ರಿಪ್ಪನ್‌ಪೇಟೆಯಲ್ಲಿ ಸವಿತಾ ಸಮಾಜ ಸಭೆ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವು ಕಾರ್ಯಕ್ರಮ, ಅರ್ಜಿ ಆಹ್ವಾನ

Blue and Red Voter Education Banner 20260430 190733 0000 scaled ರಿಪ್ಪನ್‌ಪೇಟೆಯಲ್ಲಿ ಸವಿತಾ ಸಮಾಜ ಸಭೆ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವು ಕಾರ್ಯಕ್ರಮ, ಅರ್ಜಿ ಆಹ್ವಾನ
Spread the love

ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲಾ ಸವಿತಾ ಸಮಾಜದ ಯುವ ಘಟಕದ ಕಾರ್ಯಕಾರಿ ಸಮಿತಿ ಸಭೆ ರಿಪ್ಪನ್‌ಪೇಟೆಯಲ್ಲಿ ನಡೆಯಿತು. ಸಭೆಯಲ್ಲಿ ನೋಟ್ಬುಕ್ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು.

img 20260430 wa00203272629094894633098 ರಿಪ್ಪನ್‌ಪೇಟೆಯಲ್ಲಿ ಸವಿತಾ ಸಮಾಜ ಸಭೆ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವು ಕಾರ್ಯಕ್ರಮ, ಅರ್ಜಿ ಆಹ್ವಾನ

ಮೇ 26ರಂದು ಜಿಲ್ಲಾ ಮಟ್ಟದಲ್ಲಿ “ಸವಿತಾ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ನೋಟ್ಬುಕ್ ವಿತರಣೆ” ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಸಮಾಜದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಹರು ತಮ್ಮ ತಾಲೂಕು ಹಾಗೂ ಹೋಬಳಿ ಮಟ್ಟದ ಪ್ರತಿನಿಧಿಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಯಿತು.

d 30 rpt 1p8954051693684075800 ರಿಪ್ಪನ್‌ಪೇಟೆಯಲ್ಲಿ ಸವಿತಾ ಸಮಾಜ ಸಭೆ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವು ಕಾರ್ಯಕ್ರಮ, ಅರ್ಜಿ ಆಹ್ವಾನ

ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದರ ಜೊತೆಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೋಟ್ಬುಕ್‌ಗಳನ್ನು ವಿತರಿಸುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಸಮಾಜದ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು.

img 20260110 wa00004978885838359021384 ರಿಪ್ಪನ್‌ಪೇಟೆಯಲ್ಲಿ ಸವಿತಾ ಸಮಾಜ ಸಭೆ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವು ಕಾರ್ಯಕ್ರಮ, ಅರ್ಜಿ ಆಹ್ವಾನ

ಈ ಸಂದರ್ಭದಲ್ಲಿ ಯುವ ಘಟಕದ ಅಧ್ಯಕ್ಷ ರಾಘವೇಂದ್ರ ಶಿಕಾರಿಪುರ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಭಂಡಾರಿ, ತಾಲೂಕು ಅಧ್ಯಕ್ಷ ಬಿ.ಎನ್. ಧರ್ಮರಾಜ್, ಧನಂಜಯ್,ಸಿದ್ದೇಶ್ ಭಂಡಾರಿ,ಸುನೀಲ್, ರಾಘವೇಂದ್ರ ಭಂಡಾರಿ, ಮಂಜುನಾಥ್ ಭಂಡಾರಿ, ಹಿರಿಯಣ್ಣ ಭಂಡಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

img 20260427 wa00134066074817429958396 ರಿಪ್ಪನ್‌ಪೇಟೆಯಲ್ಲಿ ಸವಿತಾ ಸಮಾಜ ಸಭೆ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವು ಕಾರ್ಯಕ್ರಮ, ಅರ್ಜಿ ಆಹ್ವಾನ

Leave a Reply

Your email address will not be published. Required fields are marked *