ರಿಪ್ಪನ್ ಪೇಟೆ: ಸಮೀಪದ ಕೆಂಚನಾಲ ಗ್ರಾಮದಲ್ಲಿ ಅಕ್ರಮವಾಗಿ ಅಂದರ್ ಬಾಹರ್,ಇಸ್ಪೀಟ್ ಅಡ್ಡಕ್ಕೆ ಪೋಲಿಸರು ದಾಳಿ ನಡೆಸಿದ ಘಟನೆ ಶುಕ್ರವಾರ ವರದಿಯಾಗಿದೆ.
ರಂಜಾನ್ ಹಬ್ಬದ ಸಲುವಾಗಿ ಗಸ್ತು ಕರ್ತವ್ಯದಲ್ಲಿದ್ದ ಪೋಲಿಸರು ಕೆದಲುಗುಡ್ಡೆ ,ಬೆಳಂದೂರು, ಕೆಂಚನಾಲ ಗ್ರಾಮಗಳಲ್ಲಿ ಗಸ್ತಿನ ವೇಳೆಯಲ್ಲಿ ಸುಮಾರು ಮಧ್ಯಾಹ್ನ 2-00 ಗಂಟೆಗೆ ಕೆಂಚನಾಲ ಗ್ರಾಮದ ಬಳಿ ಇರುವ ಸಾಗವಾನಿ ಪ್ಲಾಂಟೇಷನ್ ನಲ್ಲಿ ಗುಂಪೋಂದು ಅಕ್ರಮವಾಗಿ ಅಂದರ್ -ಬಾಹರ್, ಇಸ್ಪೀಟ್ ಜೂಜಾಟವಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ನಡೆಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಕೆಂಚನಾಲ : ಇಸ್ಪೀಟ್ ಅಡ್ಡದ ಮೇಲೆ ಪೋಲೀಸರ ದಾಳಿ, ಪ್ರಕರಣ ದಾಖಲು














Leave a Reply