ದೇಶದ ಅಭಿವೃದ್ಧಿಗೆ ಮೋದಿ ನಾಯಕತ್ವವೇ ಶಕ್ತಿ: ಧನಂಜಯ ಸರ್ಜಿ

ನಿವೃತ್ತ ಸೈನಿಕ ಕೆ.ವಿ ಕೃಷ್ಣಮೂರ್ತಿಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ 20260617 213702 0000 ದೇಶದ ಅಭಿವೃದ್ಧಿಗೆ ಮೋದಿ ನಾಯಕತ್ವವೇ ಶಕ್ತಿ: ಧನಂಜಯ ಸರ್ಜಿ
Spread the love
img 20260110 wa0000802681374457118679 ದೇಶದ ಅಭಿವೃದ್ಧಿಗೆ ಮೋದಿ ನಾಯಕತ್ವವೇ ಶಕ್ತಿ: ಧನಂಜಯ ಸರ್ಜಿ

ಹೊಸನಗರ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ 12 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಾಸ ಅಭಿವೃದ್ಧಿ -ಸಂವಾದ ಕಾರ್ಯಕ್ರಮ ಹೊಸನಗರದಲ್ಲಿ ಬುಧವಾರ ನಡೆಯಿತು.

ಪಟ್ಟಣದ ಗಾಯತ್ರಿ ಮಂದಿರದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶವು ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿದ್ದು, ಜನಪರ ಯೋಜನೆಗಳು ಸಮಾಜದ ಎಲ್ಲ ವರ್ಗಗಳಿಗೂ ತಲುಪುವಂತೆ ರೂಪಿಸಲಾಗಿದೆ ಎಂದು ಹೇಳಿದರು.

ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ನರೇಂದ್ರ ಮೋದಿ ಅವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಧ್ಯೇಯದಡಿ ದೇಶದ ಅಭಿವೃದ್ಧಿಗೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಜಾತಿ, ಮತ, ಪಂಥಗಳ ಭೇದವಿಲ್ಲದೆ ಜನರಿಗೆ ಯೋಜನೆಗಳ ಲಾಭ ದೊರೆಯುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ದೇಶದಲ್ಲಿ 56 ವಿಮಾನ ನಿಲ್ದಾಣಗಳಿದ್ದರೆ, ಇಂದು ಅವುಗಳ ಸಂಖ್ಯೆ 158ಕ್ಕೆ ಏರಿಕೆಯಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಸೇತುವೆಗಳು, ರೈಲು ಮಾರ್ಗಗಳು, ಹೆದ್ದಾರಿಗಳ ನಿರ್ಮಾಣ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ಒದಗಿಸಲಾಗಿದೆ. ರಕ್ಷಣಾ ಕ್ಷೇತ್ರಕ್ಕೂ ವಿಶೇಷ ಒತ್ತು ನೀಡಲಾಗಿದ್ದು, ಭಾರತವು ವಿಶ್ವದ ಗಮನ ಸೆಳೆಯುವ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಬಿ. ಸ್ವಾಮಿರಾವ್, ಪ್ರಧಾನಿ ಮೋದಿ ದೇಶ ಕಂಡ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿದ್ದು, ಅವರ ಆಡಳಿತಾವಧಿಯಲ್ಲಿ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದು ಜನರಲ್ಲಿ ಆಶಾದಾಯಕ ಭಾವನೆ ಮೂಡಿಸಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎನ್. ಸತೀಶ್, ಪ್ರಮುಖರಾದ ಗಣಪತಿ ಬೆಳಗೋಡು,ಎನ್.ಆರ್. ದೇವಾನಂದ, ಉಮೇಶ್ ಕಂಚುಗಾರ್, ಎ.ವಿ. ಮಲ್ಲಿಕಾರ್ಜುನ, ಆಯನೂರು ಪದ್ಮಿನಿರಾವ್, ಬಿ. ಯುವರಾಜ್, ಕಲ್ಯಾಣಪ್ಪ ಗೌಡ, ಶ್ರೀಪತಿರಾವ್, ಮಂಡಾಣಿ ಮೋಹನ್, ಸತ್ಯನಾರಾಯಣ, ನಾಗಾರ್ಜುನಸ್ವಾಮಿ, ಸತೀಶ್ ಸೊನಲೆ, ಜಿ.ಡಿ ಮಲ್ಲಿಕಾರ್ಜುನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

img 20260604 wa00395939298285494953548 ದೇಶದ ಅಭಿವೃದ್ಧಿಗೆ ಮೋದಿ ನಾಯಕತ್ವವೇ ಶಕ್ತಿ: ಧನಂಜಯ ಸರ್ಜಿ
img 20260617 wa00388631824669550123327 ದೇಶದ ಅಭಿವೃದ್ಧಿಗೆ ಮೋದಿ ನಾಯಕತ್ವವೇ ಶಕ್ತಿ: ಧನಂಜಯ ಸರ್ಜಿ

Leave a Reply

Your email address will not be published. Required fields are marked *