ಗೋಶಾಲೆಗಳಿಗೆ ಮೇವು, ಅಂಬ್ಯುಲೆನ್ಸ್ ವ್ಯವಸ್ಥೆ: ಗೋವರ್ಧನ ಟ್ರಸ್ಟ್ ವಿಶೇಷ ಕಾರ್ಯ

ಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ನೇತೃತ್ವದ ಗೋವರ್ಧನ ಟ್ರಸ್ಟ್ ವತಿಯಿಂದ ಜೂನ್ ತಿಂಗಳ ಪೂರ್ತಿ “ಗೋ ಸೇವಾ ಮಾಸ” ಅಭಿಯಾನ ಆಯೋಜಿಸಿರುವುದು ಶ್ಲಾಘ ನೀಯ ಎಂದು ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಇಂದು ಶ್ರೀ ಬೆಕ್ಕಿನ ಕಲ್ಮಠದ ಸಭಾಂಗಣದಲ್ಲಿ ಗೋ ವರ್ಧನ ಟ್ರಸ್ಟ್ ಆಯೋಜಿಸಿದ್ದ “ಗೋ ಸೇವಾ ಮಾಸ”ದ ಅಭಿ ಯಾನದ ಅಂಗವಾಗಿ ಟ್ರಸ್ಟ್ ಹೊರ ತಂದ ಗೋವರ್ಧನ ಟ್ರಸ್ಟ್‌ನ ಇಲ್ಲಿಯ ವರೆಗಿನ ಕಾರ್ಯ ಚಟು ವಟಿಕೆಗಳು ಮತ್ತು ಮುಂದಿನ ಕಾರ್ಯಗಳ ಕುರಿತಾದ ಪರಿಚಯಪತ್ರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಗೋವೇ ಒಂದು ಸಂಪತ್ತು,ಇಂದು ಗೋ ಸಂಪತ್ತು ಉಳಿದಿಲ್ಲ. ಇಂದು ಸಮಾಜದಲ್ಲಿ ಗೋವನ್ನು ಕಡೆಗಾಣಿಸಿರುವುದು ದೊಡ್ಡ ದುರಂತೆ ಎಂದ ಶ್ರೀಗಳು ಅಂದು ಗೋವುಗಳ ಸಂಖ್ಯೆಯ ಮೇಲೆ ಶ್ರೀಮಂತಿಕೆಯನ್ನು ಗುರುತಿಸಲಾಗುತ್ತಿತ್ತು. ಪ್ರತಿ ಮನೆ ಮನೆಗಳಲ್ಲೂ ಗೋಶಾಲೆ ಇರುತ್ತಿತ್ತು. ಇಂದು ಗೋ ರಕ್ಷಣೆಗೆ ಅನೇಕರು ಬೇರೆ ಬೇರೆ ಶಿರೋನಾಮೆಯಡಿಯಲ್ಲಿ ಸಂಸ್ಥೆಗಳನ್ನು ಆರಂಭಿಸಿ ಗೋ ಸೇವೆಗೆ ಮುಂದಾಗುತ್ತಿದ್ದಾರೆ. ಈ ಎಲ್ಲ ಸಂಸ್ಥೆಗಳಿಗೆ ಗೋ ಸೇವೆಗೆಂದೇ ಮುಡುಪಾಗಿರುವ ಗೋವರ್ಧನ ಟ್ರಸ್ಟ್ ಕಿರೀಟಪ್ರಾಯವಾಗಿದೆ ಎಂದರು.

ಆನಂದಪುರಂನ ಮಠ ದಲ್ಲಿಯ ನೂರಾರು ವರ್ಷಗಳಿಂದ ಗೋಶಾಲೆ ಇತ್ತು. ಈಗ ಪುನ: ಅದನ್ನು ಪುನರುಜ್ಜಿ ವನಗೊಳಿಸಲಾಗಿದೆ. ಒಂದು ಗೋ ಶಾಲೆ ನಡೆಸುವುದೇ ಕಷ್ಟ.ಗೋರ್ಧನ ಟ್ರಸ್ಟ್ ಇಲ್ಲಿನ ಸುತ್ತ ಮುತ್ತ ಲಿನ 4-5 ಗೋ ಶಾಲೆಗಳಿಗೆ ಮೇವನ್ನು ಒದಗಿಸುವುದರ ಜೊತೆಗೆ ಅದಕ್ಕಾಗಿಯೇ ಒಂದು ಅಂಬ್ಯೂಲೆನ್ಸ್ ನ್ನು ಕೂಡ ಸಿದ್ದ ಮಾಡಿಕೊಂಡಿರುವುದು ಇತರ ಗೋರಕ್ಷಣೆ ಸಂಸ್ಥೆಗಳಿಗೆ ಪ್ರೇರಣೆಯಾಗಿದೆ ಎಂದರು.
ಗೋವರ್ಧನ ಟ್ರಸ್ಟ್‌ನ ಮುಖ್ಯಸ್ಥ ಕೆ.ಎಸ್. ಈಶ್ವರಪ್ಪ ಮಾತನಾಡಿ, ಈಗಾಗಲೇ ಶಿವಮೊಗ್ಗದಲ್ಲಿ 3 ಗೋಶಾಲೆಗಳಿವೆ ಈಗ ವಿಶ್ವಬಂಧು ಎಂಬ ಮತ್ತೊಂದು ಗೋಶಾಲೆ ಪ್ರಾರಂಭಿಸಲಾಗಿದೆ. ದಾನಗಳು ಮೇವು ಬೆಳೆಗಾಗಿ 22 ಎಕರೆ ಜಾಗವನ್ನು ನೀಡಿದ್ದಾರೆ. ಅದರಲ್ಲಿ ಮೇವು ಬೆಳೆದು ಎಲ್ಲಾ ಗೋ ಶಾಲೆಗಳಿಗೆ ನೀಡಲಾಗುವುದು. ಶ್ರೀ ರಾಮಚಂದ್ರಾಪುರ ಮಠವು ಈಗಾಗಲೇ 25 ಹಸುಗಳನ್ನು ನೀಡಿದೆ. ಇನ್ನೂ 250 ಹಸು ಗಳನ್ನು ನೀಡುವುದಾಗಿ ಭರವಸೆ ನೀಡಿದೆ. ಪ್ರತಿ ಗೋ ಪ್ರೇಮಿಯೂ ಇದರಲ್ಲಿ ಭಾಗವಹಿಸಬಹುದು. ಮಾಸಿಕ 100 ರೂ. ನೀಡಿ ಗೋವರ್ಧನ ಟ್ರಸ್ಟ್ ನ ಸದಸ್ಯ ರಾಗಲು ಅನೇಕರು ಮುಂದೆ ಬರುತ್ತಿದ್ದಾರೆ. ಗೋಶಾಲೆಗಳ ಉಸ್ತುವಾರಿ ಗಾಗಿ ವಲಯಾವಾರು 3 ಜನರ 100 ತಂಡಗಳನ್ನು ರಚಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಾಯ, ಉಮಾಪತಿ ಮತ್ತಿತರರಿದ್ದರು. ಪ್ರಮುಖರಾದ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಉಮೇಶ್ ಆರಾಧ್ಯ, ರಮೇಶ್ ಬಾಬು, ಸಂದೇಶ್ ಉಪಾಧ್ಯಾಯ ,ಉಮಾಪತಿ ಮತ್ತಿತರರಿದ್ದರು.
















Leave a Reply