ತೀರ್ಥಹಳ್ಳಿ: ಪದವಿ ಓದುತ್ತಿದ್ದ ಯುವತಿಯ ಮೇಲೆ ಅ*ತ್ಯಾಚಾರ ಪ್ರಕರಣವೊಂದು ನಡೆದಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿ ಶಿವಮೊಗ್ಗ ಜೈಲಿಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ಘಟನೆ ಹಿನ್ನಲೆ ಏನು? ಯುವತಿಯದೂರಿನಲ್ಲೇನಿದೆ?
ದಿನಾಂಕ 09-07-2026 ರಂದು ಯುವತಿ ಕೋಣಂದೂರು ಪೊಲೀಸ್ ಉಪರಾಣೆಯ ಬಳಿ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಯುವತಿಯು ಪದವಿ ವ್ಯಾಸಾಂಗ ಮಾಡುತ್ತಿದ್ದು ಸುಮಾರು 03 ತಿಂಗಳ ಹಿಂದೆ 01 ನೇ ಆರೋಪಿತನಾದ ಆಸಿಫ್ ಈತನು ಇನ್ಸ್ಟಾಗ್ರಾಮ್ ಮುಖೇನ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದು ದಿನಾಂಕ 07-05-2026 ರಂದು ಮಧ್ಯಾಹ್ನ 02-30 ರ ಸಮಯದಲ್ಲಿ ಯುವತಿಯು ಕಾಲೇಜು ಮುಗಿಸಿಕೊಂಡು ಬರುತ್ತಿರುವಾಗ ಕಾಲೇಜಿನ ಮುಂದಿನ ರಸ್ತೆಯಲ್ಲಿ ಅಸಿಫ್ ಎಂಬಾತ ತಮ್ಮ ಕೆಎ-15 ಎಂ-3226 ಕಾರಿನಲ್ಲಿ ಬಂದು ಮಾತನಾಡಬೇಕು ಬಾ ಎಂದು ಕಾರಿನಲ್ಲಿ ಕೂರಿಸಿಕೊಂಡು ಹಾಸ್ಟೆಲ್ ಪಕ್ಕದ ಅಕೇಶಿಯಾ ಕಾಡಿನ ಕಡೆಗೆ ಕರೆದುಕೊಂಡು ಬಂದು ಈ ಹಿಂದೆ ತನ್ನಿಂದ ಕಳುಹಿಸಲು ಹೇಳಿ ಕಳಿಸಿಕೊಂಡಿದ್ದ ಯುವತಿಯ ಫೋಟೋವನ್ನು ತನ್ನ ಫೋಟೋದೊಂದಿಗೆ ಅಸಭ್ಯವಾಗಿ ಎಡಿಟ್ ಮಾಡಿ ನೀನು ನನ್ನೊಂದಿಗೆ ಸಹಕರಿಸದೇ ಇದ್ದರೆ ಈ ಫೋಟೋವನ್ನು ನಿಮ್ಮ ತಂದೆಗೆ ಹಾಗೂ ಫೇಸ್ ಬುಕ್ ಗೆ ಹಾಕಿ ವೈರಲ್ ಮಾಡುತ್ತೀನಿ ಎಂದು ಬೆದರಿಕೆ ಹಾಕಿ ನೊಂದ ಯುವತಿಯೊಂದಿಗೆ ಬಲವಂತದಿಂದ ದೈಹಿಕ ಸಂಪರ್ಕ ಮಾಡಿರುತ್ತಾನೆ.
