ಹಾವು ಕಚ್ಚಿ 6 ತಿಂಗಳ ಗರ್ಭಿಣಿ ಮಹಿಳೆ ಸಾವು!!

Blue and Red Voter Education Banner 20260503 140512 0000 scaled ಹಾವು ಕಚ್ಚಿ 6 ತಿಂಗಳ ಗರ್ಭಿಣಿ ಮಹಿಳೆ ಸಾವು!!
Spread the love

ಆನಂದಪುರ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವಿನ ಕಡಿತಕ್ಕೊಳಗಾಗಿ ಆರು ತಿಂಗಳ ಗರ್ಭಿಣಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಸಾಗರ ತಾಲೂಕಿನ ಆನಂದಪುರದ ಸುಳಗೋಡು ಗ್ರಾಮದಲ್ಲಿ ನಡೆದಿದೆ.

img 20260423 wa0056764009029086300603 ಹಾವು ಕಚ್ಚಿ 6 ತಿಂಗಳ ಗರ್ಭಿಣಿ ಮಹಿಳೆ ಸಾವು!!
img 20260110 wa00001917081065852708226 ಹಾವು ಕಚ್ಚಿ 6 ತಿಂಗಳ ಗರ್ಭಿಣಿ ಮಹಿಳೆ ಸಾವು!!



ಘಟನೆಯ ವಿವರ:
ಸುಳಗೋಡು ಗ್ರಾಮದ ನಿವಾಸಿ ವೀರಭದ್ರ ಎಂಬುವವರ ಪತ್ನಿ ಸ್ವಾತಿ (26 ವರ್ಷ) ಮೃತಪಟ್ಟ ದುರ್ದೈವಿ.

ಸ್ವಾತಿ ಅವರು ಆರು ತಿಂಗಳ ಗರ್ಭಿಣಿಯಾಗಿದ್ದರು. ಶನಿವಾರ ಮೇ 02 ರಂದು ಮಧ್ಯಾಹ್ನ ಸುಮಾರು 3:30ರ ಸಮಯದಲ್ಲಿ ಸುಳಗೋಡು ಗ್ರಾಮದಲ್ಲಿ ಶುಂಠಿ ಕೆಲಸಕ್ಕೆ ತನ್ನ ಪತಿ ಮತ್ತು ಇತರ ಕೂಲಿ ಕಾರ್ಮಿಕರೊಂದಿಗೆ  ಹೋಗಿದ್ದರು.

ಕೆಲಸದ ನಡುವೆ ಎಲ್ಲರೂ ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ, ಸ್ವಾತಿ ಅವರ ಬಲಗಾಲಿನ ಮೊಣಕಾಲಿಗೆ ವಿಷಪೂರಿತ ಹಾವು ಕಚ್ಚಿದೆ.

img 20260427 wa00132732713197471306253 ಹಾವು ಕಚ್ಚಿ 6 ತಿಂಗಳ ಗರ್ಭಿಣಿ ಮಹಿಳೆ ಸಾವು!!



ತಕ್ಷಣವೇ ಅವರನ್ನು ಸ್ಥಳೀಯವಾಗಿ ಉಪಚರಿಸಿ, ಕಣ್ಣೂರಿನ ನಾಟಿ ವೈದ್ಯರ ಬಳಿ ಔಷಧಿ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಆನಂದಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಆಸ್ಪತ್ರೆಗೆ ತಲುಪಿದಾಗ ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಮೃತ ದೇಹವನ್ನು ವೈದ್ಯಕೀಯ ಪರೀಕ್ಷೆಗಾಗಿ ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣ ದಾಖಲು: ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Leave a Reply

Your email address will not be published. Required fields are marked *