ಶಿವಮೊಗ್ಗದಲ್ಲಿ ಮೊಳಗಿದ ವಂದೇ ಮಾತರಂ ನಾದ: ‘ಅದಮ್ಯ ಭಾರತ’ ಪ್ರದರ್ಶನ

Blue and Red Voter Education Banner 20260418 111324 0000 scaled ಶಿವಮೊಗ್ಗದಲ್ಲಿ ಮೊಳಗಿದ ವಂದೇ ಮಾತರಂ ನಾದ: 'ಅದಮ್ಯ ಭಾರತ' ಪ್ರದರ್ಶನ <br>
Spread the love

ಶಿವಮೊಗ್ಗ:ಗರದ ಕುವೆಂಪು ರಂಗಮಂದಿರವು ಇಂದು ಸಂಪೂರ್ಣವಾಗಿ ದೇಶಭಕ್ತಿಯ ಸಂಭ್ರಮದಲ್ಲಿ ಮಿಂದೆದ್ದಿತು. ‘ವಂದೇ ಮಾತರಂ’ ಗೀತೆಯು 150 ವರ್ಷಗಳನ್ನು ಪೂರೈಸುತ್ತಿರುವ ಐತಿಹಾಸಿಕ ಸಂದರ್ಭದ ಅಂಗವಾಗಿ ‘ಅನವರತ ಫೌಂಡೇಶನ್’ ಹಾಗೂ ‘ಸಂಸ್ಕಾರ ಭಾರತಿ’ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ನಿವೃತ್ತ ಕರ್ನಲ್ ಡಾ.ಎ.ಎಸ್. ರಘುನಾಥ್ ಹಾಗೂ ಜಿಲ್ಲಾ ಮಾಜಿ ಸೈನಿಕರ ಸಂಘದ ಸದಸ್ಯರು ಗೌರವಪೂರ್ವಕವಾಗಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ರಘುನಾಥ್ ಅವರು, ರಾಷ್ಟ್ರಗೀತೆ ಮತ್ತು ರಾಷ್ಟ್ರಭಕ್ತಿ ಗೀತೆಗಳು ನಮ್ಮ ದೇಶದ ಸೌಹಾರ್ದತೆಯ ಸಂಕೇತವಾಗಿವೆ ಎಂದು ಅಭಿಪ್ರಾಯಪಟ್ಟರು.

ತದನಂತರ ಉದ್ಘಾಟನೆಗೊಂಡ “ಅದಮ್ಯ ಭಾರತ” ವಿಶೇಷ ಪ್ರದರ್ಶಿನಿಯು ಸ್ವಾತಂತ್ರ್ಯ ಸಂಗ್ರಾಮದ ವೀರಗಾಥೆಗಳನ್ನು ನೆನಪಿಸುವಲ್ಲಿ ಯಶಸ್ವಿಯಾಯಿತು. ಶಿವಮೊಗ್ಗದ ವಿವಿಧ ಸಂಗೀತ ಶಾಲೆಗಳ ಮಕ್ಕಳಿಂದ ಏಕಕಾಲದಲ್ಲಿ ಮೊಳಗಿದ ‘ವಂದೇ ಮಾತರಂ’ ಸಮೂಹ ಗಾಯನವು ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿತು.

ಶಿವಮೊಗ್ಗದ ನೂರಾರು ದೇಶಪ್ರೇಮಿಗಳು, ವಿದ್ಯಾರ್ಥಿಗಳು ಮತ್ತು  ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಕಳೆ ತಂದರು. ಈ ಮಹತ್ವದ ಆಚರಣೆಯ ಮೊದಲ ಭಾಗವನ್ನು ಯಶಸ್ವಿಗೊಳಿಸಿದ ಸರ್ವರಿಗೂ ಅನವರತ ಫೌಂಡೇಶನ್ ಹಾಗೂ ಸಂಸ್ಕಾರ ಭಾರತಿ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ಇಂದು ಸಂಜೆ 06:00 ಗಂಟೆಗೆ ವಿಶೇಷ ಪ್ರಸ್ತುತಿ ಖ್ಯಾತ ವಾಗ್ಮಿ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರಿಂದ “ನಾನೇ ಭಾರತ – ತಾಯಿ ಭಾರತಿಗೆ ಕನ್ನಡದಾರತಿ” ಎಂಬ ಪ್ರೇರಣಾದಾಯಿ ಸಾಂಸ್ಕೃತಿಕ ಸಂಜೆ.

ರಾಷ್ಟ್ರದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಬರುವಂತೆ ಅನವರತ ಫೌಂಡೇಶನ್  ವಿನಂತಿಸಿದೆ.

img 20260324 wa00575179334445912482218 ಶಿವಮೊಗ್ಗದಲ್ಲಿ ಮೊಳಗಿದ ವಂದೇ ಮಾತರಂ ನಾದ: 'ಅದಮ್ಯ ಭಾರತ' ಪ್ರದರ್ಶನ <br>

Leave a Reply

Your email address will not be published. Required fields are marked *