ಸಾಗರ ತಾಲೂಕಲ್ಲಿ ಆಡಳಿತ ಕುಸಿತ, ಪುಡಾರಿಗಳಂತೆ ವರ್ತಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು: ಹರತಾಳು ಹಾಲಪ್ಪ ಆರೋಪ

Blue and Red Voter Education Banner 20260503 143044 0000 scaled ಸಾಗರ ತಾಲೂಕಲ್ಲಿ ಆಡಳಿತ ಕುಸಿತ, ಪುಡಾರಿಗಳಂತೆ ವರ್ತಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು: ಹರತಾಳು ಹಾಲಪ್ಪ ಆರೋಪ
Spread the love
img 20260110 wa00007798659359500402883 ಸಾಗರ ತಾಲೂಕಲ್ಲಿ ಆಡಳಿತ ಕುಸಿತ, ಪುಡಾರಿಗಳಂತೆ ವರ್ತಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು: ಹರತಾಳು ಹಾಲಪ್ಪ ಆರೋಪ

ಸಾಗರ :ತಾಲೂಕಿನಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟು ಅರಾಜಕತೆ ಹೆಚ್ಚಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಹರತಾಳು ಹಾಲಪ್ಪ ಆರೋಪಿಸಿದರು.

ಇಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ತಹಸೀಲ್ದಾರ್ ಇಲ್ಲ. ಇಒ ಇಲ್ಲ, ನಗರಸಭೆ ಆಯುಕ್ತರಿಲ್ಲ, ಪೊಲೀಸರಿಲ್ಲ, ಸಾಕಷ್ಟು ಸಂಖ್ಯೆಯ ವೈದ್ಯರಿಲ್ಲ, ಎಂಜಿನಿಯರ್‌ಗಳಿಲ್ಲ, ಈ ಎಲ್ಲ ಇಲ್ಲಗಳಿಂದ ತಾಲೂಕಿನಲ್ಲಿ ಆಡಳಿತವೇ ಇಲ್ಲವಾಗಿದೆ ಎಂದು ದೂರಿದರು.

img 20260423 wa00561106289662125605041 ಸಾಗರ ತಾಲೂಕಲ್ಲಿ ಆಡಳಿತ ಕುಸಿತ, ಪುಡಾರಿಗಳಂತೆ ವರ್ತಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು: ಹರತಾಳು ಹಾಲಪ್ಪ ಆರೋಪ

‘ರಾಜಕಾರಣಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಈ ಎರಡು ಕಾರಣಗಳಿಂದಲೇ ಅಧಿಕಾರಿಗಳು ಸಾಗರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾದರೆ ಆಡಳಿತ ನಡೆಸುವುದು ಹೇಗೆ? ಈ ಕಾಂಗ್ರೆಸ್ ಸರಕಾರಕ್ಕೆ ಏನಾಗಿದೆ’ ಎಂದು ಅವರು ಪ್ರಶ್ನಿಸಿದರು.

ಪೊಲೀಸರ ಮೇಲಂತೂ ಜನರಿಗೆ ನಂಬಿಕೆ ಹೊರಟು ಹೋಗಿದೆ. ಇತ್ತೀಚೆಗೆ ಹುಲಿದೇವರಬನದ ಗುರುರಾಜ, ಪಟ್ಟಣದ ಐಸ್‌ಕ್ರೀಂ ವ್ಯಾಪಾರಿ ಹಾಗೂ ಆರ್‌ಬಿಡಿ ಮಧು ಅವರ ಮೇಲೆ ಹಲ್ಲೆ ಪ್ರಕರಣಗಳು ನಡೆದಿದ್ದರೂ ಸಂತ್ರಸ್ತರು ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರು ಪುಡಾರಿಗಳ ರೀತಿ ವರ್ತಿಸುತ್ತಿದ್ದಾರೆ ಆಡಳಿತ ವ್ಯವಸ್ಥೆ ಶೀಘ್ರ ಸುಸ್ಥಿತಿಗೆ ಬರದಿದ್ದರೆ ರಸ್ತೆಗಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಅವರು ಎಚ್ಚರಿಸಿದರು.

img 20260427 wa00137081000921723649378 ಸಾಗರ ತಾಲೂಕಲ್ಲಿ ಆಡಳಿತ ಕುಸಿತ, ಪುಡಾರಿಗಳಂತೆ ವರ್ತಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು: ಹರತಾಳು ಹಾಲಪ್ಪ ಆರೋಪ

ಶಿವಮೊಗ್ಗದಲ್ಲೇ ಸಂಚಾರಿ ಪೀಠ: ಹೈಕೋರ್ಟ್‌ನ ಸಂಚಾರಿ
ಪೀಠವನ್ನು ಶಿವಮೊಗ್ಗದಲ್ಲೇ ಸ್ಥಾಪಿಸುವುದು ಸೂಕ್ತ. ಸಂಪರ್ಕ ದೃಷ್ಟಿಯಿಂದ ದಕ್ಷಿಣ ಕನ್ನಡಕ್ಕಿಂತ ಶಿವಮೊಗ್ಗ ಹೆಚ್ಚು ಅನುಕೂಲಕರವಾಗಿದೆ. ಇದನ್ನು ವಕೀಲ ವೃಂದ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಡಾ.ರಾಜನಂದಿನಿ ಕಾಗೋಡು, ದಿಶಾ ಸಮಿತಿ ಜಿ ಸದಸ್ಯ ಮಲ್ಲಿಕಾರ್ಜುನ ಹಕ್ರೆ, ಗ್ರಾಮಾಂತರ ಘಟಕದ ಅಧ್ಯಕ್ಷ ದೇವೇಂದ್ರಪ್ಪ, ನಗರ ಘಟಕದ ಅಧ್ಯಕ್ಷ ಗಣೇಶ ಪ್ರಸಾದ್, ಉಪಾಧ್ಯಕ್ಷ ಜಿ.ಕೆ. ಭೈರಪ್ಪ ಮತ್ತಿತರರು ಹಾಜರಿದ್ದರು

Leave a Reply

Your email address will not be published. Required fields are marked *