ರಿಪ್ಪನ್ ಪೇಟೆ: ಗವಟೂರು ಗ್ರಾಮದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ 17ನೇ ವಾರ್ಷಿಕೋತ್ಸವದ ನಿಮಿತ್ತ ಮಂಗಳವಾರ ದಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತಿದೆ.

ಬುಧವಾರ (ಮಾ.18) ಬೆಳಿಗ್ಗೆ ಯಿಂದಲೇ ಶ್ರೀ ರಾಮೇಶ್ವರ ದೇವರಿಗೆ ರುದ್ರಾಭೀಷೇಕ,ರುದ್ರಹೋಮ,ಪಂಚಾಮೃತ ಅಭಿಷೇಕ, ಪರಿವಾರ ದೇವರಿಗಳಿಗೆ ಪೂಜೆ,ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಇದೇ ದಿನ ರಾತ್ರಿ 8-00 ರಿಂದ 200 ಗಂಟೆಯವರೆಗೆ ಕಾಲಮಿತಿ ಯಕ್ಷಗಾನವನ್ನು ಶ್ರೀ ಮಹಿಷಮರ್ಧಿನಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ನೀಲಾವರ ಇವರಿಂದ ” ನೀಲಾವರ ಕ್ಷೇತ್ರ ಮಹಾತ್ಮೆ ” ಎಂಬ ಪೌರಾಣಿಕ ಕಥಾನಕವನ್ನು ಆಡಿತೋರಿಸಲಿದ್ದಾರೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸಮಸ್ತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವಿಯ ತೀರ್ಥಪ್ರಸಾದವನ್ನು ಸ್ವೀಕರಿಸಿ,ಸಂಜೆಯ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳು ಶ್ರೀ ರಾಮೇಶ್ವರ ದೇವಸ್ಥಾನ ಸೇವಾ ಸಮಿತಿ ಗವಟೂರು ಇವರು ಕೋರಿದ್ದಾರೆ.


















Leave a Reply