ನಿಟ್ಟೂರು ಶ್ರೀ ರಾಮೇಶ್ವರ ಸಭಾಭವನದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ನಗರ : ಸಮೀಪದ ನಗರ ನಿಟ್ಟ್ಟೂರಿನ ರಾಮೇಶ್ವರ ಸಭಾಭವನದಲ್ಲಿ ಭಾನುವಾರ ದಂದು ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್,ಶ್ರೀ ಸಂಸ್ಥಾನ ಗೋಕರ್ಣ, ಶ್ರೀರಾಮಚಂದ್ರಪುರ ಮಠ ಹವ್ಯಕ ಮಹಾಮಂಡಲ, ರಾಮಚಂದ್ರಪುರ ಮಂಡಲ ನಿಟ್ಟೂರು ವಲಯದಿಂದ ರಕ್ತಬಂಧ ಕಾರ್ಯಕ್ರಮದ ಮುಖಾಂತರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೇಂದ್ರ ಕುಂದಾಪುರ, ರೋಟರಿ ರೆಡ್ ಕ್ರಾಸ್ ರಕ್ತ ನಿಧಿ ವಿಭಾಗಿಯ ಆಸ್ಪತ್ರೆ ಸಾಗರ, ಅಡಿಕೆ ಪರಿಷ್ಕರಣ ಮತ್ತು ಮಾರಾಟ ಸಹಕಾರ ಸಂಘ (ನಿ) ಸಾಗರ, ಹನ್ನಾರ ಶ್ರೀ ರಾಮೇಶ್ವರ ಸೇವಾ ಸಮಿತಿ (ರಿ) ನಿಟ್ಟೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು. ರಕ್ತದಾನ ಶಿಬಿರದಲ್ಲಿ ಡಾಕ್ಟರ್ ಚಿರಂತ್, ಡಾಕ್ಟರ್ ಪ್ರಕಾಶ್ ಹತ್ವಾರ್ ಸೇರಿದಂತೆ ಒಟ್ಟು 68 ದಾನಿಗಳಿಂದ 68 ಯೂನಿಟ್ ರಕ್ತ ನಿಧಿ ಸಂಗ್ರಹವಾಗಿದ್ದು ನಗರ ಪೊಲೀಸ್ ಠಾಣೆಯ ಪಿಎಸ್ಐ ಶಿವಾನಂದ ಕೋಳಿವಾಡ ಮತ್ತು ಸಿಬ್ಬಂದಿಗಳು ಇವರು ಶಿಬಿರಕ್ಕೆ ಭೇಟಿ ನೀಡಿ ರಕ್ತದಾನವನ್ನು ಮಾಡಿರುವಂತದ್ದು ಪ್ರೇರಣದಾಯಕ.

ಕಾರ್ಯಕ್ರಮವನ್ನು ರಾಮಚಂದ್ರಪುರ ಮಂಡಲದ ಅಧ್ಯಕ್ಷರು ಪ್ರಕಾಶ್ ಬೇರಾಳ ಇವರು ಉದ್ಘಾಟಿಸಿದರು, ನಿಟ್ಟೂರು ವಲಯದ ಅಧ್ಯಕ್ಷರಾದ ಶ್ರೀಕಾಂತ್ ಅಟ್ಟಳ್ಳಿ ಅವರು ಕಾರ್ಯಕ್ರಮದ ಕುರಿತು ಪ್ರಸ್ತಾವನೆ ಸಲ್ಲಿಸಿ ಮಾತನಾಡಿ ಸ್ವಪ್ರೇರಣೆಯಿಂದ ಎಲ್ಲರೂ ರಕ್ತದಾನವನ್ನು ಮಾಡುವಂತೆ ಕರೆಕೊಟ್ಟು ರಕ್ತದಾನದಿಂದ ಹೃದಯದ ಆರೋಗ್ಯ ಹೆಚ್ಚುತ್ತದೆ ಹಾಗೂ ರಕ್ತದಾನ ಒಂದು ಮಹೋನ್ನತ ಮಾನವೀಯ ಸೇವೆಯಾಗಿದ್ದು ನಾವು ನೀಡುವ ಒಂದು ಯುನಿಟ್ ರಕ್ತವು ಅಪಘಾತ ಶಸ್ತ್ರಚಿಕಿತ್ಸೆ ಗರ್ಭಿಣಿಯರು ತುರ್ತು ಪರಿಸ್ಥಿತಿ ತುರ್ತು ಪರಿಸ್ಥಿತಿಯಲ್ಲಿರುವವರ ಜೀವ ಉಳಿಸಬಹುದು ಇದರಿಂದಾಗಿ ನನ್ನಿಂದ ಯಾರಾದರೂ ಬದುಕಿದ್ದಾರೆ ಎಂಬ ಭಾವನೆ ಆತ್ಮ ತೃಪ್ತಿಯನ್ನು ನೀಡುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಕುರಿತು ಮಾತನಾಡಿದ ಟೀಂ ನವಚೇತನದ ಮಣಿಕಂಠ ಡಿ.ಎಸ್ ಇವರು ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದ್ದು ಆದರೂ ರಕ್ತದ ಕೊರತೆ ಉಂಟಾಗುತ್ತಿದೆ ರಕ್ತದಾನವನ್ನು ಮಾಡಲು ಹಿಂಜರಿಕೆಯನ್ನು ಮಾಡುತ್ತಿದ್ದಾರೆ ರಕ್ತದಾನವನ್ನು ಮಾಡಿದರೆ ಯಾವುದೇ ರೀತಿಯ ತೊಂದರೆ ಇಲ್ಲ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ರಕ್ತದ ಅವಶ್ಯಕತೆ ಯಾರಿಗೂ ಬಾರದಿರಲಿ ಎಂದು ಹೇಳಿದರು.

ವೇದಿಕೆಯಲ್ಲಿ ಆಪ್ಸ್ ಕೋಸ್ ಉಪಾಧ್ಯಕ್ಷ ಎ.ಓ ರಾಮಚಂದ್ರ , ಬಿ ಎನ್.ಗುರುಮೂರ್ತಿ ,ರೆಡ್ ಕ್ರಾಸ್ ರಕ್ತ ಕೇಂದ್ರದ ವೈದ್ಯಾಧಿಕಾರಿಗಳು ಡಾ. ಸತೀಶ್ , ರೋಟರಿ ರೆಡ್ ಕ್ರಾಸ್ ಡಾ. ಸಚಿನ್ , ಲಯನ್ಸ್ ಕ್ಲಬ್ ಅಧ್ಯಕ್ಷರು ಕೆ ಪಿ ದೇವರಾಜ್, ಡಾ. ಸಿರಿ ಅಧಿಕಶ್ರೇಣಿ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿಟ್ಟೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ, ಟೀಂ ನವಚೇತನ, ನಳಂದ ಸೇವಾ ಟ್ರಸ್ಟ್, ಲಯನ್ಸ್ ಕ್ಲಬ್ ನಿಟ್ಟೂರು ಸಂಪೆಕಟ್ಟೆ, ಸಂರಕ್ಷಣಾ ಸೇವಾ ಫೌಂಡೇಶನ್ ನಿಟ್ಟೂರು ಮತ್ತು ಸಾರ್ವಜನಿಕರು ಸಹಕಾರ ನೀಡಿದರು.
ವರದಿ: ನಾಡಿ ತಂಡ

















Leave a Reply