ಶಿವಮೊಗ್ಗ: ಶಿವಮೊಗ್ಗ ತಾಲೂಕಿನ ಶೆಟ್ಟಿಕೆರೆ ಮತ್ತು ಶಾಂತಿ ಕೆರೆ ಗ್ರಾಮಸ್ಥರ ಆರಾಧ್ಯ ದೇವರಾದ ಶ್ರೀ ಗಂಗಾಧರೇಶ್ವರ ಸ್ವಾಮಿ ಮತ್ತು ಪರಿವಾರ ದೇವರ ಗಳ ಪ್ರತಿಷ್ಠಾಪನ ಮಹೋತ್ಸವವು ಮಾರ್ಚ್ 25,26,27 ಮೂರು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.

ಕಾರ್ಯಕ್ರಮದ ಮಾಹಿತಿಗಳು ಕೆಳಗಿನಂತಿವೆ 👇👇👇👇


ಮಾರ್ಚ್ 27 ರಂದು ಶುಕ್ರವಾರ ಬೆಳಗ್ಗೆ 9:00 ರಿಂದ ಗಣಪತಿ ಪೂಜೆ,ಪುಣ್ಯಹ, ರುದ್ರ ಹವನ ಧ್ವಜ ಅವರೋಹಣ, ಮಹಾಮಂಗಳಾರತಿ ಪ್ರಸಾದ ವಿನಿಯೋಗ ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದೆ.
ಸಂಜೆ 6 ಗಂಟೆಯಿಂದ ಸಭಾ ಕಾರ್ಯಕ್ರಮ:
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿಗಳಾದ ಎಸ್. ರಾಮಪ್ಪನವರು ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಮಧು ಬಂಗಾರಪ್ಪ,ಬಿ.ವೈ ರಾಘವೇಂದ್ರ ಶಾರದ ಪುರ್ಯ ನಾಯ್ಕ್ ,ಗೋಪಾಲಕೃಷ್ಣ ಬೇಳೂರು, ಉದ್ಯಮಿ ಮಹೇಂದ್ರ.ಎಂ ಸೇರಿದಂತೆ ಹಲವು ನಾಯಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಕೆಂಚಿಗಾಪುರದ ಶ್ರೀಧರ ಭಟ್ಟರು ಹಾಗೂ ಸಾಗರದ ಪರಮೇಶ್ವರ ಭಟ್ಟರು ಹಾಗೂ ಅರ್ಚಕ ಪ್ರಸನ್ನ ಭಟ್ಟರ ಇವರ ನೇತೃತ್ವದಲ್ಲಿ ನಡೆಯಲಿದೆ.
ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಪಡೆದು ದೇವರ ಪ್ರಸಾದ ಸ್ವೀಕರಿಸಬೇಕೆಂದು ಗಂಗಾಧರೇಶ್ವರ ದೇವಸ್ಥಾನ ನಿರ್ಮಾಣ ಸಮಿತಿಯ ಕಾರ್ಯಕಾರಿ ಸಮಿತಿಯವರು ವಿನಂತಿಸಿಕೊಂಡಿದ್ದಾರೆ.















Leave a Reply