ರಕ್ತದಾನ ಮಾಡಿ ಜೀವ ಉಳಿಸಿ, ಆರೋಗ್ಯದಿಂದಿರಿ – ಪಿಎಸ್ಐ ರಾಜು ರೆಡ್ಡಿ

Blue and Red Voter Education Banner 20260428 201332 0000 scaled ರಕ್ತದಾನ ಮಾಡಿ ಜೀವ ಉಳಿಸಿ, ಆರೋಗ್ಯದಿಂದಿರಿ - ಪಿಎಸ್ಐ ರಾಜು ರೆಡ್ಡಿ
Spread the love

ರಿಪ್ಪನ್ ಪೇಟೆ: “ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ಭಾಗಿಯಾಗುವುದು ನಮ್ಮ ಕರ್ತವ್ಯ” ಎಂದು ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪಿಎಸ್ಐ ರಾಜು ರೆಡ್ಡಿ ಹೇಳಿದರು.

ರಿಪ್ಪನ್ ಪೇಟೆ ಪೊಲೀಸ್ ಇಲಾಖೆ ಮತ್ತು ಕಟ್ಟಡ ಕಾರ್ಮಿಕರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ರಕ್ತದಾನವು ಕೇವಲ ಮಾನವೀಯ ಸೇವೆಯಷ್ಟೇ ಅಲ್ಲದೆ ಆರೋಗ್ಯಕರ ಜೀವನಶೈಲಿಯ ಸಂಕೇತವೂ ಆಗಿದೆ ಎಂದು ತಿಳಿಸಿದರು. ಆರೋಗ್ಯವಂತರಾಗಿರುವವರು ರಕ್ತದಾನ ಮಾಡುವ ಮೂಲಕ ಅನೇಕರ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದರು.



ರಿಪ್ಪನ್ ಪೇಟೆ ಪೊಲೀಸ್ ಠಾಣೆಯಿಂದ ಕಳೆದ ನಾಲ್ಕು ವರ್ಷಗಳಿಂದ ಈ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

image editor output image1628935683 1777390683247555678934462319905 ರಕ್ತದಾನ ಮಾಡಿ ಜೀವ ಉಳಿಸಿ, ಆರೋಗ್ಯದಿಂದಿರಿ - ಪಿಎಸ್ಐ ರಾಜು ರೆಡ್ಡಿ
img 20260427 wa00137164737030713336503 ರಕ್ತದಾನ ಮಾಡಿ ಜೀವ ಉಳಿಸಿ, ಆರೋಗ್ಯದಿಂದಿರಿ - ಪಿಎಸ್ಐ ರಾಜು ರೆಡ್ಡಿ

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮೊಹಮದ್ ಹುಸೈನ್ ಮಾತನಾಡಿ, ಕಾರ್ಮಿಕರ ಹಿತಾಸಕ್ತಿಯೊಂದಿಗೆ ಸಾಮಾಜಿಕ ಜವಾಬ್ದಾರಿಯ ಕಾರ್ಯಗಳಲ್ಲಿ ನಮ್ಮ ಸಂಘಟನೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ಕಟ್ಟಡ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು.

img 20260428 wa00147671810054607321126 ರಕ್ತದಾನ ಮಾಡಿ ಜೀವ ಉಳಿಸಿ, ಆರೋಗ್ಯದಿಂದಿರಿ - ಪಿಎಸ್ಐ ರಾಜು ರೆಡ್ಡಿ



ಶಿಬಿರದಲ್ಲಿ ಹಲವರು ಉತ್ಸಾಹದಿಂದ ರಕ್ತದಾನ ಮಾಡಿ 60 ಯೂನಿಟ್ ರಕ್ತ ಸಂಗ್ರಹ  ಮಾಡಲಾಯಿತು.

image editor output image60671945 1777389357715245872315438265285 ರಕ್ತದಾನ ಮಾಡಿ ಜೀವ ಉಳಿಸಿ, ಆರೋಗ್ಯದಿಂದಿರಿ - ಪಿಎಸ್ಐ ರಾಜು ರೆಡ್ಡಿ

