ತಪ್ಪಿದ ಭಾರಿ ದುರಂತ
ರಿಪ್ಪನ್‌ಪೇಟೆ: ಭಾನುವಾರ ಸಂಜೆ ಸುರಿದ ಭಾರಿ ಮಳೆಯೊಂದಿಗೆ ಬಿರುಸಿನ ಗಾಳಿ ಬೀಸಿದ ಪರಿಣಾಮ ಸಮೀಪದ ಬೆಳ್ಳೂರು ಗ್ರಾಮದಲ್ಲಿ ಮನೆ ಮೇಲೆ ತೆಂಗಿನ ಮರ ಉರುಳಿ ಬಿದ್ದ ಘಟನೆ ಸಂಭವಿಸಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಅದೃಷ್ಟವಶಾತ್ ಮನೆಯಲ್ಲಿದ್ದ ಐವರು ಸದಸ್ಯರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಗ್ರಾಮದ ನಿವಾಸಿ ರತ್ನಮ್ಮ ಅವರಿಗೆ ಸೇರಿದ ಹಂಚಿನ ಮನೆಯ ಮುಂದೆ ಇದ್ದ ದೊಡ್ಡ ತೆಂಗಿನ ಮರ ಗಾಳಿಯ ತೀವ್ರತೆಗೆ ತಡೆಯಲಾಗದೆ ಏಕಾಏಕಿ ಮನೆ ಮೇಲ್ಛಾವಣಿಗೆ ಉರುಳಿ ಬಿದ್ದಿದೆ. ಘಟನೆ ಸಂಭವಿಸಿದ ವೇಳೆಯಲ್ಲಿ ಕುಟುಂಬದ ಐವರು ಮನೆಯೊಳಗೆ ಇದ್ದರು. ಭಾರೀ ಶಬ್ದ ಕೇಳಿದ ತಕ್ಷಣ ಅವರು ಹೊರಗೆ ಓಡಿ ಬಂದ ಕಾರಣ ಯಾವುದೇ ದುರಂತ ಸಂಭವಿಸಿಲ್ಲ.
ಮರ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿಯ ಹಂಚುಗಳು ಜಾರಿಬಿದ್ದು ಭಾಗಶಃ ಹಾನಿಗೊಳಗಾಗಿವೆ. ಬಳಿಕ ಸುರಿದ ಮಳೆಯಿಂದ ಮನೆಯೊಳಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಬಳಿಕ ಸ್ಥಳೀಯರು ಮನೆ ಸುತ್ತಮುತ್ತ ಸೇರಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಮನೆಯ ಮೇಲ್ಛಾವಣಿಗೆ ಉಂಟಾದ ಹಾನಿಯಿಂದ ಕುಟುಂಬಸ್ಥರು ಆತಂಕದಲ್ಲಿ ಕಾಲ ಕಳೆಯುವಂತಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಘಟನೆ ಬಳಿಕ ಸ್ಥಳೀಯರು ಮನೆ ಸುತ್ತಮುತ್ತ ಸೇರಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಮನೆಯ ಮೇಲ್ಛಾವಣಿಗೆ ಉಂಟಾದ ಹಾನಿಯಿಂದ ಕುಟುಂಬಸ್ಥರು ಆತಂಕದಲ್ಲಿ ಕಾಲ ಕಳೆಯುವಂತಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.














Leave a Reply