ನಂತರ ಕಾಲೇಜಿನ ಬಳಿ ತಂದು ಬಿಟ್ಟು ಈ ವಿಚಾರವನ್ನು ಯಾರೊಂದಿಗೂ ಹೇಳಬಾರದೆಂದು ಹೆದರಿಸಿ ಹೋಗಿದ್ದು ನಂತರದ ದಿನಗಳಲ್ಲಿ 2-3 ಬಾರಿ ಅಸಿಫ್ ಎಂಬಾತ ಅವನ ಕಾರಿನಲ್ಲಿ ಕರೆದುಕೊಂಡು ಹೋಗಿ ಪ್ಲಾಂಟೇಷನ್ ಬಳಿ ದೈಹಿಕ ಸಂಪರ್ಕ ಮಾಡಿರುತ್ತಾನೆ. ಯುವತಿ ಆಸಿಫ್ ಜೊತೆ ಇರುವ ವಿಚಾರವನ್ನು ತಿಳಿದ ಆಸಿಫ್ ಜೊತೆ ಕೆಲಸ ಮಾಡುತ್ತಿದ್ದ ಎರಡನೇ ಆರೋಪಿತನಾದ ಸಾಹಿಲ್ ಎಂಬುವವನು ಆ ಯುವತಿಯನ್ನು ನಿನ್ನೊಂದಿಗೆ ಮಾತನಾಡುವುದಿದೆ ಬಾ ಎಂದು ಕೋಣಂದೂರಿನ ಮಳಲಿಮಠದ ರಸ್ತೆಯಲ್ಲಿ ಕರೆಸಿ ನಿನ್ನ ಮತ್ತೆ ಆಸಿಫ್ ವಿಚಾರ ನನಗೆ ತಿಳಿದಿದೆ ಎಂದು ಆ ಯುವತಿಯ ಮೈಕೈ ಮುಟ್ಟಲು ಬಂದಾಗ ಆ ಯುವತಿ ಪ್ರತಿರೋಧಿಸಿದಾಗ ನಾನು ಕರೆದಾಗ ನೀನು ಬಾರದೇ ಇದ್ದರೇ ನಿನ್ನ ಹಾಗೂ ಆಸಿಫ್ ನ ವಿಚಾರವನ್ನು ಇಡೀ ಊರಿಗೆ ತಿಳಿಸುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ.
ನಂತರ ಆಸಿಫ್ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ 03ನೇ ಆರೋಪಿತನಾದ ಸುಹೇಲ್ ಎಂಬುವವನು ಈ ವಿಚಾರಗಳನ್ನು ತಿಳಿದು ನೊಂದ ಮಹಿಳೆಯ ಮೊಬೈಲ್ ನಂಬರ್ ನ್ನು ಪಡೆದು ಆ ನಂಬರ್ ಗೆ ನಿನಗೆ ಇನ್ನೂ ಎಷ್ಟು ಜನ ಬೇಕು ಎಂದು ಅಸಭ್ಯವಾಗಿ ಹಾಗೂ ಅವಾಚ್ಯವಾಗಿ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದು ನೊಂದ ಮಹಿಳೆಯು ಕಾಲೇಜಿಗೆ ಹೋಗುವಾಗ ಬರುವಾಗ ಹಿಂಬಾಲಿಸಿಕೊಂಡು ಬಂದು ತೊಂದರೆ ನೀಡುತ್ತಿದ್ದ ಅದ್ದರಿಂದ ಮೊಬೈಲ್ ನಲ್ಲಿ ಫೋಟೋ ಎಡಿಟ್ ಮಾಡಿ ಸದರಿ ಫೋಟೋವನ್ನು ವೈರಲ್ ಮಾಡುವುದಾಗಿ
ಬೆದರಿಕೆ ಹಾಕಿ ಬಲವಂತದಿಂದ ದೈಹಿಕ ಸಂಪರ್ಕ ಮಾಡಿದ ಆಸಿಫ್ ಹಾಗೂ ಆಸಿಫ್ ಹಾಗೂ ನೊಂದ ಯುವತಿಯ ವಿಚಾರವನ್ನು ಊರಿನವರಿಗೆ ಹೇಳಿ ಮರ್ಯಾದೆ ತೆಗೆಯುತ್ತೇನೆಂದು ಹೆದರಸಿ ಮೈಕೈ ಮುಟ್ಟಿ ತೊಂದರೆ ನೀಡಿದ ಸಾಹಿಲ್ ಹಾಗೂ ಕಾಲೇಜಿಗೆ ಹೋಗುವಾಗ ಬರುವಾಗ ಹಿಂಬಾಲಿಸಿ ಮೆಸೇಜ್ ಮಾಡಿದ ಸುಹೇಲ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವತಿ ದೂರು ನೀಡಿದ್ದಾರೆ.
ಇನ್ಸ್ಟಾಗ್ರಾಂ ಪರಿಚಯ ಬೆಳೆದು ಅ*ತ್ಯಾಚಾರ: ವಿದ್ಯಾರ್ಥಿನಿ ದೂರು, ಇಬ್ಬರ ಬಂಧನ!
















Leave a Reply