ಗರ್ತಿಕೆರೆ ಬಳಿ ದುರಂತ; ಬೈಕ್ ಮೇಲೆ ಮರದ ರೆಂಬೆ ಬಿದ್ದು ಯುವಕ ಸಾವು, ಮತ್ತೋರ್ವ ಗಂಭೀರ

1002553753 ಗರ್ತಿಕೆರೆ ಬಳಿ ದುರಂತ; ಬೈಕ್ ಮೇಲೆ ಮರದ ರೆಂಬೆ ಬಿದ್ದು ಯುವಕ ಸಾವು, ಮತ್ತೋರ್ವ ಗಂಭೀರ
Spread the love

ರಿಪ್ಪನ್‌ಪೇಟೆ: ಸಮೀಪದ ಗರ್ತಿಕೆರೆಯ ಸುಣ್ಣದಬಸ್ತಿ ಬಳಿ ಶನಿವಾರ ನಡೆದ ಅಪರೂಪದ ದುರ್ಘಟನೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಒಣ ಮರದ ರೆಂಬೆ ಬಿದ್ದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಚೋರಡಿ ಗ್ರಾಮದ ಸಂತೋಷ್ (26), ಬೊಮ್ಮಣ್ಣ ಅವರ ಪುತ್ರ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ವೀರಭದ್ರ, ರಾಮಪ್ಪ ಅವರ ಪುತ್ರರಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೀನುಗಾರಿಕೆಗೆ ಬಳಸುವ ಉಕ್ಕಡವನ್ನು ಬೈಕ್‌ನಲ್ಲಿ ಸಾಗಿಸಿಕೊಂಡು ಚೋರಡಿಯಿಂದ ತಾರಿಗ ಗ್ರಾಮದತ್ತ ತೆರಳುತ್ತಿದ್ದ ವೇಳೆ ರಸ್ತೆ ಬದಿಯ ಸುಮಾರು 50 ಅಡಿ ಎತ್ತರದ ಮರದ ಒಣ ರೆಂಬೆ ಏಕಾಏಕಿ ಮುರಿದು ಬೈಕ್ ಮೇಲೆ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರೆಂಬೆ ಬಿದ್ದ ತೀವ್ರತೆಗೆ ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಸಂತೋಷ್ ಸ್ಥಳದಲ್ಲೇ ಮೃತಪಟ್ಟರೆ, ವೀರಭದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತದೇಹವನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.

ಘಟನೆಗೆ ಸಂಬಂಧಿಸಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ

Leave a Reply

Your email address will not be published. Required fields are marked *