ವಿಶೇಷ : ಇವರು ಭದ್ರಾವತಿ ಸಂಚಾರಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಹಾಲೇಶಪ್ಪ ಇವರು 2008ರಿಂದ ಸತತವಾಗಿ 57 ಬಾರಿ ರಕ್ತದಾನವನ್ನು ಮಾಡಿರುತ್ತಾರೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನಡೆಸುವಂತಹ ಎಲ್ಲಾ ರಕ್ತದಾನ ಶಿಬಿರದಲ್ಲಿ ಜವಾಬ್ದಾರಿಯೊಂದಿಗೆ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪರಿಸರ ಕಾಳಜಿ ಇರುವವರು ತಮ್ಮ ಹುಟ್ಟೂರಿನಲ್ಲಿ ನೂರಾರು ಎಕರೆ ಭೂಮಿಯಲ್ಲಿ ಯಥಾ ಶಕ್ತಿ ಎಂಬಂತೆ ಗಿಡಗಳನ್ನು ನೆಟ್ಟು ಪೋಷಿಸುವ ಪರಿಸರ ಸೇವೆಯಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಇವರಿಗೆ ನಮ್ಮ ನಾಡಿ ಮೀಡಿಯಾ ಹೌಸ್ ನ ಸೆಲ್ಯೂಟ್

img 20260423 wa00566598186494897491907 ರಕ್ತದಾನ ಮಾಡಿ ಜೀವ ಉಳಿಸಿ, ಆರೋಗ್ಯದಿಂದಿರಿ - ಪಿಎಸ್ಐ ರಾಜು ರೆಡ್ಡಿ

ಈ ಸಂಧರ್ಭದಲ್ಲಿ ಪಿಎಸ್ಐ ರಾಜು ರೆಡ್ಡಿ ,ಸಂಚಾರಿ ಪೋಲಿಸ್ ಹಾಲೇಶ್, ಉಮೇಶ್ , ತೀರ್ಥೇಶ್, ಕಟ್ಟಡ ಕಾರ್ಮಿಕ ಜಿಲ್ಲಾಧ್ಯಕ್ಷರಾದ ಕೆ ಸಂಜಯ್ ಕುಮಾರ್, ಜಿಲ್ಲಾ ಕಾರ್ಯಧ್ಯಕ್ಷರಾದ ಸುಂದರ್ ಬಾಬು,ಹೊಸನಗರ ಗ್ರಾಮಾಂತರ ಅಧ್ಯಕ್ಷರಾದ ಮೊಹಮ್ಮದ ಹುಸೇನ್ , ಶಂಕರಾಚಾರ್ಯ ಕೆ ,ಬಿ ಎನ್ ರಾಘವೇಂದ್ರ, ಪ್ರಭಾಕರಾಚಾರ್ ,ಮಂಜುನಾಥ್ ಆಚಾರ್,ಚಿಗುರು ಶ್ರೀಧರ್, ಸುಬ್ರಮಣ್ಯ  ಎನ್ ಆರ್ ,ನಿಸಾರ್ ಅಹಮದ್,ಮಾಲ್ತೇಶ್ ಎನ್ ಯು,ಸತೀಶ್  ಎನ್ ಪೂಜಾರಿ,ಸುರೇಶ್ ಎ ಆರ್, ಕುಮಾರ ಕೆ ಇ,ಬಟ್ಟೆ ಮಲ್ಲಪ್ಪ ಘಟಕದ ಅಧ್ಯಕ್ಷರಾದ ಕೃಷ್ಣಪ್ಪ ಆರ್, ಉಪಾಧ್ಯಕ್ಷರಾದ ಶ್ರೀಕಾಂತ್,ವಿಶ್ವನಾಥ  ಆರ್ , ಶ್ರೀನಿವಾಸ ಟಿ ,ಶಫಿವುಲ್ಲಾ, ಸುರೇಶ ಎಸ್ ಎನ್ ,ಕೃಷ್ಣಪ್ಪ, ಚರಣ್ ರಾಜ್ ಇನ್ನಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *