ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ ಹಾಗೂ ಕೃತಿಕಾ ರವಿಂದ್ರ ಹೊಸ ಸೀರಿಯಲ್ ಮೂಲಕ ಜತೆಯಾಗಿ ಬರುತ್ತಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಅಗ್ನಿಸಾಕ್ಷಿ, ಬಿಗ್ ಬಾಸ್ ಮೂಲಕ ಮೋಡಿ ಮಾಡಿದ್ದ ಚೆಲುವೆ ವೈಷ್ಣವಿ ಅವರು ಕಳೆದ ವರ್ಷ ಸೀತಾರಾಮ ಸೀರಿಯಲ್ ಮುಗಿಯುತ್ತಿದ್ದಂತೆ ಮದುವೆಯಾಗಿದ್ರು. ಮತ್ತೆ ಅವರು ಬಣ್ಣ ಹಚ್ಚಲ್ವಾ? ಎಂದು ನಿರಾಸೆಯಲ್ಲಿದ್ದ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೆಸರಿಡದ ಸೀರಿಯಲ್‌ಗೆ ನಟಿ ಓಕೆ ಎಂದಿದ್ದಾರೆ.
ಮಲೆನಾಡಿನ ಬೆಡಗಿ ಕೃತಿಕಾ ರವೀಂದ್ರ ಈ ಹಿಂದೆ ರಾಧಾ ಕಲ್ಯಾಣ, ಬಿಗ್ ಬಾಸ್, ಭೂಮಿಗೆ ಬಂದ ಭಗವಂತ ಎಂಬ ಸೀರಿಯಲ್ ಮಾಡಿದ್ದರು. ಈಗ ವೈಷ್ಣವಿಯೊಂದಿಗೆ ಹೊಚ್ಚ ಹೊಸ ಕಥೆ ಹೇಳೋಕೆ ರೆಡಿಯಾಗಿದ್ದಾರೆ. ಯಾವುದೇ ಪಾತ್ರ ಕೊಟ್ರು ಅಚ್ಚುಕಟ್ಟಾಗಿ ನಟಿಸುತ್ತಾರೆ. ಸದ್ಯ ಸೀರಿಯಲ್‌ನ ಅಧಿಕೃತ ಪ್ರೋಮೋಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.
#Vaishnavigowda #Kruttikaravindra #Biggboss #Agnisakshi #Radhakalyanaserial
















Leave a Reply