ರಿಪ್ಪನ್ ಪೇಟೆ: ಪಟ್ಟಣದ ವಿನಾಯಕ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ವಿನಾಯಕಪೇಟೆ ಘಟಕದ ವತಿಯಿಂದ ಶ್ರೀ ರಾಮನವಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರಿಗೆ ಕೋಸಂಬರಿ ಮತ್ತು ಪಾನಕವನ್ನು ವಿತರಿಸಿ ಹಬ್ಬದ ಸಂಭ್ರಮ ಹೆಚ್ಚಿಸಲಾಯಿತು. ವಿನಾಯಕ ವೃತದಲ್ಲಿ 500ಕ್ಕಿಂತ ಮಿಗಿಲು ಭಕ್ತಾದಿಗಳಿಗೆ ಪ್ರಸಾದ ವಿತರಿಸಿ ಜೈ ಶ್ರೀರಾಮ್ ಘೋಷಣೆಯನ್ನು ಕೂಗುತ್ತಾ ರಾಮ ಭಕ್ತಿಯನ್ನು ಮೆರೆದರು.

ಈ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಸಂಜಯ್, ದೇವರಾಜ್ ಕುಷನ್, ಮಂಜುನಾಥ್ ಆಚಾರ್, ಶ್ರೀನಿವಾಸ್ ಆಚಾರ್, ಓಂ ಮಂಜುನಾಥ್, ಸಂತೋಷ , ಸಮಾಜ ಸೇವಕಿ ಮತ್ತು ಮಹಿಳಾ ಪ್ರಮುಖರಾದ ಪದ್ಮಾ ಸುರೇಶ್, ಸೀತಮ್ಮ, ಸಾಮಾಜಿಕ ಕಾರ್ಯಕರ್ತರಾದ ಕಗ್ಗಲಿ ಲಿಂಗಪ್ಪ, ಸುಧೀಂದ್ರ ಪೂಜಾರಿ,ಆಟೋ ರಾಘು,ತಾನಾ ರಾಮ್ ಪಟೇಲ್,ದೇವರಾಜ್ ಎಂ. ರಾವ್, ಸತೀಶ್ ಹೆಗಡೆ, ಅರುಣ್ ಮುಗುಡ್ತಿ, ಕಾರ್ತಿಕ್, ಜನಾರ್ಧನ್ ಆಚಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


















Leave a Reply