42 ನೇ ರ‌್ಯಾಂಕ್ ಪಡೆದು ಸಿವಿಲ್ ನ್ಯಾಯಾಧೀಶೆಯಾದ ರಕ್ಷಿತಾ ಕೆ.ಎಸ್

ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 42 ನೇ ರ‌್ಯಾಂಕ್ ಪಡೆದು ಸಿವಿಲ್ ನ್ಯಾಯಾಧೀಶೆಯಾದ ರಕ್ಷಿತಾ ಕೆ.ಎಸ್
Spread the love

ಗ್ರಾಮೀಣ ಪ್ರತಿಭೆಯ ಮಹತ್ವದ ಸಾಧನೆ | ಸರ್ಕಾರಿ ಶಾಲೆಯಿಂದ  ಸಿವಿಲ್ ನ್ಯಾಯಾಧೀಶೆ

Rakshita k s has become a Civil Judge with Rank 42 — a great achievement for rural talent.

ಶಿವಮೊಗ್ಗ:ರ್ಕಾರಿ ಶಾಲೆಯಿಂದ ಉನ್ನತ ಶಿಕ್ಷಣದ ವರೆಗೆ ಸಾಗಿ ಇಂದು ಸಿವಿಲ್ ಜಡ್ಜ್ ಆಗಿ ಆಯ್ಕೆಯಾಗಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ  ಪಟ್ಟಣದ ಸಮೀಪ ಇರುವ ಕಾಳೇಶ್ವರ ಗ್ರಾಮದ ರಕ್ಷಿತಾ ಕೆ.ಎಸ್

ಕಾಳೇಶ್ವರ ಗ್ರಾಮದ ಸತ್ಯನಾರಾಯಣ ಹಾಗೂ ನಾಗರತ್ನ ದಂಪತಿಗಳ ಪುತ್ರಿ ಯಾದ ರಕ್ಷಿತಾ ಕೆ. ಎಸ್ ಉನ್ನತ ಶಿಕ್ಷಣದ ನಿಮಿತ್ತ ಶಿವಮೊಗ್ಗದ ನ್ಯಾಷನಲ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸಿ, ಶಿವಮೊಗ್ಗದ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ ನ್ಯಾಯಾಂಗ ವ್ಯವಸ್ಥೆಯ ಅನುಭವವನ್ನು ಪಡೆದುಕೊಂಡಿದ್ದಾರೆ.

ಈ ವರ್ಷ ಕರ್ನಾಟಕ ಉಚ್ಚ ನ್ಯಾಯಾಲಯ ನಡೆಸಿದ ನೇರ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದ್ಯಂತ ಸಾವಿರಾರು ವಕೀಲರು ಅರ್ಜಿ ಸಲ್ಲಿಸಿದ್ದರು. ಒಟ್ಟು  ಆಯ್ಕೆಯಾಗಿರುವಂತಹ 83 ವಕೀಲರ ಪೈಕಿ ರಕ್ಷಿತಾ ಕೆ.ಎಸ್ ಅವರು 42ನೇ ರಾಂಕ್ ಪಡೆದು ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪೂರೈಸಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದು ಗ್ರಾಮಸ್ಥರಿಗೆ ಕುಟುಂಬದವರಿಗೆ ಸಂತೋಷವನ್ನುಂಟು ಮಾಡಿದೆ.

ಮಲೆನಾಡಿನ ಗ್ರಾಮೀಣ ಭಾಗ ದಿಂದ ವಕೀಲಿಕೆ ವೃತ್ತಿಯಿಂದ ಅನುಭವ ಪಡೆದು  ನ್ಯಾಯಾಧೀಶೆಯಾಗಲು ಅವರ ಪರಿಶ್ರಮ, ಕುಟುಂಬದ ಬೆಂಬಲ ಕಾರಣವಾಗಿದ್ದು ಇವರ ಸಾಧನೆಯಿಂದ  ಅವರು ಓದಿದ ಸರ್ಕಾರಿ ಶಾಲೆ, ಕಾಲೇಜು ಮತ್ತು ಇಡೀ ಸುತ್ತೂರಿನ ಗ್ರಾಮಸ್ಥರಿಗೆ ಹೆಮ್ಮೆಯ ಸಂಗತಿ.

#BANGALORE #Shivamogga #rippanpete


Spread the love

Leave a Reply

Your email address will not be published. Required fields are marked *