ರಿಪ್ಪನ್‌ಪೇಟೆ: ಶ್ರೀ ಸಿದ್ದಿವಿನಾಯಕ – ಶ್ರೀ ಅನ್ನಪೂರ್ಣೇಶ್ವರಿ ಮಹಾರಥೋತ್ಸವ ವೈಭವದಿಂದ ಸಂಪನ್ನ

Blue and Red Voter Education Banner 20260413 180033 0000 1 scaled ರಿಪ್ಪನ್‌ಪೇಟೆ: ಶ್ರೀ ಸಿದ್ದಿವಿನಾಯಕ – ಶ್ರೀ ಅನ್ನಪೂರ್ಣೇಶ್ವರಿ ಮಹಾರಥೋತ್ಸವ ವೈಭವದಿಂದ ಸಂಪನ್ನ
Spread the love

ರಿಪ್ಪನ್‌ಪೇಟೆ:ಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸಿದ್ದಿವಿನಾಯಕ ಸ್ವಾಮಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಾಲಯದಲ್ಲಿ ಶ್ರೀಮನ್ ಮಹಾರಥೋತ್ಸವ ಹಾಗೂ ಜಾತ್ರೋತ್ಸವವು ಭಕ್ತರ ಅಪಾರ ಭಕ್ತಿ ಮತ್ತು ಸಂಭ್ರಮದೊಂದಿಗೆ ವೈಭವದಿಂದ ನೆರವೇರಿತು.

20260411 1927582860275773114742603 ರಿಪ್ಪನ್‌ಪೇಟೆ: ಶ್ರೀ ಸಿದ್ದಿವಿನಾಯಕ – ಶ್ರೀ ಅನ್ನಪೂರ್ಣೇಶ್ವರಿ ಮಹಾರಥೋತ್ಸವ ವೈಭವದಿಂದ ಸಂಪನ್ನ
ಭಾನುವಾರ ಪರಮಪೂಜ್ಯ ಮೂಲೆಗದ್ದೆ ಶ್ರೀಗಳ ಅವರ ದಿವ್ಯ ಸಾನಿಧ್ಯದಲ್ಲಿ ಧರ್ಮಸಭೆ ನಡೆಯಿತು

ಸೋಮವಾರ ಶ್ರೀ ಸಿದ್ಧಿವಿನಾಯಕ ಸ್ವಾಮಿ ಮತ್ತು ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಕುಂಭಾಭಿಷೇಕ ಮಹಾಪೂಜೆ ತೀರ್ಥ ಪ್ರಸಾದ ವಿನಿಯೋಗ ನೆರವೇರಿತು.

20260411 120348499588821467436651 ರಿಪ್ಪನ್‌ಪೇಟೆ: ಶ್ರೀ ಸಿದ್ದಿವಿನಾಯಕ – ಶ್ರೀ ಅನ್ನಪೂರ್ಣೇಶ್ವರಿ ಮಹಾರಥೋತ್ಸವ ವೈಭವದಿಂದ ಸಂಪನ್ನ

ಎಲ್ಲಾ ಧಾರ್ಮಿಕ ಕಾರ್ಯಕ್ರಮವು ವೇದ ಬ್ರಹ್ಮ ಶಿವಸಂತ ಭಟ್ ಹಾಗೂ ದೇವಳದ ಅರ್ಚಕರಾದ ಶ್ರೀ ಶ್ರೀಶ ಎಂ.ಎಸ್ ಹೆಗಡೆ ಇವರ ನೇತೃತ್ವದಲ್ಲಿ ನೆರವೇರಿತು.

ದೇವಾಲಯದಲ್ಲಿ ನಡೆದ ಈ ಮಹೋತ್ಸವವು ಭಕ್ತರಲ್ಲಿ ಭಕ್ತಿ ಭಾವವನ್ನು ಹೆಚ್ಚಿಸುವುದರೊಂದಿಗೆ ಸನಾತನ ಧರ್ಮ ಸಂಸ್ಕೃತಿ ಮತ್ತು ಹಿಂದೂ ಪರಂಪರೆಯ ಧಾರ್ಮಿಕ ವಿಚಾರಗಳನ್ನು ಇನ್ನಷ್ಟು ಬಲಪಡಿಸುವಂತಹ ವಾತಾವರಣವು ದೇವಾಲಯದಲ್ಲಿ ನಿರ್ಮಾಣವಾಗಿತ್ತು. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಇಡೀ ಹಿಂದೂ ಸಮಾಜವು ಧಾರ್ಮಿಕ ವಿಚಾರಗಳಲ್ಲಿ ಸಕ್ರಿಯರಾಗುವಂತೆ ಮಾಡಿತು ಎಂದರೆ ತಪ್ಪಾಗಲಾರದು.

ಶ್ರೀ ಸಿದ್ಧಿವಿನಾಯಕ ಸ್ವಾಮಿದೇವರ ಮತ್ತು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಮಹಾರಥೋತ್ಸವ ಕಾರ್ಯಕ್ರಮ ಅದ್ಭುತವಾಗಿ ನೆರವೇರಲು ಪ್ರಮುಖವಾಗಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ವ್ಯವಸ್ಥಾಪನ ಸಮಿತಿ ಹಾಗೂ ಶ್ರೀ ಸಿದ್ಧಿವಿನಾಯಕ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷರು ಮತ್ತು ಎಲ್ಲಾ ಸದಸ್ಯರ ಪರಿಶ್ರಮ,ಸಮಯ ಸಮರ್ಪಣೆ ಮತ್ತು ಶ್ರದ್ಧಾ ಭಕ್ತಿಯಿಂದ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿರುವುದೇ ಕಾರಣವಾಗಿದೆ ಎಂದು ಜನಸಾಮಾನ್ಯರು,ಭಕ್ತಾದಿಗಳು ಶ್ಲಾಘಿಸಿದರು.

img 20260324 wa00578045996306237485743 ರಿಪ್ಪನ್‌ಪೇಟೆ: ಶ್ರೀ ಸಿದ್ದಿವಿನಾಯಕ – ಶ್ರೀ ಅನ್ನಪೂರ್ಣೇಶ್ವರಿ ಮಹಾರಥೋತ್ಸವ ವೈಭವದಿಂದ ಸಂಪನ್ನ

Leave a Reply

Your email address will not be published. Required fields are marked *