ರಿಪ್ಪನ್‌ಪೇಟೆಯಲ್ಲಿ ರೋಟರಿ ಕ್ಲಬ್‌ನಿಂದ ಸಸಿ ನೆಡುವ ಕಾರ್ಯಕ್ರಮ: ಪರಿಸರ ಸಂರಕ್ಷಣೆ ಪ್ರತಿದಿನದ ಜವಾಬ್ದಾರಿ – ಪಿಎಸ್‌ಐ ರಾಜುರೆಡ್ಡಿ

Add a heading 20260718 202031 0000 ರಿಪ್ಪನ್‌ಪೇಟೆಯಲ್ಲಿ ರೋಟರಿ ಕ್ಲಬ್‌ನಿಂದ ಸಸಿ ನೆಡುವ ಕಾರ್ಯಕ್ರಮ: ಪರಿಸರ ಸಂರಕ್ಷಣೆ ಪ್ರತಿದಿನದ ಜವಾಬ್ದಾರಿ - ಪಿಎಸ್‌ಐ ರಾಜುರೆಡ್ಡಿ
Spread the love

ಹೊಸನಗರ ರಸ್ತೆಯ ಡಿವೈಡರ್‌ನಲ್ಲಿ ವನಮಹೋತ್ಸವ ಅಂಗವಾಗಿ ಸಸಿ ನೆಡುವ ಅಭಿಯಾನ; ಯುವಜನತೆ ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯರಾಗುವಂತೆ ಕರೆ

ರಿಪ್ಪನ್‌ಪೇಟೆ: ರಿಸರ ದಿನಾಚರಣೆ ಅಥವಾ ವನಮಹೋತ್ಸವವನ್ನು ಕೇವಲ ಒಂದು ದಿನ ಆಚರಿಸಿದರೆ ಉಪಯೋಗವಿಲ್ಲ. ಪರಿಸರ ಸಂರಕ್ಷಣೆ ಕುರಿತು ಪ್ರತಿದಿನವೂ ಜಾಗೃತಿ ವಹಿಸುವುದು ಅತ್ಯಗತ್ಯ. ಇಲ್ಲವಾದರೆ ಪರ್ಯಾವರಣದ ಮೇಲೆ ಮಾನವನ ನಿರಂತರ ಗದ ಪ್ರಹಾರ ಪರಿಸರ ನಾಶಕ್ಕೆ ಕಾರಣವಾಗಬಹುದು ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಹೇಳಿದರು.

ಪಟ್ಟಣದ ಹೊಸನಗರ ರಸ್ತೆಯ ಅಗಲೀಕರಣದ ಬಳಿಕ ನಿರ್ಮಿಸಲಾಗಿರುವ ಡಿವೈಡರ್‌ಗಳ ಮಧ್ಯಭಾಗದಲ್ಲಿ ರೋಟರಿ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೂರಾರು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಬೆಳೆಸುವುದೇ ವನಮಹೋತ್ಸವದ ನಿಜವಾದ ಉದ್ದೇಶವಾಗಿದೆ. ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು, ಮರಗಳ ನಾಶ ಹಾಗೂ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿರುವುದರಿಂದ ವಾಯುಮಾಲಿನ್ಯ ಮತ್ತು ಉಷ್ಣಾಂಶ ಏರಿಕೆಯಾಗುತ್ತಿದೆ. ಇದರ ಪರಿಣಾಮವಾಗಿ ಮಳೆಯ ಪ್ರಮಾಣ ಹಾಗೂ ಕೃಷಿ ಉತ್ಪಾದನೆಯ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಅವರು ತಿಳಿಸಿದರು.

img 20260718 wa00078217446098238119894 ರಿಪ್ಪನ್‌ಪೇಟೆಯಲ್ಲಿ ರೋಟರಿ ಕ್ಲಬ್‌ನಿಂದ ಸಸಿ ನೆಡುವ ಕಾರ್ಯಕ್ರಮ: ಪರಿಸರ ಸಂರಕ್ಷಣೆ ಪ್ರತಿದಿನದ ಜವಾಬ್ದಾರಿ - ಪಿಎಸ್‌ಐ ರಾಜುರೆಡ್ಡಿ

ಪರಿಸರ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆಯನ್ನು ಅರಿತು ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಯುವಜನತೆ ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಿ ಸಸಿ ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಹಸಿರು ವಾತಾವರಣ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಬಲ್ಲಾಳ್, ಕಾರ್ಯದರ್ಶಿ ರಮೇಶ್ ಹೆಬ್ಬಾರ್, ಎಂ.ಬಿ. ಲಕ್ಷ್ಮಣಗೌಡ, ಗಣೇಶ್ ಕಾಮತ್, ರಾಧಾಕೃಷ್ಣ ಹೆಚ್.ಎ., ಎಂ.ಬಿ. ಮಂಜುನಾಥ್, ರಾಧಾಕೃಷ್ಣ ಜೆ., ಹುಗುಡಿ ವರ್ತೇಶ್ ಗೌಡ, ದೇವದಾಸ್ ಆಚಾರ್, ತಾನಾರಾಂ ಪಟೇಲ್, ಶಿವಕುಮಾರ್ ಶೆಟ್ಟಿ, ಅಮಿತಾ ಬಲ್ಲಾಳ್, ಗಣೇಶ್ ಆರ್., ಸಬಾಸ್ಟಿನ್ ಮ್ಯಾಥ್ಯೂಸ್, ಮುಖೇಶ್ ಸೇರಿದಂತೆ ಮುಂತಾದವರು ಇದ್ದರು.

Leave a Reply

Your email address will not be published. Required fields are marked *