ಸಹಸ್ರನಾಮ ಸ್ತುತಿಯಿಂದ ಜ್ಞಾನಸಂಪತ್ತು ವೃದ್ಧಿ
ಪರಮಪೂಜ್ಯ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ
ರಿಪ್ಪನ್ ಪೇಟೆ :ಪರಂಪರಾನುಗತ ಶರನ್ನವರಾತ್ರಿಯ ಪರ್ವದಿನದಲ್ಲಿ ಶ್ರೀ ಪದ್ಮಾವತಿ ದೇವಿ ಆರಾಧನೆಯು ಜ್ಞಾನಸಂಪತ್ತು ವರ್ಧಿಸುತ್ತದೆ. ಪ್ರತಿಯೋರ್ವರೂ ನಿತ್ಯವೂ ದೇವರು-ದೇವಿಯರ ಆರಾಧನೆಯ ಫಲವು ವೈಯುಕ್ತಿಕ ಮತ್ತು ಸಾಮೂಹಿಕ ಜ್ಞಾನ ಶಕ್ತಿಯನ್ನು ಬಲಪಡಿಸುವುದಾಗಿದೆ” ಎಂದು ಹೊಂಬುಜ ಶ್ರೀ ಜೈನ ಮಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ಮಂಗಲ ಪ್ರವಚನದಲ್ಲಿ ತಿಳಿಸಿದರು. ಶ್ರೀ ಪದ್ಮಾವತಿ ದೇವಿ ಸಹಸ್ರನಾಮ ಪೂಜಾ ವಿಧಾನದಲ್ಲಿ ಭಕ್ತರು ಪಾಲ್ಗೊಂಡು ಧನ್ಯರಾದರು.
ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಅಭೀಷ್ಠವರಪ್ರದಾಯಿನಿ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಶ್ರೀಗಳವರ ಸಾನಿಧ್ಯದಲ್ಲಿ ಆಗಮೋಕ್ತ ವಿಧಿ-ವಿಧಾನದಲ್ಲಿ ಪೂಜೆ ನೆರವೇರಿತು. ವೈವಿಧ್ಯಮಯ ಹೂವು, ಹಣ್ಣು, ನೈವೇದ್ಯ ಸಮರ್ಪಿಸಲಾಯಿತು. ವಿಶೇಷವಾಗಿ ಸ್ವರ್ಣಾಲಂಕಾರವನ್ನು ಮಾಡಲಾಗಿತ್ತು. ಶ್ರೀ ಕ್ಷೇತ್ರದ ಶ್ರೀ ನೇಮಿನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ, ಶ್ರೀ ನಾಗಸನ್ನಧಿಯಲ್ಲಿ ಪೂಜಾ ವಿಧಿಗಳು ಸಾಂಗವಾಗಿ ನೆರವೇರಿದವು. ಸೇವಾಕರ್ತೃರಾದ ಗುಡಗಾಂವ್‌ನ ಶ್ರೀಮತಿ ನೀತು ಶ್ರೀ ನವೀನ್ ಜೈನ್ ಕುಟುಂಬದವರನ್ನು ಸ್ವಾಮೀಜಿಯವರು ಆಶೀರ್ವದಿಸಿದರು.
















Leave a Reply