Travel Alert 🚫 Hulikal Ghat Closed!”
ಶಿವಮೊಗ್ಗ: ಹುಲಿಕಲ್ ಘಾಟ್‌ನಲ್ಲಿ ಸಂಭವಿಸಿರುವ ಭೂಕುಸಿತದ ಪರಿಣಾಮ ಪ್ರಮುಖ ಸಂಚಾರ ಮಾರ್ಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಪ್ರಯಾಣಿಕರು ಮತ್ತು ವಾಹನ ಸವಾರರು ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಕೇಂದ್ರ ಮೋಟಾರ್ ವಾಹನ ಕಾಯ್ದೆ 1998ರ ಕಲಂ 115 ಹಾಗೂ ಕರ್ನಾಟಕ ಮೋಟಾರ್ ವಾಹನ ನಿಯಮಾವಳಿ 1989ರ ಕಲಂ 221(ಎ)(2) ಮತ್ತು (5)ರ ಅನ್ವಯ ಈ ಆದೇಶವನ್ನು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಹೊರಡಿಸಿದ್ದಾರೆ.
🚧 ಸೂಚಿಸಲಾದ ಪರ್ಯಾಯ ಮಾರ್ಗಗಳು:
🔴 ತೀರ್ಥಹಳ್ಳಿ → ರಾವೆ → ಕಾನುಗೋಡು → ನಗರ → ಕೊಲ್ಲೂರು → ಕುಂದಾಪುರ ರಸ್ತೆ
🔴 ತೀರ್ಥಹಳ್ಳಿ → ಯಡೂರು → ಮಾಸ್ತಿಕಟ್ಟೆ → ಕಾನುಗೋಡು → ನಗರ → ಕೊಲ್ಲೂರು → ಕುಂದಾಪುರ ರಸ್ತೆ
🔴 ಶಿವಮೊಗ್ಗ → ಹೊನ್ನಾವರ ರಾಷ್ಟ್ರೀಯ ಹೆದ್ದಾರಿ → ಹೊನ್ನಾವರ → ಭಟ್ಕಾಳ → ಬೈಂದೂರು → ಕುಂದಾಪುರ ರಸ್ತೆ
ಅನಗತ್ಯ ಪ್ರಯಾಣವನ್ನು ತಪ್ಪಿಸಿ ಸುರಕ್ಷಿತ ಮಾರ್ಗಗಳನ್ನು ಮಾತ್ರ ಬಳಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.















Leave a Reply