ನಾಳೆ ಹೊಸನಗರಕ್ಕೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಪುರ ಪ್ರವೇಶ

Blue and Red Voter Education Banner 20260413 162425 0000 scaled ನಾಳೆ ಹೊಸನಗರಕ್ಕೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಪುರ ಪ್ರವೇಶ
Spread the love

ಹೊಸನಗರದ ಕೋಟೆ ಸರ್ಕಲ್‌ನಿಂದ ರಾಘವೇಂದ್ರ ಸ್ವಾಮಿ ಬೃಂದಾವನದವರೆಗೆ ಮೆರವಣಿಗೆ

ಹೊಸನಗರ:ಪ್ರಿಲ್ 14ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಉಡುಪಿಯ ಪುತ್ತಿಗೆ ಮಠದ ಶ್ರೀಗಳು ಆಗಮಿಸಲಿದ್ದಾರೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ವಿಜಯೇಂದ್ರ ಶೆಟ್ಟಿ ತಿಳಿಸಿದ್ದಾರೆ.

ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದ ಸ್ವಾಮೀಜಿಯವರೊಂದಿಗೆ ಅವರ ಶಿಷ್ಯರಾದ ಸುಶೀಂದ್ರ ತೀರ್ಥ ಸ್ವಾಮೀಜಿಯವರು ಹೊಸನಗರದ ರಾಘವೇಂದ್ರ ಸ್ವಾಮಿ ಬೃಂದಾವನಕ್ಕೆ  ಆಗಮಿಸಲಿದ್ದಾರೆ.  ಈ ಸಂದರ್ಭದಲ್ಲಿ ವಿಶೇಷ ಪೂಜೆಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಅದೇ ದಿನ ಬೆಳಿಗ್ಗೆ 10 ಗಂಟೆಗೆ ಹೊಸನಗರದ ಕೋಟೆ ಸರ್ಕಲ್‌ನಿಂದ ರಾಘವೇಂದ್ರ ಸ್ವಾಮಿ ಬ್ರಂದಾವನದವರೆಗೆ ಮೆರವಣಿಗೆ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

fb img 17760768842577644866416684974320 ನಾಳೆ ಹೊಸನಗರಕ್ಕೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಪುರ ಪ್ರವೇಶ

ನಂತರ ಸಂಜೆ 5 ಗಂಟೆಯವರೆಗೆ ದೇವಾಲಯದಲ್ಲಿ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಪ್ರಸಾದ ವಿತರಣೆ ನಡೆಯಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳ ಆಶೀರ್ವಾದ ಹಾಗೂ ಪ್ರಸಾದವನ್ನು ಪಡೆದುಕೊಳ್ಳುವಂತೆ ದೇವಾಲಯ ಸಮಿತಿ ಮನವಿ ಮಾಡಿದೆ.

img 20260325 wa00265047188725376560765 ನಾಳೆ ಹೊಸನಗರಕ್ಕೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಪುರ ಪ್ರವೇಶ

Leave a Reply

Your email address will not be published. Required fields are marked *