಂಜಾ, ಎಂಡಿಎಂಎ ಮಾರಾಟ: ₹32,500 ಮೌಲ್ಯದ ಮಾದಕ ವಸ್ತು ವಶ, ಓರ್ವ ಬಂಧನ
ಜಾಹಿರಾತು

Leave a Reply

Your email address will not be published. Required fields are marked *