ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ವೈಭವದ ಜಾತ್ರೆ |ಮೊದಲ ದಿನದ ಜಾತ್ರೆಗೆ ಭಕ್ತ ಸಾಗರ

Addaheading 20260929 194314 0000 ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ವೈಭವದ ಜಾತ್ರೆ |ಮೊದಲ ದಿನದ ಜಾತ್ರೆಗೆ ಭಕ್ತ ಸಾಗರ
Spread the love

Ammanaghatta Jenukallamma Devi Jatre was held with great devotion near Ripponpet, as devotees offered prayers and agricultural produce for good crops and rainfall.

ರಿಪ್ಪನ್‌ಪೇಟೆ: ಸಮೀಪದ (Shivamogga)ಇತಿಹಾಸ ಪ್ರಸಿದ್ಧ ಅಮ್ಮನಘಟ್ಟದ Ammanaghatta ಜೇನುಕಲ್ಲಮ್ಮ ದೇವಿಯ Jenukallamma Devi ಜಾತ್ರಾ ಮಹೋತ್ಸವವು ಮಂಗಳವಾರ ಭಕ್ತಿಭಾವ ಹಾಗೂ ವೈಭವದೊಂದಿಗೆ ನೆರವೇರಿತು.

  ಪಿತೃಪಕ್ಷದ ಅವಧಿಯಲ್ಲಿ ನಡೆಯುವ ಈ ಜಾತ್ರೆಯ ಮೊದಲ ಮಂಗಳವಾರದಂದು ಮುಂಜಾನೆಯಿಂದಲೇ ಸುತ್ತಮುತ್ತಲಿನ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಸರತಿ ಸಾಲಿನಲ್ಲಿ ನಿಂತ ಭಕ್ತರು ವಿಶೇಷ ಪೂಜೆ ಸಲ್ಲಿಸಿ, ಹಣ್ಣು-ಕಾಯಿ ಸಮರ್ಪಿಸಿ ತಮ್ಮ ಹರಕೆಗಳನ್ನು ನೆರವೇರಿಸಿದರು.

  ಜೇನುಕಲ್ಲಮ್ಮ ದೇವಿಯು ಮಲೆನಾಡಿಗರ (Malnad) ಆರಾಧ್ಯ ದೈವವಾಗಿದ್ದು, ಜಾತ್ರೆಯಲ್ಲಿ ಸರ್ವಜನಾಂಗದ ಭಕ್ತರು ಪಾಲ್ಗೊಂಡು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಪ್ರಾರ್ಥಿಸಿದರು. ವಿವಾಹ, ಸಂತಾನ ಸೇರಿದಂತೆ ವಿವಿಧ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿ ಎಂದು ಹಲವರು ದೇವಿಯ ಸನ್ನಿಧಿಯಲ್ಲಿ ಹರಕೆ ಮಾಡಿಕೊಂಡರು.

  ರೈತರು ತಮ್ಮ ಜಮೀನಿನಲ್ಲಿ ಬೆಳೆದ ಅಡಿಕೆ, ಶುಂಠಿ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳನ್ನು ದೇವಿಗೆ ಸಮರ್ಪಿಸಿ, ಬೆಳೆಗಳಿಗೆ ರೋಗ-ರುಜಿನ ಬಾರದಂತೆ ಹಾಗೂ ಉತ್ತಮ ಇಳುವರಿ ದೊರೆಯುವಂತೆ ಪ್ರಾರ್ಥಿಸಿದರು. ಮಳೆಯ ಕೊರತೆ ಎದುರಾಗದಿರಲಿ, ಉತ್ತಮ ಮಳೆಯಾಗಿ ಕೃಷಿಗೆ ಅನುಕೂಲವಾಗಲಿ ಎಂದು ಕೆಲ ಭಕ್ತರು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದರು.

  ಬೆಳಗ್ಗಿನಿಂದಲೇ ದೇವಾಲಯದ ಸುತ್ತಮುತ್ತ ಭಕ್ತರ ಸಂಚಾರ ಹೆಚ್ಚಾಗಿದ್ದು, ಜೇನುಕಲ್ಲಮ್ಮ ದೇವಿಯ ದರ್ಶನಕ್ಕಾಗಿ ಭಕ್ತ ಜನಸಾಗರವೇ ಹರಿದುಬಂದಿತ್ತು. ಪೂಜಾ ಕೈಂಕರ್ಯಗಳು ಹಾಗೂ ಭಕ್ತರ ಹರಕೆ ಸಮರ್ಪಣೆಯೊಂದಿಗೆ ಜಾತ್ರಾ ಮಹೋತ್ಸವವು ಸಂಭ್ರಮದಿಂದ ನಡೆಯಿತು.

file 000000003f5c8208a0b120fec3430d9d8967595370170191577 ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ವೈಭವದ ಜಾತ್ರೆ |ಮೊದಲ ದಿನದ ಜಾತ್ರೆಗೆ ಭಕ್ತ ಸಾಗರ

Leave a Reply

Your email address will not be published. Required fields are marked *

error: Content is protected !!