ರಿಪ್ಪನ್‌ಪೇಟೆ: ಪಟ್ಟಣದ ಪ್ರಸಿದ್ಧ ಹಿಂದೂರಾಷ್ಟ್ರಸೇನೆಯ 59ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಸಾಗರದ ಯುವ ಉದ್ಯಮಿ ಹಾಗೂ ಆರ್.ಬಿ.ಡಿ ಸಂಸ್ಥೆಯ ಮಾಲೀಕರಾದ ಮಹೇಶ್ ಅವರು ಆಗಮಿಸಿ ಶ್ರೀ ಗಣಪತಿಯ ದರ್ಶನ ಪಡೆದರು.
ಈ ವೇಳೆ ಉದ್ಯಮಿ ಮಹೇಶ್ ಅವರ ಸಾಮಾಜಿಕ ಹಾಗೂ ಉದ್ಯಮ ಕ್ಷೇತ್ರದ ಸೇವೆಯನ್ನು ಶ್ಲಾಘಿಸಿದ ಹಿಂದೂರಾಷ್ಟ್ರಸೇನೆಯ ಪದಾಧಿಕಾರಿಗಳು ಸಮಿತಿಯ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಹೀರೋ ಶೋರೂಂ ಮಾಲೀಕರಾದ ಜಗದೀಶ್, ಹಿಂದೂರಾಷ್ಟ್ರಸೇನೆಯ ಅಧ್ಯಕ್ಷ ಸುಧೀಂದ್ರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನವೀನ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
















Leave a Reply