ಹೊಸ ಪ್ರತಿಭೆಗಳು ಒಟ್ಟುಗೂಡಿ ಹೊಸ ಕನಸುಗಳನ್ನು ಕಟ್ಟುವಾಗ ಕಲೆಗೆ ಹೊಸ ದಾರಿ ದೊರೆಯುತ್ತದೆ. ಅಂತಹದೇ ಒಂದು ಪ್ರಯತ್ನವಾಗಿ ರೂಪುಗೊಂಡಿರುವ ಕಿರುಚಿತ್ರವೇ “ಕಾದಳು”. ಸಾಮಾಜಿಕ ಮನರಂಜನೆ ಮತ್ತು ಹೃದಯಸ್ಪರ್ಶಿ ಭಾವನೆಗಳನ್ನು ಒಳಗೊಂಡಿರುವ ಈ ಕಿರುಚಿತ್ರವನ್ನು ಯುವ ನಿರ್ದೇಶಕ ಪವನ್ ಕೆರೆಹಳ್ಳಿ ಅವರು ನಿರ್ದೇಶಿಸಿದ್ದಾರೆ.
“ಕಾದಳು” ಕೇವಲ ಪ್ರೇಮಕಥೆಯಷ್ಟೇ ಅಲ್ಲ; ಇದು ಸಂಬಂಧಗಳ ಬಾಂಧವ್ಯ, ಸ್ನೇಹದ ಆಳ, ಮತ್ತು ಸುಂದರ ಪ್ರೀತಿಯ ಪಯಣವನ್ನು ಹೇಳುವ ಮನಮುಟ್ಟುವ ಕಥೆಯಾಗಿದ್ದು, ಪ್ರೇಕ್ಷಕರ ಹೃದಯವನ್ನು ಸ್ಪರ್ಶಿಸುವುದಕ್ಕೆ ಸಿದ್ಧವಾಗಿದೆ. ಇಂದಿನ ಯುವಪೀಳಿಗೆಯ ಭಾವನೆಗಳು, ಸ್ನೇಹದ ಮಹತ್ವ ಮತ್ತು ಕುಟುಂಬ ಸಂಬಂಧಗಳ ಮೌಲ್ಯವನ್ನು ಚಿತ್ರವು ಸರಳವಾಗಿ ಹಾಗೂ ಮನರಂಜನೆಯ ಮೂಲಕ ತಲುಪಿಸುವ ಪ್ರಯತ್ನ ಮಾಡಿದೆ.

ಈ ಸಿನಿಮಾದಲ್ಲಿ ಪವನ್ ಅವರು ನಾಯಕನಾಗಿ ಅಭಿನಯಿಸಿದ್ದು, ಕಾವ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಣ್ಣಪ್ಪ ಶೆಟ್ಟಿ ಮತ್ತು ನಂದನ್ ಆಲುವಳ್ಳಿ ಅವರು ಅಣ್ಣನ ಪಾತ್ರದಲ್ಲಿ, ನಿರಂಜನ್ ಸ್ನೇಹಿತನ ಪಾತ್ರದಲ್ಲಿ, ಕವನ ಅತ್ತಿಗೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ ಮತ್ತು ಮದನ್,ಶರತ್ ರಂತಹ ಪ್ರತಿಭಾನ್ವಿತ ಸ್ಥಳೀಯ ಕಲಾವಿದರು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.

ಈ ಚಿತ್ರದಲ್ಲಿ ಅಭಿನಯಿಸಿರುವ ಬಹುತೇಕ ಕಲಾವಿದರು ಸ್ಥಳೀಯ ಯುವಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ಕಲೆಗೆ ಆಸಕ್ತಿ ಹೊಂದಿರುವ ಪ್ರತಿಭೆಗಳು ಎಂಬುದು ವಿಶೇಷ. ಯಾವುದೇ ದೊಡ್ಡ ಬ್ಯಾನರ್ ಅಥವಾ ದೊಡ್ಡ ಸಂಪನ್ಮೂಲಗಳಿಲ್ಲದೇ, ಕೇವಲ ಉತ್ಸಾಹ, ಸ್ನೇಹ ಮತ್ತು ಕಲೆಯ ಮೇಲಿನ ಪ್ರೀತಿಯಿಂದ ಈ ಚಿತ್ರವನ್ನು ನಿರ್ಮಿಸಿರುವುದು ನಿಜಕ್ಕೂ ಶ್ಲಾಘನೀಯ.
ಇಂತಹ ಪ್ರಯತ್ನಗಳು ಸ್ಥಳೀಯ ಮಟ್ಟದಲ್ಲಿ ಹೊಸ ಕಲಾವಿದರಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ ನಮ್ಮ ಪ್ರದೇಶದ ಪ್ರತಿಭೆಯನ್ನು ಹೊರಜಗತ್ತಿಗೆ ಪರಿಚಯಿಸುವ ಮಹತ್ವದ ಹೆಜ್ಜೆಯಾಗಿದೆ. ಯುವಕರು ತಮ್ಮ ಸೃಜನಶೀಲತೆಯನ್ನು ಸಿನಿಮಾದ ಮೂಲಕ ವ್ಯಕ್ತಪಡಿಸುವ ಈ ಪ್ರಯತ್ನಕ್ಕೆ ಪ್ರೇಕ್ಷಕರ ಬೆಂಬಲವೇ ದೊಡ್ಡ ಶಕ್ತಿ.
“ಕಾದಳು” ಕಿರುಚಿತ್ರದ ಪ್ರದರ್ಶನ ಮಾರ್ಚ್ 14 ಹಾಗೂ 15ರಂದು ನಡೆಯಲಿದೆ.
ರಿಪ್ಪನ್ ಪೇಟೆಯ ಹೊಸನಗರ ರಸ್ತೆಯಲ್ಲಿರುವ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಮಂದಿರದಲ್ಲಿ ಶನಿವಾರ (ಮಾರ್ಚ್ 14) ಮಧ್ಯಾಹ್ನದಿಂದ 5 ಪ್ರದರ್ಶನಗಳು,ಭಾನುವಾರ (ಮಾರ್ಚ್ 15) ಸಂಜೆಯಿಂದ 5 ಪ್ರದರ್ಶನಗಳು ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಪವನ್ : 8971857682, ನಿರಂಜನ್ : 8951651346
ಸ್ಥಳೀಯ ಯುವ ಪ್ರತಿಭೆಗಳ ಪರಿಶ್ರಮದಿಂದ ಮೂಡಿಬಂದಿರುವ ಈ ಚಿತ್ರವನ್ನು ಎಲ್ಲರೂ ನೋಡಿ ನಮ್ಮ ಊರಿನ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ನಮ್ಮ ಹೊಣೆ ಎಂಬ ಸಂದೇಶವನ್ನು ಈ ಸಂದರ್ಭದಲ್ಲಿಯೇ ಹೇಳುತ್ತಾ, “ಕಾದಳು” ಸಿನಿಮಾ ಯಶಸ್ವಿಯಾಗಲಿ, ಇನ್ನಷ್ಟು ಯುವ ಪ್ರತಿಭೆಗಳು ಚಿತ್ರರಂಗದಲ್ಲಿ ಬೆಳೆಯಲಿ ಎಂಬುದು ನಮ್ಮೆಲ್ಲರ ಆಶಯ.
















Leave a Reply