ವ್ಯಕ್ತಿ ಆರಾಧನೆಯಿಂದ ಪಕ್ಷ ಬೆಳೆಯುವುದಿಲ್ಲ,ನೀವು ಬೆಳೆಯುವುದರ ಜೊತೆಗೆ ಪಕ್ಷವನ್ನೂ ಬೆಳೆಸಲು ಶ್ರಮಿಸಿ :ಹರತಾಳು ಹಾಲಪ್ಪ

Add a heading 20260725 185633 0000 ವ್ಯಕ್ತಿ ಆರಾಧನೆಯಿಂದ ಪಕ್ಷ ಬೆಳೆಯುವುದಿಲ್ಲ,ನೀವು ಬೆಳೆಯುವುದರ ಜೊತೆಗೆ ಪಕ್ಷವನ್ನೂ ಬೆಳೆಸಲು ಶ್ರಮಿಸಿ :ಹರತಾಳು ಹಾಲಪ್ಪ
Spread the love

ಹೊಸನಗರ: ಕ್ಷದಲ್ಲಿ ದುಡಿಯುವುದರಿಂದಲೇ ಕಾರ್ಯಕರ್ತರಿಗೆ ಗುರುತಿನ ಜೊತೆಗೆ ಬೆಳವಣಿಗೆಯ ಅವಕಾಶ ದೊರೆಯುತ್ತದೆ. ಆದ್ದರಿಂದ ಪಕ್ಷದಲ್ಲಿ ನೀವು ಬೆಳೆಯುವುದರ ಜೊತೆಗೆ ಪಕ್ಷವನ್ನೂ ಬೆಳೆಸಲು ಶ್ರಮಿಸಬೇಕು, ವ್ಯಕ್ತಿ ಆರಾಧನೆಯಿಂದ ಪಕ್ಷ ಬೆಳೆಯುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕ ಹರತಾಳು ಹಾಲಪ್ಪ ಕರೆ ನೀಡಿದರು.

ಪಟ್ಟಣದ ಬಿಜೆಪಿ ಕಚೇರಿ ಆವರಣದಲ್ಲಿ ನಡೆದ ತಾಲೂಕು ಒಬಿಸಿ ಮೋರ್ಚಾ ಪದಗ್ರಹಣ ಸಮಾರಂಭ ಹಾಗೂ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಪರವಾಗಿ ನಿರಂತರವಾಗಿ ದುಡಿಯುವ ಕಾರ್ಯಕರ್ತರನ್ನು ಜನರು ಗುರುತಿಸುತ್ತಾರೆ. ಶಾಲು ಹಾಕಿಕೊಂಡು ಓಡಾಟ ನಡೆಸುವುದಕ್ಕಿಂತ ಜನರ ನಡುವೆ ಕೆಲಸ ಮಾಡುವುದೇ ಮುಖ್ಯ ಎಂದರು.

ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿವೆಯೇ ಎಂಬುದನ್ನು ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಬಡವರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸಿ ಅವರ ನೆರವಿಗೆ ಧಾವಿಸಬೇಕು ಎಂದು ತಿಳಿಸಿದರು.

ಇನ್ನೂ ಒಂದೂವರೆ ವರ್ಷದಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು, ಅದಕ್ಕೂ ಮುನ್ನ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯಲಿವೆ. ಆದ್ದರಿಂದ ಕಾರ್ಯಕರ್ತರು ಇಂದಿನಿಂದಲೇ ಗ್ರಾಮ ಮಟ್ಟದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ ಜನಸಂಪರ್ಕ ಹೆಚ್ಚಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಬಿಜೆಪಿ ಹೊಸನಗರ ಮಂಡಲದ ವತಿಯಿಂದ ಒಬಿಸಿ ಮೋರ್ಚಾದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಘೋಷಣೆ ನಡೆಯಿತು

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎನ್. ಸತೀಶ್, ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಎಂ.ಎನ್. ಸುದಾಕರ್, ರಾಜೇಶ್ ಬುಕ್ಕಿವರೆ, ಮಹೇಶ್ ಹುಲ್ಮರ್, ಲೋಕೇಶ್, ಗಣಪತಿ ಬೆಳಗೋಡು, ಎನ್.ಆರ್. ದೇವಾನಂದ, ಎ.ವಿ. ಮಲ್ಲಿಕಾರ್ಜುನ, ಬಿ. ಯುವರಾಜ್, ಮೆಣಸೆ ಆನಂದ, ನಾಗರಾಜ್ ಸ್ವಾಮಿ, ರಾಘವೇಂದ್ರ ಕಲ್ಕಪ್ಪ, ರೇಖಾ ಮಹೇಶ್, ರೇಖಾ ರವಿ, ಕಾಪಿ ಮಹೇಶ್, ಸೋಮಶೇಖರ್ ಅರುಗೋಡಿ, ಗಣಪತಿ, ಯೋಗೇಂದ್ರ ಕತ್ರಿಕೊಪ್ಪ, ಮಂಡಾಣಿ ಮೋಹನ, ಚಾಲಿಕ್ಯ ಬಸವರಾಜ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *