ರಿಪ್ಪನ್‌ಪೇಟೆ ರಸ್ತೆ ಅಗಲಿಕರಣ: ವಾಹನ ನಿಲುಗಡೆ ಸಮಸ್ಯೆ ಕುರಿತು ನಾಳೆ (ಜೂನ್.4) ಸಾರ್ವಜನಿಕ ಸಭೆ|“ನಿಮ್ಮ ಸಲಹೆ ನೀಡಿ, ಪಟ್ಟಣ ಅಭಿವೃದ್ಧಿಗೆ ಕೈಜೋಡಿಸಿ”

Screenshot 20260603 203010 Canva ರಿಪ್ಪನ್‌ಪೇಟೆ ರಸ್ತೆ ಅಗಲಿಕರಣ: ವಾಹನ ನಿಲುಗಡೆ ಸಮಸ್ಯೆ ಕುರಿತು ನಾಳೆ (ಜೂನ್.4) ಸಾರ್ವಜನಿಕ ಸಭೆ|“ನಿಮ್ಮ ಸಲಹೆ ನೀಡಿ, ಪಟ್ಟಣ ಅಭಿವೃದ್ಧಿಗೆ ಕೈಜೋಡಿಸಿ”
Spread the love
img 20260110 wa00005024004809602330629 ರಿಪ್ಪನ್‌ಪೇಟೆ ರಸ್ತೆ ಅಗಲಿಕರಣ: ವಾಹನ ನಿಲುಗಡೆ ಸಮಸ್ಯೆ ಕುರಿತು ನಾಳೆ (ಜೂನ್.4) ಸಾರ್ವಜನಿಕ ಸಭೆ|“ನಿಮ್ಮ ಸಲಹೆ ನೀಡಿ, ಪಟ್ಟಣ ಅಭಿವೃದ್ಧಿಗೆ ಕೈಜೋಡಿಸಿ”

ರಿಪ್ಪನ್‌ಪೇಟೆ: ಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್) ವ್ಯವಸ್ಥೆ ಕುರಿತಂತೆ ಮಹತ್ವದ ಸಭೆಯನ್ನು ಗ್ರಾಮ ಪಂಚಾಯತ್ ಹಾಗೂ ಪೊಲೀಸ್ ಇಲಾಖೆ ಸಂಯುಕ್ತವಾಗಿ ಆಯೋಜಿಸಿವೆ.

ನಾಳೆ (ಜೂನ್. 4) ರಂದು ಮಧ್ಯಾಹ್ನ 12 ಗಂಟೆಗೆ ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಪಟ್ಟಣದ ಸಂಚಾರ ವ್ಯವಸ್ಥೆ ಸುಧಾರಣೆ, ವಾಹನ ದಟ್ಟಣೆ ನಿಯಂತ್ರಣ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ರೂಪಿಸುವ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.

ಸಭೆಯಲ್ಲಿ ಪಟ್ಟಣದ ಸರ್ವ ಮುಖಂಡರು, ಅಂಗಡಿ ಮಾಲೀಕರು, ವಾಹನ ಸವಾರರು ಹಾಗೂ ಸಾರ್ವಜನಿಕರು ಭಾಗವಹಿಸಿ ತಮ್ಮ ಸಲಹೆ-ಅಭಿಪ್ರಾಯಗಳನ್ನು ನೀಡುವಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜು ರೆಡ್ಡಿ ಅವರು ಕೋರಿದ್ದಾರೆ.

ರಿಪ್ಪನ್‌ಪೇಟೆ ಪಟ್ಟಣವು ದಿನದಿಂದ ದಿನಕ್ಕೆ ವ್ಯಾಪಾರ ಹಾಗೂ ವಾಹನ ಸಂಚಾರದ ದೃಷ್ಟಿಯಿಂದ ಬೆಳೆಯುತ್ತಿದ್ದು, ರಸ್ತೆ ಅಗಲಿಕರಣದೊಂದಿಗೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ರೂಪಿಸುವುದು ಅಗತ್ಯವಾಗಿದೆ. ಸಾರ್ವಜನಿಕರ ಸಹಕಾರ ಹಾಗೂ ಸಲಹೆಗಳೊಂದಿಗೆ ಉತ್ತಮ ನಿರ್ಧಾರ ಕೈಗೊಳ್ಳುವ ಉದ್ದೇಶದಿಂದ ಈ ಸಭೆ ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಪಟ್ಟಣದ ಹಿತದೃಷ್ಟಿಯಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

img 20260324 wa00561235637178531040405 ರಿಪ್ಪನ್‌ಪೇಟೆ ರಸ್ತೆ ಅಗಲಿಕರಣ: ವಾಹನ ನಿಲುಗಡೆ ಸಮಸ್ಯೆ ಕುರಿತು ನಾಳೆ (ಜೂನ್.4) ಸಾರ್ವಜನಿಕ ಸಭೆ|“ನಿಮ್ಮ ಸಲಹೆ ನೀಡಿ, ಪಟ್ಟಣ ಅಭಿವೃದ್ಧಿಗೆ ಕೈಜೋಡಿಸಿ”
img 20260515 wa00066132243020844242158 ರಿಪ್ಪನ್‌ಪೇಟೆ ರಸ್ತೆ ಅಗಲಿಕರಣ: ವಾಹನ ನಿಲುಗಡೆ ಸಮಸ್ಯೆ ಕುರಿತು ನಾಳೆ (ಜೂನ್.4) ಸಾರ್ವಜನಿಕ ಸಭೆ|“ನಿಮ್ಮ ಸಲಹೆ ನೀಡಿ, ಪಟ್ಟಣ ಅಭಿವೃದ್ಧಿಗೆ ಕೈಜೋಡಿಸಿ”

Leave a Reply

Your email address will not be published. Required fields are marked *