Toxic: ಯಶ್ ಜೊತೆ ಹುಮಾ ಖುರೇಷಿ- ಎಲಿಜಬೆತ್ ಪಾತ್ರದಲ್ಲಿ ಮಿಂಚಿದ ನಟಿ

IMG 20251228 WA0071 1 Toxic: ಯಶ್ ಜೊತೆ ಹುಮಾ ಖುರೇಷಿ- ಎಲಿಜಬೆತ್ ಪಾತ್ರದಲ್ಲಿ ಮಿಂಚಿದ ನಟಿ
Spread the love

ಬಾಲಿವುಡ್ ಬ್ಯೂಟಿ ಹುಮಾ ಖುರೇಷಿ ಅವರು ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ಭಾಗವಾಗಿದ್ದಾರೆ. ಎಲಿಜಬೆತ್ ಎಂಬ ಪವರ್ ಫುಲ್ ಪಾತ್ರದಲ್ಲಿ ಹುಮಾ‌ ಜೀವ ತುಂಬಿದ್ದಾರೆ. ಚಿತ್ರತಂಡ ಅವರ ಪಾತ್ರದ ಲುಕ್ ಅನ್ನು ರಿವೀಲ್ ಮಾಡಿದೆ.

ಯಶ್‌ ನಟನೆಯ ಈ ಸಿನಿಮಾದಲ್ಲಿ ಎಲಿಜಬೆತ್ ಎಂಬ ಪಾತ್ರ ಮಾಡಿದ್ದಾರೆ. ಹೆಸರಿಗೆ ತಕ್ಕಂತೆಯೇ ಈ ಪಾತ್ರ ಅದ್ಧೂರಿಯಾಗಿ ಮೂಡಿ ಬಂದಿದೆ. ರೆಟ್ರೋ ಕಾಲದ ಐಷಾರಾಮಿ ಕಾರಿನ ಎದುರಿನಲ್ಲಿ ಗ್ಲ್ಯಾಮರಸ್ ಡ್ರೆಸ್ ಧರಿಸಿ ನಿಂತಿರುವ ನಟಿ ಹುಮಾ ಅವರ ಲುಕ್ ಗಮನ ಸೆಳೆಯುತ್ತಿದೆ. ಇದನ್ನು ನೋಡಿದ ಬಳಿಕ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.

ಇತ್ತೀಚೆಗೆ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ ಲುಕ್ ಅನಾವರಣ ಮಾಡಲಾಗಿತ್ತು.‌ಈಗ ಹುಮಾ ಪಾತ್ರದ ಲುಕ್ ರಿಲೀಸ್ ಮಾಡಿದ್ದಾರೆ.

‘ಟಾಕ್ಸಿಕ್’ ಸಿನಿಮಾಗೆ ಯಶ್ ಮತ್ತು ಗೀತು ಮೋಹನ್ ದಾಸ್ ಚಿತ್ರಕಥೆ ಬರೆದಿದ್ದಾರೆ. ಗೀತು ನಿರ್ದೇಶನ ಮಾಡಿದ್ದಾರೆ. ಇದೇ 2026ರ ಮಾರ್ಚ್ 19ರಂದು ಟಾಕ್ಸಿಕ್ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.

Leave a Reply

Your email address will not be published. Required fields are marked *