ರಿಪ್ಪನ್ ಪೇಟೆ :ಕಲಾಕೌಸ್ತುಭ ಸಂಘದ ಮೇಲೆ ಲಾಟರಿ ವಂಚನೆಯ ಆರೋಪ – ಸಾರ್ವಜನಿಕರ ದೂರು!

Blue and Red Voter Education Banner 20260322 201625 0000 scaled ರಿಪ್ಪನ್ ಪೇಟೆ :ಕಲಾಕೌಸ್ತುಭ ಸಂಘದ ಮೇಲೆ ಲಾಟರಿ ವಂಚನೆಯ ಆರೋಪ - ಸಾರ್ವಜನಿಕರ ದೂರು!
Spread the love

ರಿಪ್ಪನ್ ಪೇಟೆ: ನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭ, ಲಾಟರಿ ಯೋಜನೆ ಮಾಡಿ ಬಹುಮಾನ ನೀಡದೆ ಜನರನ್ನುವಂಚಿಸಲಾಗಿದೆ ಎಂದು ಆರೋಪಿಸಿರುವ ಸಾರ್ವಜನಿಕರು, ಗುರುವಾರ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

img 20260322 wa00237005875495395212881 ರಿಪ್ಪನ್ ಪೇಟೆ :ಕಲಾಕೌಸ್ತುಭ ಸಂಘದ ಮೇಲೆ ಲಾಟರಿ ವಂಚನೆಯ ಆರೋಪ - ಸಾರ್ವಜನಿಕರ ದೂರು!

ದೂರಿನಲ್ಲಿ ಕಲಾಕೌಸ್ತುಭ ಸಂಘ ಎಂಬ ಹೆಸರಿನಲ್ಲಿ ಮುದ್ರಿತವಾದ ಲಕ್ಕಿ ಡ್ರಾ ಟಿಕೆಟ್‌ನ ದರ 100 ರೂ. ಗಳಾಗಿತ್ತು. ಎಲೆಕ್ಟಿಕ್ ಬೈಕ್ ಹಾಗೂ ಸೈಕಲ್ ಬಹುಮಾನಗಳೆಂದು ತಿಳಿಸಿ, 2025ರ ನವೆಂಬರ್ 3ರಂದು ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುವುದೆಂದು ಘೋಷಿಸಲಾಗಿತ್ತು. ಸಂಘವು ತನ್ನ ಪದಾಧಿಕಾರಿಗಳ ಮೂಲಕ ಸಾರ್ವಜನಿಕವಾಗಿ ಸಾವಿರಾರು ಜನರಿಗೆ ಟಿಕೆಟ್ ಮಾರಾಟ ಮಾಡಿ, ಲಕ್ಷಾಂತರ ರೂ.ಗಳನ್ನು ಅಕ್ರಮವಾಗಿ ಇದುವರೆಗೂ ಸಂಗ್ರಹಿಸಿದೆ. ಆದರೆ ಈವರೆಗೂ ವಿಜೇತರನ್ನು ಆಯ್ಕೆ ಮಾಡಿ ಬಹುಮಾನ ವಿತರಿಸುವ ಯಾವುದೇ ಪ್ರಕ್ರಿಯೆ ಮಾಡಿಲ್ಲ. ಇವರ ಮಾತನ್ನು ನಂಬಿದ ಜನರು ಲಾಟರಿ ಟಿಕೆಟ್ ಖರೀದಿಸಿ ನಷ್ಟ ಅನುಭವಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಲಾಟರಿ ನಡೆಸಲು ನಿಷೇಧವಿದ್ದರೂ ಕಾನೂನು ಬಾಹಿರವಾಗಿ  ಚಟುವಟಿಕೆ ನಡೆಸಿ, ಸಾರ್ವಜನಿಕರನ್ನು ವಂಚಿಸಿದವರ ವಿರುದ್ದ ಪ್ರಕರಣ ದಾಖಲಿಸಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ , ಈ ಸಂಬಂಧಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೆರೇಹಳ್ಳಿ ಅಂಜನ್ ನೇತೃತ್ವದಲ್ಲಿ ಅನೇಕ ಸಂತ್ರಸ್ತರು ದೂರು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *