“ಕಲಾಕೌಸ್ತುಭ ಕನ್ನಡ ಸಂಘದ ಲಕ್ಕಿ ಡ್ರಾ ಹರಾಜಿನಲ್ಲಿ ಜನರನ್ನು ವಂಚಿಸಿಲ್ಲ’’ಸ್ಪಷ್ಟನೆ

Blue and Red Voter Education Banner 20260323 171621 0000 scaled ``ಕಲಾಕೌಸ್ತುಭ ಕನ್ನಡ ಸಂಘದ ಲಕ್ಕಿ ಡ್ರಾ ಹರಾಜಿನಲ್ಲಿ ಜನರನ್ನು ವಂಚಿಸಿಲ್ಲ’’ಸ್ಪಷ್ಟನೆ
Spread the love

ಮಾರ್ಚ್ 31ರೊಳಗೆ ಸಾರ್ವಜನಿಕರ ಸಮ್ಮುಖದಲ್ಲಿ ಲಕ್ಕಿ ಡ್ರಾ

ರಿಪ್ಪನ್‌ಪೇಟೆ :ಲ್ಲಿನ ಕಲಾಕೌಸ್ತುಭ ಕನ್ನಡ ಸಂಘ ಕಳೆದ ಹಲವಾರು ವರ್ಷಗಳಿಂದ ಕನ್ನಡ ರಾಜ್ಯೋತ್ಸವಕ್ಕಾಗಿ ಹುಟ್ಟಿದ ಸಂಘವಾಗದೆ ಹಲವರು ಜನಪರ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಇಲ್ಲಿನ ಅನಾರೋಗ್ಯ ಪೀಡಿತರ ಮತ್ತು ಇನ್ನಿತರ ಸಮಸ್ಯೆಗಳನ್ನು ಎದುರಿಸುವವರ ಧ್ವನಿಯಾಗಿ ಜನಮೆಚ್ಚುಗೆ ಗಳಿಸಿರುವ ಸಂಘವಾಗಿದೆ ಈ ಬಾರಿ ನವೆಂಬರ್‌ನಲ್ಲಿ ನಡೆದ ಕನ್ನಡರಾಜ್ಯೋತ್ಸವ ಸಂದರ್ಭದಲ್ಲಿ ಲಕ್ಕಿಡಿಪ್ ಯೋಜನೆಯನ್ನು ಮಾಡಲಾಗಿ ಲಕ್ಕಿಡಿಪ್ ಹರಾಜು ಮಾಡುವುದು ವಿಳಂಬವಾಗಿ ಯುಗಾದಿಯ ದಿನ  ಹರಾಜು ಮಾಡಬೇಕು ಎಂದು ತಿರ್ಮಾನಿಸಲಾಗಿತ್ತು. ಆದರೆ ಅದಕ್ಕೂ ಮುನ್ನವೇ ಕೆಲವರು ಠಾಣೆಗೆ ದೂರು ನೀಡಿದ ಕಾರಣ ನಾವು ಯುಗಾದಿ ದಿನ  ಹರಾಜು ಮಾಡದೇ ಮುಂದೂಡಬೇಕಾದ ಅನಿರ್ವಾಯತೆ ಎದುರಾಯಿತು ಎಂದು ಸಂಘದ ಅಧ್ಯಕ್ಷ ಮುರುಳಿಧರ ಕೆರೆಹಳ್ಳಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಲಾಕೌಸ್ತುಭ ಕನ್ನಡ ಸಂಘ ಕಳೆದ ಮೂವತ್ತು ನಲವತ್ತು ವರ್ಷಗಳಿಂದ ರಿಪ್ಪನ್‌ಪೇಟೆಯಲ್ಲಿ ಸದಾ ಕ್ರೀಯಾಶೀಲವಾಗಿ ಹಲವು ಸಾಂಸ್ಕೃತಿಕ ಕ್ರೀಡಾ ಮಕ್ಕಳ ಪ್ರಬಂಧ ಇನ್ನಿತರ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ನಡೆಸುವುದರೊಂದಿಗೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾದ ಸಂಘವಾಗಿತ್ತು.ಆದರೆ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಅಚರಿಸುವ ಮೂಲಕ ಆರ್ಥಿಕ ಸಂಕಷ್ಟ ಎದುರಿಸುವಂತಾಗಿ ಸಂಘದ ಸದಸ್ಯರು ಕೈಯಿಂದ ಹಣವನ್ನು ಹಾಕಿಕೊಂಡು ಅರ್ಥಿಕ ಸಮಸ್ಯೆಯನ್ನು ಸರಿದೂಗಿಸಿಕೊಂಡು ಬರಲಾಗಿ ಲಕ್ಕಿಡಿಪ್ ಹರಾಜು ವಿಳಂಬವಾಗಲು ಕಾರಣವಾಗಿತ್ತು.

ಇದೇ ಮಾರ್ಚ್ ಅಂತ್ಯದೊಳಗೆ ವಿನಾಯಕ ವೃತ್ತದಲ್ಲಿ ಸಂಘದ ಲಕ್ಕಿಡಿಪ್ ಹರಾಜು ಅನ್ನು ಸಾರ್ವಜನಿಕವಾಗಿ ನಡೆಸಲಾಗುವುದೆಂದು ಸಂಘದ ಅಧ್ಯಕ್ಷ ಮುರುಳಿಧರ ಕೆರೆಹಳ್ಳಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಮ್ಮ ಸಂಘದಲ್ಲಿ ಯಾವುದೇ ಲಕ್ಕಿಡಿಪ್ ಹರಾಜಿನಲ್ಲಿ ಜನರನ್ನು ವಂಚಿಸಿಲ್ಲ ಆದರೂ ಕೆಲವರು ಠಾಣೆಗೆ ದೂರು ನೀಡಿದ್ದಾರೆಂದು ಸ್ಪಷ್ಟ ಪಡಿಸಿ ಯಾರು ಭಯಪಡುವ ಅಗತ್ಯವಿಲ್ಲ ಇದೇ ಮಾರ್ಚ್ 31ರೊಳಗೆ ಸಾರ್ವಜನಿಕರ ಸಮ್ಮುಖದಲ್ಲಿ ಲಕ್ಕಿಡಿಪ್ ಹರಾಜು ಮಾಡಲಾಗುತ್ತದೆ ಎಂದರು.

Leave a Reply

Your email address will not be published. Required fields are marked *