
ರಿಪ್ಪನ್‌ಪೇಟೆ: ಪಟ್ಟಣದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀರಾಮಮಂದಿರದಲ್ಲಿ ಭಾನುವಾರ ಅಧಿಕ ಜೇಷ್ಠ ಮಾಸದ ಅಂಗವಾಗಿ ಲೋಕ ಕಲ್ಯಾಣಾರ್ಥ ಶ್ರೀ ವಿಷ್ಣು ಸಹಸ್ರನಾಮ ಪಠಣ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ಭಕ್ತಿಭಾವದಿಂದ ಸಂಪನ್ನಗೊಂಡಿತು.
ಈ ವೇಳೆ ಶ್ರೀ ವಿಷ್ಣು ಸಹಸ್ರನಾಮ ಪಠಣ, ಶ್ರೀ ವಿಷ್ಣು ಅಷ್ಟೋತ್ತರ ಹಾಗೂ ಶ್ರೀ ಲಕ್ಷ್ಮೀ ಅಷ್ಟೋತ್ತರ ಪಾರಾಯಣವನ್ನು ಭಕ್ತರು ಶ್ರದ್ಧಾಭಕ್ತಿಯಿಂದ ನಡೆಸಿದರು. ಸಮಸ್ತ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರ ಕ್ಷೇಮಾಭಿವೃದ್ಧಿ, ಹಿಂದೂರಾಷ್ಟ್ರದ ಅಭ್ಯುದಯ ಮತ್ತು ಶ್ರೇಯಸ್ಸಿಗಾಗಿ ಸರ್ವಶಕ್ತ ಶ್ರೀ ಮಹಾವಿಷ್ಣುವಿನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ನಂತರ ಭಜನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಸಮಾಜ ಬಾಂಧವರಿಗೆ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಜಿಎಸ್‌ಬಿ ಸಮಾಜದ ಅಧ್ಯಕ್ಷರಾದ ಗಣೇಶ್ ಕಾಮತ್ , ರಾಮದಾಸ್ ಭಟ್,ಡಿ. ನರಸಿಂಹ ಕಾಮತ್, ದೀಪಕ್ ಭಗತ್, ಜೆ.ರಾಧಾಕೃಷ್ಣ ರಾವ್ , ಹರೀಶ್ ಸರಾಫ್ ,ಉಮೇಶ್ ಭಟ್, ಹರೀಶ್ ಪ್ರಭು, ರಾಘವೇಂದ್ರ ಕಾಮತ್, ಕಸ್ತೂರಿ ನಾಯಕ್, ಗೋದಮ್ಮ ,ಸಂದ್ಯಾ ಕಾಮತ್, ಯಶೋಧ ಶೆಣೈ, ಶುಭ ಶಶಿಧರ್ ಪೈ, ಪೂರ್ಣಿಮಾ ಕಿಣಿ, ಸಂಧ್ಯಾ ಪ್ರಭು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.



















Leave a Reply