ರಿಪ್ಪನ್‌ಪೇಟೆ|ಅರಸಾಳು ಕೆರೆ ಏರಿ ಬಳಿ ಕಂದಕಕ್ಕೆ ಉರುಳಿದ ಲಾರಿ; ಚಾಲಕ ಪಾರು

Addaheading 20260813 161257 0000 ರಿಪ್ಪನ್‌ಪೇಟೆ|ಅರಸಾಳು ಕೆರೆ ಏರಿ ಬಳಿ ಕಂದಕಕ್ಕೆ ಉರುಳಿದ ಲಾರಿ; ಚಾಲಕ ಪಾರು
Spread the love

ರಿಪ್ಪನ್‌ಪೇಟೆ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಯ ಸುಮಾರು 25 ಅಡಿ ಆಳದ ಕಂದಕಕ್ಕೆ ಉರುಳಿದ ಘಟನೆ ಗುರುವಾರ ಮಧ್ಯಾಹ್ನ ರಿಪ್ಪನ್‌ಪೇಟೆ ಸಮೀಪದ ಅರಸಾಳು ಕೆರೆ ಏರಿ ಬಳಿ ನಡೆದಿದೆ.
  ಮಂಗಳೂರಿನಿಂದ ಬಳ್ಳಾರಿಗೆ ಕೋಕ್‌ ತುಂಬಿಕೊಂಡು ತೆರಳುತ್ತಿದ್ದ ಲಾರಿ ಅರಸಾಳು ಕೆರೆ ಏರಿ ಬಳಿ ಸಾಗುತ್ತಿದ್ದ ವೇಳೆ, ಎದುರಿನಿಂದ ಬಂದ ದ್ವಿಚಕ್ರ ವಾಹನವನ್ನು ತಪ್ಪಿಸಲು ಚಾಲಕ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಲಾರಿ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಕಂದಕಕ್ಕೆ ಉರುಳಿದೆ.
ಲಾರಿ ಕಂದಕಕ್ಕೆ ಉರುಳಿದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಲಾರಿ ಚಾಲಕನನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತಂದಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
  ಅಪಘಾತದಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕಂದಕಕ್ಕೆ ಉರುಳಿದ ಲಾರಿಯ ಮುಂಭಾಗ ರಸ್ತೆಯಲ್ಲೇ ಉಳಿದಿದ್ದು, ಹಿಂಭಾಗ ಕಂದಕದೊಳಗೆ ಇಳಿದಿದೆ. ಲಾರಿಯನ್ನು ಮತ್ತೆ ಮೇಲಕ್ಕೆತ್ತುವುದು ಹರಸಾಹಸವೇ ಸರಿ ಎಂದು ಸ್ಥಳೀಯರು ತಿಳಿಸಿದ್ದಾರೆ.
  ವಿಷಯ ತಿಳಿದು ರಿಪ್ಪನ್‌ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ಮುಂದಿನ ಕ್ರಮ ಕೈಗೊಂಡಿದ್ದಾರೆ.

file 000000003f5c8208a0b120fec3430d9d8569840196528314995 ರಿಪ್ಪನ್‌ಪೇಟೆ|ಅರಸಾಳು ಕೆರೆ ಏರಿ ಬಳಿ ಕಂದಕಕ್ಕೆ ಉರುಳಿದ ಲಾರಿ; ಚಾಲಕ ಪಾರು

Leave a Reply

Your email address will not be published. Required fields are marked *